ಶೀತದ ಪರಿಣಾಮ ಎಂದು ತಜ್ಞರು ಅಭಿಪ್ರಾಯ !
ಕಾನಪುರ (ಉತ್ತರ ಪ್ರದೇಶ) – ಕಳೆದ ೯ ದಿನಗಳಲ್ಲಿ ೧೩೦ ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಲ್ಲಿ ಪ್ರತಿದಿನ ಒಂದರಿಂದ ಒಂದೂವರೆ ಸಾವಿರ ರೋಗಿಗಳು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಆದ್ದರಿಂದ ಆಸ್ಪತ್ರೆಗಳು ತುಂಬಿ ಕುಳಿತುಕೊಳ್ಳಲು ಸ್ಥಳವಿಲ್ಲ. ಲಕ್ಷ್ಮಣಪುರಿಯ ಕೆ.ಜಿ.ಎಂ.ಯು.ನ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಅಕ್ಷಯ ಪ್ರಧಾನ ಇವರು, ಶೀತದ ದಿನಗಳಲ್ಲಿ ಹೃದ್ರೋಗದ ಅಪಾಯವು ವಯಸ್ಸಾದವರಿಗೆ ಸೀಮಿತವಾಗಿಲ್ಲ. ಚಿಕ್ಕ ಮಕ್ಕಳು ಸಹ ಹೃದಯಾಘಾತಕ್ಕೆ ಒಳಗಾಗುತ್ತಿರುವ ಹಲವಾರು ಪ್ರಕರಣಗಳಿವೆ. ಇತ್ತೀಚೆಗೆ ಯಾವುದೇ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸಬಹುದು. ಆದ್ದರಿಂದ, ಚಳಿಗಾಲದಲ್ಲಿ ಅಗತ್ಯ ಕಾಳಜಿ ವಹಿಸಬೇಕು ಎಂದು ಹೇಳಿದರು.
कानपुर के अलावा प्रदेश की राजधानी लखनऊ में भी हार्ट पेशेंट बढ़े हैं. https://t.co/oUBql26WFx
— AajTak (@aajtak) January 11, 2023
ಕಾನಪುರದಲ್ಲಿ ಎಲ್.ಪಿ.ಎಸ್. ಹೃದ್ರೋಗ ಕೇಂದ್ರದ ನಿರ್ದೇಶಕ ಡಾ. ವಿಜಯ ಕೃಷ್ಣ ಇವರು, ಆಸ್ಪತ್ರೆಗಳಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಹೆಚ್ಚಾಗಿದೆ. ಈ ಅಂಕಿ ಅಂಶಗಳಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಇದುವರೆಗೆ ಇಷ್ಟೊಂದು ಸಾವುಗಳು ಸಂಭವಿಸಿರಲಿಲ್ಲ. ಇದು ಕರೋನಾ ನಂತರದ ಪರಿಣಾಮ ಮತ್ತು ಶೀತ ಇವುಗಳ ಮಾರಕ ಮಿಶ್ರಣವಾಗುತ್ತಿದೆ ಎಂದು ಹೇಳಿದರು.