ಪ್ರಯಾಗರಾಜ (ಉತ್ತರಪ್ರದೇಶ) – ಶ್ರೀರಾಮನವಮಿ ದಿನದಂದು ನಡೆದ ಮೆರವಣಿಗೆಯ ಸಮಯದಲ್ಲಿ ಸಿಕಂದರ್ ಪ್ರದೇಶದಲ್ಲಿರುವ ಸಲಾಲ್ ಮಸೂದ್ ಗಾಜಿ ದರ್ಗಾದ ಛಾವಣಿಯ ಮೇಲೆ ಹತ್ತಿ ಕೆಲವು ಜನರು ಭಗವಾಧ್ವಜವನ್ನು ಹಾರಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಸದ್ಯ ದರ್ಗಾದ ಹೊರಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಲಾಲ್ ಮಸೂದ್ ಗಾಜಿ ಭಾರತದ ಮೇಲೆ ದಾಳಿ ಮಾಡಿದ ಮೊಹಮ್ಮದ್ ಗಜ್ನಿಯ ಸೇನಾಧಿಪತಿಯಾಗಿದ್ದನು. ಆತನ ಹೆಸರಿನಲ್ಲಿ ಇಲ್ಲಿ ಅನೇಕ ಶತಮಾನಗಳಿಂದ ಉತ್ಸವವನ್ನು ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದ್ದರು.
ದರ್ಗಾವನ್ನು ತೆರವುಗೊಳಿಸಿ ! – ಹಿಂದೂಗಳ ಬೇಡಿಕೆ
ಕರಣಿ ಸೇನೆಯ ಮಾಜಿ ಪ್ರದೇಶಾಧ್ಯಕ್ಷ ಮಾನೇಂದ್ರ ಪ್ರತಾಪ ಸಿಂಗ ನೇತೃತ್ವದಲ್ಲಿ ಜನರು ಇಲ್ಲಿ ಭಗವಾಧ್ವಜವನ್ನು ಹಾರಿಸಿದರು. ಈ ಬಗ್ಗೆ ಮಾನೇಂದ್ರ ಮಾತನಾಡಿ, ಸಲಾರ ಮಸೂದ್ ಗಾಜಿ ಒಬ್ಬ ಆಕ್ರಮಣಕಾರನಾಗಿದ್ದನು. ಅಂತಹ ಪರಿಸ್ಥಿತಿಯಲ್ಲಿ ಪ್ರಯಾಗರಾಜ ಈ ತೀರ್ಥಕ್ಷೇತ್ರದಲ್ಲಿ ಅವರ ಯಾವುದೇ ದರ್ಗಾ ಇರಬಾರದು. ದರ್ಗಾವನ್ನು ತಕ್ಷಣ ನೆಲಸಮ ಮಾಡಬೇಕು. ಆ ಸ್ಥಳವನ್ನು ಹಿಂದೂಗಳಿಗೆ ಪೂಜೆಗೆ ವಹಿಸಬೇಕು ಎಂದು ಹೇಳಿದರು.
ಹಿಂದೂ ದೇವಸ್ಥಾನಗಳನ್ನು ನಿರ್ಮಿಸಬೇಕು! – ಮಹಾರಾಜ ಸುಹೇಲದೇವ್ ಸನ್ಮಾನ್ ಸುರಕ್ಷಾ ಮಂಚ್ ಯಿಂದ ಆಗ್ರಹ
ಮಹಾರಾಜ ಸುಹೇಲದೇವ್ ಸನ್ಮಾನ್ ಸುರಕ್ಷಾ ಮಂಚ್ ದರ್ಗಾದ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಅದರಲ್ಲಿ ತೀರ್ಥರಾಜ ಪ್ರಯಾಗ್ರಾಜ್‌ನ ಪವಿತ್ರ ಭೂಮಿಯಲ್ಲಿ ಬಹರಿಯಾದ ಸಿಕಂದರದಲ್ಲಿ ಗಾಜಿ ಮಿಯಾನ್ (ಸೈಯದ್ ಸಲಾಲ್ ಗಾಜಿ) ನ ಅಕ್ರಮ ಗೋರಿಯನ್ನು ನಿರ್ಮಿಸಲಾಗಿದೆ. ಗಾಜಿ ಹಿಂದೂಗಳ ಹಂತಕ ಮತ್ತು ಆಕ್ರಮಣಕಾರನಾಗಿದ್ದನು. ಸಿಕಂದರಕ್ಕೆ ಅವನು ಎಂದಿಗೂ ಬಂದಿಲ್ಲ. ಆದರೂ ವಕ್ಫ್ ಮಂಡಳಿಯು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಆತನ ಗೋರಿಯನ್ನು ನಿರ್ಮಿಸಿದೆ. ಹಿಂದೆ ಇಲ್ಲಿ ಶಿವಕಂದ್ರ ವಾಲೆ ಮಹಾದೇವ ಮತ್ತು ಸತಿ ಬಡೆ ಪುರುಖ್ ದೇವಾಲಯವಿತ್ತು. ಅಲ್ಲಿ ಮತ್ತೆ ದೇವಾಲಯವನ್ನು ನಿರ್ಮಿಸಿ ಭಗವಾನ್ ಶಿವ, ಸತಿ ಮತ್ತು ಬಡೆ ಪರಿಹಾರಜಿಯವರನ್ನು ಪೂಜಿಸಬೇಕು. ಈ ಗಾಜಿಯನ್ನು ಮಹಾರಾಜ ಸುಹೇಲದೇವ್ ಕೊಂದರು. ಹಾಗಾಗಿ ಅವರ ಹೆಸರಿನಲ್ಲಿ ಅಲ್ಲಿ ಉದ್ಯಾನವನವನ್ನು ನಿರ್ಮಿಸಬೇಕು, ಎಂದು ಹೇಳಲಾಗಿದೆ.