ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ್

‘ಹಸಿವನ್ನು ಸಹಿಸಲು ಸಾಧ್ಯವಾಗುವುದು’ ಇದು ಆರೋಗ್ಯದ ಒಂದು ಲಕ್ಷಣ !

‘ಹೆಚ್ಚಿನವರು ತಮಗೆ ಹಸಿವನ್ನು ಸಹಿಸಲು ಸಾಧ್ಯವಾಗುವುದಿಲ್ಲವೆಂದು ಹೇಳುತ್ತಾರೆ. ತಿನ್ನುವ ಸಮಯವಾದ ಕೂಡಲೇ ತಿನ್ನಬೇಕಾಗುತ್ತದೆ; ಆದರೆ ಇದು ಶಾರೀರಿಕ ಕ್ಷಮತೆಯು ಕಡಿಮೆ ಇರುವುದರ ಲಕ್ಷಣವಾಗಿದೆ ಎಂಬುದನ್ನು ಗಮನಿಸಬೇಕು. ಹಸಿವನ್ನು ಸಹಿಸುವ ಕ್ಷಮತೆಯನ್ನು ಬೆಳೆಸಲು ಆಹಾರದ ಒಟ್ಟು ಸಮಯವನ್ನು ಕ್ರಮೇಣ ಕಡಿಮೆ ಮಾಡಿ ೨ ಸಲ ಆಹಾರವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು.’

ಬೆಳಗ್ಗೆ ೮ ರಿಂದ ೯ ಇದು ವ್ಯಾಯಾಮ ಮಾಡಲು ಎಲ್ಲಕ್ಕಿಂತ ಯೋಗ್ಯ ಸಮಯ !

‘ಬ್ರಾಹ್ಮಿಮುಹೂರ್ತದಲ್ಲಿ (ಮುಂಜಾನೆ ೪ ರಿಂದ ೬ ಈ ಸಮಯದಲ್ಲಿ) ಎದ್ದು ವ್ಯಾಯಾಮವನ್ನು ಮಾಡುವುದಕ್ಕಿಂತ ಈ ಅವಧಿಯಲ್ಲಿ ಮನಸ್ಸು ಮತ್ತು ಬುದ್ಧಿಯೊಂದಿಗೆ ಸಂಬಂಧ ಪಟ್ಟಿರುವ ನಾಮಜಪ, ವಾಚನ, ಬರವಣಿಗೆ ಮೊದಲಾದ ಕೆಲಸಗಳನ್ನು ಮಾಡಬೇಕು. ಈ ಅವಧಿಯಲ್ಲಿ ವಾತಾವರಣದಲ್ಲಿ ಸತ್ತ್ವಗುಣವು ಹೆಚ್ಚು ಪ್ರಮಾಣದಲ್ಲಿರುತ್ತದೆ. ಇದರ ಲಾಭವನ್ನು ಪಡೆಯಬೇಕು. ವ್ಯಾಯಾಮವು ರಜೋಗುಣಪ್ರಧಾನವಾದ ಕೃತಿಯಾಗಿದೆ. ಆದುದರಿಂದ ವ್ಯಾಯಾಮವನ್ನು ಮಾಡುವುದಾದರೆ ಅದನ್ನು ಬೆಳಗ್ಗೆ ಸೂರ್ಯೋದಯವಾದ ನಂತರ ಮಾಡಬೇಕು. ಬೆಳಗ್ಗೆ ೮ ರಿಂದ ೯ ಇದು ವ್ಯಾಯಾಮವನ್ನು ಮಾಡಲು ಎಲ್ಲಕ್ಕಿಂತ ಯೋಗ್ಯ ಸಮಯವಾಗಿದೆ. ಈ ಸಮಯದಲ್ಲಿ ಬಯಲು ಜಾಗದಲ್ಲಿ ವ್ಯಾಯಾಮವನ್ನು ಮಾಡಿದರೆ ಮೈ ಮೇಲೆ ಬಿಸಿಲು ಬಿದ್ದು ಶರೀರದಲ್ಲಿ ‘ಡಿ’ ಜೀವಸತ್ವವು ತಯಾರಾಗುವ ಪ್ರಕ್ರಿಯೆಯೂ ಆರಂಭವಾಗುತ್ತದೆ. ಈ ಸಮಯದಲ್ಲಿ ವ್ಯಾಯಾಮವನ್ನು ಮಾಡಲು ಸಾಧ್ಯವಾಗದಿದ್ದರೆ ತಮ್ಮ ಅನುಕೂಲಕ್ಕೆ ಅನುಗುಣವಾಗಿ ಯಾವುದೇ ಸಮಯದಲ್ಲಿ ವ್ಯಾಯಾಮವನ್ನು ಮಾಡಬಹುದು.’

ಹಲ್ಲುಗಳನ್ನು ನಿಧಾನವಾಗಿ ಉಜ್ಜಬೇಕು !

‘ಕೆಲವರು ಬ್ರಶ್‌ನಿಂದ ತುಂಬಾ ಜೋರಾಗಿ ಹಲ್ಲುಜ್ಜುತ್ತಾರೆ. ಹೀಗೆ ಮಾಡಬಾರದು. ಜೋರಾಗಿ ಹಲ್ಲುಜ್ಜುವುದರಿಂದ ಹಲ್ಲುಗಳ ಹೊರಗಿನ ಆವರಣ (ಇದಕ್ಕೆ ಆಂಗ್ಲಭಾಷೆಯಲ್ಲಿ ‘ಏನಾಮಲ್’ ಎನ್ನುತ್ತಾರೆ) ಇಲ್ಲವಾಗುವ ಸಾಧ್ಯತೆಯಿರುತ್ತದೆ. ಈ ಆವರಣವು ಹೊರಟು ಹೋದರೆ ಹಲ್ಲುನೋವು, ಜುಮ್ಮೆನ್ನುವುದು (ಸಂವೇದನೆ), ಹುಳುಕಾಗುವುದು ಇತ್ಯಾದಿ ತೊಂದರೆಗಳು ಪ್ರಾರಂಭವಾಗುತ್ತವೆ. ಹಲ್ಲಿನ ಸಂದುಗಳಲ್ಲಿ ಸಿಲುಕಿರುವ ಆಹಾರದ ಕಣಗಳು ಹೊರಹೋಗಲು ಬ್ರಶ್‌ನ ಸಹಾಯದಿಂದ ನಿಧಾನವಾಗಿ ಹಲ್ಲುಜ್ಜಬೇಕು.’

ಬಿಸಿನೀರಿನಿಂದ ತಲೆಸ್ನಾನ ಮಾಡುವುದೇ ಕೂದಲುಗಳು ಉದುರುವಿಕೆಯ ಹಿಂದಿನ ಒಂದು ಕಾರಣ

‘ಸ್ನಾನವನ್ನು ಮಾಡುವಾಗ ತಲೆಗೆ ಬಿಸಿ ನೀರು ಹಾಕಿಕೊಳ್ಳುವುದರಿಂದ ಕೂದಲುಗಳ ಮೂಲ(ಬೇರು)ಗಳ ಶಕ್ತಿಯು ಕಡಿಮೆಯಾಗುತ್ತದೆ. ಅದರಿಂದ ಕೂದಲು ಉದುರುತ್ತವೆ. ಕೂದಲು ಉದುರಬಾರದೆಂದು ತಲೆಗೆ ಬಿಸಿ ನೀರನ್ನು ಹಾಕದೇ ಉಗುರು ಬೆಚ್ಚ ನೀರನ್ನು ಹಾಕಿಕೊಳ್ಳಬೇಕು. ಬಿಸಿ ನೀರು ಶಕ್ತಿ ವರ್ಧಕವಾಗಿರುವುದರಿಂದ ಸ್ನಾನದ ಸಮಯದಲ್ಲಿ ಕುತ್ತಿಗೆಯ ಕೆಳಗಿನ ಭಾಗಕ್ಕಾಗಿ ಅಂದರೆ ಭುಜದ ಕೆಳಗಿನಿಂದ ಬಿಸಿ ನೀರನ್ನು ಹಾಕಿಕೊಳ್ಳಲು ಯಾವ ತೊಂದರೆ ಇಲ್ಲ’,

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೨.೨೦೨೨)

‘ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ’ ಈ ಲೇಖನಮಾಲೆಯಲ್ಲಿ ಕೊಟ್ಟಿರುವಂತೆ ಕೃತಿಯನ್ನು ಮಾಡಿ ಬಂದ ಅನುಭವವನ್ನು ತಿಳಿಸಲು ಅಥವಾ ಈ ಕುರಿತು ಏನಾದರೂ ತಿಳಿಸುವುದಿದ್ದರೆ

ಸಂಪರ್ಕದ ವಿಳಾಸ  –

ವೈದ್ಯ ಮೇಘರಾಜ ಪರಾಡಕರ

ವಿಳಾಸ : ೨೪/ಬ, ಸನಾತನ ಆಶ್ರಮ, ರಾಮನಾಥಿ, ಫೊಂಡಾ, ಗೋವಾ. ಪಿನ್ – ೪೦೩೪೦೧

ವಿ ಅಂಚೆ : ayurve[email protected]