ಬಂಗಾಲದ ಒಂದು ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಾರಿನಲ್ಲಿ ಹಾವು ಪತ್ತೆ !

  • ಊಟ ಸೇವಿಸಿ 30 ವಿದ್ಯಾರ್ಥಿಗಳು ಅಸ್ವಸ್ಥ !

  • ಪೋಷಕರಿಂದ ಮುಖ್ಯಾಧ್ಯಾಪಕರ ಮೇಲೆ ಹಲ್ಲೆ !

ಕೋಲಕಾತಾ (ಬಂಗಾಳ) – ಬಂಗಾಲದ ಬೀರಭೂಮ ಜಿಲ್ಲೆಯ ಮಯೂರೇಶ್ವರ ಪ್ರದೇಶದ ಒಂದು ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಿದ ಬಳಿಕ ಸುಮಾರು 30 ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಸಲಾಯಿತು. ಈ ಘಟನೆಯ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿದಾಗ ವಿದ್ಯಾರ್ಥಿಗಳಿಗೆ ನೀಡಲಾದ ಸಾರಿನಲ್ಲಿ ಹಾವು ಕಂಡು ಬಂದಿದೆ. ವಿದ್ಯಾರ್ಥಿಗಳಿಗಾಗಿ ತಯಾರಿಸಲಾದ ಈಊಟವನ್ನು ಶಾಲೆಯ ಒಬ್ಬ ನೌಕರನು ತಯಾರಿಸಿದ್ದನು. ಹಾವು ಕಂಡು ಬಂದಿರುವ ಮಾಹಿತಿ ದೊರೆಯುತ್ತಲೇ ವಿದ್ಯಾರ್ಥಿಗಳ ಪೋಷಕರು ಆಕ್ರೋಶಗೊಂಡು ಆಡಳಿತ ವರ್ಗದವರು ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆಂದು ಆರೋಪಿಸಿ ಶಾಲೆಯ ಮುಖ್ಯಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವರ ಬೈಕನ್ನೂ ಸಹ ಧ್ವಂಸಗೊಳಿಸಿದ್ದಾರೆ.

ಈ ಹಿಂದೆಯೂ ರಾಜ್ಯದ ಪೂರ್ವ ಮೇದಿನಿಪುರದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನದಲ್ಲಿ ಝಟಕಾ ಮಾಂಸ ನೀಡಿರುವುದರಿಂದ ಪೋಷಕರು ವಿರೋಧ ವ್ಯಕ್ತಪಡಿಸಿರುವುದು ಬಹಿರಂಗವಾಗಿತ್ತು.

ಸಂಪಾದಕೀಯ ನಿಲುವು

ವಿದ್ಯಾರ್ಥಿಗಳ ಜೀವದೊಂದಿಗೆ ಆಟವಾಡುವವರಿಗೆ ಕಠಿಣ ಶಿಕ್ಷೆಯಾಗಲೇ ಬೇಕು !