ಹಿಮ್ಮಡಿಯ ‘ಮೂಳೆಯ ಸಾಂದ್ರತೆಯನ್ನು ಅಳೆಯುವ ಪರೀಕ್ಷಣೆ (ಬೋನ್ ಮಿನರಲ್ ಡೆನಸಿಟಿ ಟೆಸ್ಟ್)’ ಫಲಿತಾಂಶದ ದೃಷ್ಟಿಯಿಂದ ನಿಷ್ಪ್ರಯೋಜಕ

ಆಧುನಿಕ ವೈದ್ಯ ಪಾಂಡುರಂಗ ಮರಾಠೆ

೧. ಹಿಮ್ಮಡಿಯ ‘ಮೂಳೆಯ ಸಾಂದ್ರತೆಯನ್ನು ಅಳೆಯುವ ಪರೀಕ್ಷಣೆ (ಬೋನ್ ಮಿನರಲ್ ಡೆನಸಿಟಿ ಟೆಸ್ಟ್)’ ಮತ್ತು ಅದರ ನಿಷ್ಕರ್ಷ

‘ಕಳೆದ ತಿಂಗಳಿನಲ್ಲಿ ಸನಾತನದ ಒಂದು ಆಶ್ರಮದಲ್ಲಿ ಒಂದು ಶಿಬಿರದ ಅಂತರ್ಗತ ಮೂಳೆಗಳ ಸಾಂದ್ರತೆಯನ್ನು ಅಳೆಯುವ ಪರೀಕ್ಷಣೆ ಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿ ರೋಗಿಯು ಒಂದು ಯಂತ್ರದಲ್ಲಿ ತನ್ನ ಕಾಲನ್ನು ಇಡಬೇಕಾಗುತ್ತದೆ. ಯಂತ್ರದಲ್ಲಿ ಕಾಲು ಇಟ್ಟಾಗ ಈ ಯಂತ್ರವು ವಿಶಿಷ್ಟ ಧ್ವನಿಲಹರಿಗಳ ಸಹಾಯದಿಂದ ಹಿಮ್ಮಡಿಯ ಮೂಳೆಯ ಸಾಂದ್ರತೆಯನ್ನು ಅಳೆಯುತ್ತದೆ. ಇದರಲ್ಲಿ ಅಂಕೆಗಳಲ್ಲಿ ಯಾವ ನಿಷ್ಕರ್ಷ ಬರುತ್ತದೆಯೋ ಅದಕ್ಕೆ ‘ಟಿ-ಸ್ಕೊರ್’ ಎಂದು ಹೇಳುತ್ತಾರೆ. ‘ಟಿ-ಸ್ಕೊರ್’ ಋಣಾತ್ಮಕ (ಮೈನಸ್) ಒಂದರವರೆಗೆ ಇದ್ದರೆ ಸಾಂದ್ರತೆ ಸಾಮಾನ್ಯ (ನಾರ್ಮಲ್) ಎಂದು ತಿಳಿಯಲಾಗುತ್ತದೆ. ‘ಟಿ-ಸ್ಕೊರ್’ ಋಣಾತ್ಮಕ ೧.೧ ರಿಂದ ಋಣಾತ್ಮಕ ೨.೫ ಇದ್ದರೆ, ‘ಮೂಳೆಗಳು ದುರ್ಬಲಗೊಂಡಿದೆ’ ಎಂಬ ನಿಷ್ಕರ್ಷ ತೆಗೆಯಲಾಗುತ್ತದೆ. ಇದಕ್ಕೆ ‘ಆಸ್ಟಿಯೋಪಿನಿಯಾ’ ಎಂದು ಹೇಳುತ್ತಾರೆ. ‘ಟಿ-ಸ್ಕೊರ್’ ಋಣಾತ್ಮಕ ೨.೬ ಮತ್ತು ಅದರ ಮುಂದೆ ಇದ್ದರೆ, ಮೂಳೆಗಳು ಟೊಳ್ಳಾಗಿವೆ’ ಎಂಬ ನಿಷ್ಕರ್ಷವನ್ನು ತೆಗೆಯಲಾಗುತ್ತದೆ. ಇದಕ್ಕೆ ‘ಆಸ್ಟಿಯೋಪೊರೊಸಿಸ್’ ಎಂದು ಹೇಳುತ್ತಾರೆ.

೨. ಪರೀಕ್ಷಣೆಯಲ್ಲಿ ಅನಪೇಕ್ಷಿತ ನಿಷ್ಕರ್ಷ ಬಂದಿರುವ ಅನುಭವ ಬರುವುದು

ಈ ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳ ‘ಟಿ-ಸ್ಕೋರ್’ ನೋಡಿದಾಗ, ಯಾವ ರೋಗಿಗಳ ಮೂಳೆಗಳು ಟೊಳ್ಳಾಗಿರುವುದು ನಿಶ್ಚಿತವಿತ್ತೋ ಅವರ ಪೈಕಿ ಕೆಲವರ ‘ಟಿ-ಸ್ಕೊರ್’ ಚೆನ್ನಾಗಿತ್ತು (Normal) ಮತ್ತು ಯಾವ ರೋಗಿಗಳು ದಷ್ಟಪುಷ್ಟರಾಗಿದ್ದರೋ, ಅವರ ಪೈಕಿ ಕೆಲವರು ‘ಟಿ-ಸ್ಕೊರ್’ ‘ಆಸ್ಟಿಯೋಪಿನಿಯಾ’ ಈ ಗುಂಪಿಗೆ ಸೇರಿದ್ದಾರೆ ಎಂದು ಗಮನಕ್ಕೆ ಬಂದಿತು. ಈ ರೀತಿಯ ಅನಪೇಕ್ಷಿತ ನಿಷ್ಕರ್ಷ ಬಂದುದರಿಂದ ಆಧುನಿಕ ವೈದ್ಯಕೀಯಶಾಸ್ತ್ರದ ಅಸ್ಥಿರೋಗ ತಜ್ಞರಿಗೆ ಈ ಬಗ್ಗೆ ಕೇಳಿದಾಗ ಅವರು ಮುಂದಿನ ಅಂಶಗಳನ್ನು ಹೇಳಿದರು.

೩. ಆಧುನಿಕ ವೈದ್ಯಕೀಯಶಾಸ್ತ್ರದ ಅಸ್ಥಿರೋಗ ತಜ್ಞರು ನೀಡಿದ ಮಾಹಿತಿ

ಹಿಮ್ಮಡಿಯ ಮೂಳೆಯ ಸಾಂದ್ರತೆಯನ್ನು ಅಳೆದಾಗ ಯಾವ ‘ಟಿ-ಸ್ಕೋರ್’ ತೆಗೆಯಲಾಗುತ್ತದೆಯೋ, ಅವುಗಳಲ್ಲಿನ ನಿಷ್ಕರ್ಷ ತಪ್ಪಾಗಿರುವ ಪ್ರಮಾಣ ಹೆಚ್ಚಿರುತ್ತದೆ. ಅವುಗಳಲ್ಲಿ ಯಾವುದು ಸರಿ ಇದೆ ಮತ್ತು ಸರಿ ಇಲ್ಲ ಎಂದು ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ. ಆದುದರಿಂದ ಅವುಗಳ ಪರಿಹಾರದ ದೃಷ್ಟಿಯಿಂದ ಉಪಯೋಗವಾಗುವುದಿಲ್ಲ. ಮೂಳೆಗಳ ಸಾಂದ್ರತೆಯನ್ನು ಅಳೆಯಲು ಕ್ಷ-ಕಿರಣಗಳ ಸಹಾಯದಿಂದ ‘ಡೆಕ್ಸಾ ಸ್ಕ್ಯಾನ್’ (Dual-energy x-ray Absorptiometry) ಎಂಬ ಹೆಸರಿನ ಪರೀಕ್ಷಣೆಯನ್ನು ಮಾಡಲಾಗುತ್ತದೆ. ಅದರಲ್ಲಿ ನಿಶ್ಚಿತ ಸಾಂದ್ರತೆ ಗೊತ್ತಾಗುತ್ತದೆ; ಆದರೆ ಈ ಪರೀಕ್ಷಣೆಯನ್ನು ವೈದ್ಯಕೀಯಶಾಸ್ತ್ರದ ತಜ್ಞರು ಹೇಳಿದರೆ ಮಾತ್ರ ಮಾಡಬೇಕಿರುತ್ತದೆ.

೪. ಮೂಳೆಗಳ ಸಾಂದ್ರತೆಯನ್ನು ಅಳೆಯುವ ಪರೀಕ್ಷಣೆಯ ಮೇಲೆ ಅವಲಂಬಿಸಿರುವುದಕ್ಕಿಂತ ಎಲ್ಲರೂ ಪ್ರತಿದಿನ ಶರೀರವನ್ನು ಬಿಸಿಲಿಗೊಡ್ಡುವುದು ಮತ್ತು ವ್ಯಾಯಾಮ ಮಾಡುವುದು ಆವಶ್ಯಕ

ಇದರಿಂದ ‘ಸಮಾಜದಲ್ಲಿ ಹಿಮ್ಮಡಿಯ ಮೂಳೆಯ ಸಾಂದ್ರತೆಯನ್ನು ಅಳೆಯುವ ಶಿಬಿರಗಳನ್ನು (ಬೋನ್ ಮಿನರಲ್ ಡೆನ್ಸಿಟಿ ಕ್ಯಾಂಪ್)’ ಆಯೋಜಿಸಲಾಗುತ್ತದೆ, ಇವು ರೋಗಿಯ ದೃಷ್ಟಿಯಿಂದ ಅದು ಯಾವುದೇ ಉಪಯೋಗಕ್ಕೆ ಬರುವುದಿಲ್ಲ’ ಎಂದು ಗಮನಕ್ಕೆ ಬಂದಿತು. ಆದುದರಿಂದ ಯಾರ ಪರೀಕ್ಷಣೆಯಾಗಿದೆಯೋ ಮತ್ತು ಯಾರ ‘ಟಿ-ಸ್ಕೊರ್’ ಋಣಾತ್ಮಕ ೧.೧ ಗಿಂತ ಕಡಿಮೆ ಇದ್ದರೆ, ಅವರು ‘ನನ್ನ ಮೂಳೆಗಳು ದುರ್ಬಲ ಅಥವಾ ಟೊಳ್ಳಾಗಿರಬಹುದು’ ಎಂಬ ಭಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ಅದರ ಬದಲು ಮೂಳೆಗಳ ಆರೋಗ್ಯ ಚೆನ್ನಾಗಿರಬೇಕು ಮತ್ತು ಮೂಳೆಗಳು ಟೊಳ್ಳಾಗಬಾರದೆಂದು ಪ್ರತಿಯೊಬ್ಬರು ಇಡಿ ದಿನದಲ್ಲಿ ಕಡಿಮೆಪಕ್ಷ ೧೫ ನಿಮಿಷಗಳ ಕಾಲ ಬಿಸಿಲಿಗೆ ಮೈಯೊಡ್ಡಬೇಕು, ಹಾಗೆಯೇ ನಿಯಮಿತ ವ್ಯಾಯಾಮ ಮಾಡಬೇಕು.’

– ಆಧುನಿಕ ವೈದ್ಯ ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೧೨.೨೦೨೨)