ತ್ರ್ಯಂಬಕೇಶ್ವರ (ನಾಸಿಕ) ಇಲ್ಲಿನ ಆನಂದ ಅಖಾಡದ ಸ್ವಾಮಿ ಶಿವಜ್ಞಾನಾನಂದ ಸರಸ್ವತಿ ಮಹಾರಾಜ ಅವರಿಂದ ದೇವದ (ಪನವೇಲ)ದ ಸನಾತನ ಆಶ್ರಮಕ್ಕೆ ಭೇಟಿ!

ದೇವದ (ಪನವೇಲ), ಏಪ್ರಿಲ 8 (ಸುದ್ದಿ) – ಆಶ್ರಮಕ್ಕೆ ಬಂದ ನಂತರ ನನಗೆ ಸಾಧಕರ ದರ್ಶನವಾಯಿತು. ಸಾಧಕರ ದರ್ಶನವೆಂದರೆ ದಿವ್ಯ ಆತ್ಮದ ದರ್ಶನವಾಗಿದೆ. ನಾವು ಯಾತ್ರೆಗೆ ಹೋದಂತೆ, ಜೀವನವೂ ಒಂದು ಯಾತ್ರೆಯೇ ಆಗಿದೆ. ಜೀವನದಲ್ಲಿ ಭಾಗ್ಯಕ್ಕೆ ಶೇ. 5 ರಷ್ಟು, ಕರ್ಮಕ್ಕೆ ಶೇ 20 ರಿಂದ 25 ರಷ್ಟು ಮತ್ತು ಸಂಕಲ್ಪಕ್ಕೆ ಶೇ. 70 ರಿಂದ ಶೇ. 75 ರಷ್ಟು ಮಹತ್ವವಿದೆ. ಜೀವನದಲ್ಲಿ ಸಂಕಲ್ಪದಿಂದಲೇ ಎಲ್ಲ ಕಾರ್ಯಗಳು ನಡೆಯುತ್ತವೆ. ಯುವಕರು ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಬೇಕು ಎಂದು ತ್ರ್ಯಂಬಕೇಶ್ವರ (ನಾಸಿಕ) ಆನಂದ ಅಖಾಡದ ಸ್ವಾಮಿ ಶಿವಜ್ಞಾನಾನಂದ ಸರಸ್ವತಿ ಮಹಾರಾಜರು ಮಾರ್ಗದರ್ಶನ ಮಾಡಿದರು. ಅವರು ಇಲ್ಲಿನ ಸನಾತನ ಆಶ್ರಮಕ್ಕೆ ಏಪ್ರಿಲ್ 7 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ನ್ಯಾಯವಾದಿ ರಾಮ ನಾಕತಿ ಮತ್ತು ಶ್ರೀ. ಆನಂದ ಜಾಧವ ಕೂಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶೇ. 68 ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವಿನಾಯಕ ಆಗವೇಕರ ಅವರು ಶಾಲು, ಶ್ರೀಫಲ ಮತ್ತು ಉಡುಗೊರೆ ನೀಡಿ ಅವರನ್ನು ಸನ್ಮಾನಿಸಿದರು. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಪ್ರಕಟಿಸಿದ ‘ಧರ್ಮಶಿಕ್ಷಣ ಫಲಕ’, ‘ಹಿಂದೂ ರಾಷ್ಟ್ರ ಆಕ್ಷೇಪ ಮತ್ತು ಖಂಡನೆ’, ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ತೇಜಸ್ವಿ ವಿಚಾರಗಳು’, ‘ಹಲಾಲ್ ಜಿಹಾದ’ ಈ ಗ್ರಂಥಗಳನ್ನು ಸ್ವಾಮೀಜಿಯವರಿಗೆ ಉಡುಗೋರೆಯಾಗಿ ನೀಡಲಾಯಿತು. ಆಶ್ರಮದ ಸಾಧಕ ಶ್ರೀ. ಪುಷ್ಕರಾಜ ಜೋಶಿ ಅವರು ಆಶ್ರಮದಲ್ಲಿ ನಡೆಯುತ್ತಿರುವ ಎಲ್ಲ ಸೇವೆಗಳ ಬಗ್ಗೆ ಸ್ವಾಮೀಜಿಯವರಿಗೆ ತಿಳಿಸಿದರು. ಸ್ವಾಮೀಜಿಯವರು ಆಶ್ರಮದ ಎಲ್ಲ ಸೇವೆಗಳು ಮತ್ತು ಸನಾತನ ಸಂಸ್ಥೆಯ ಕಾರ್ಯಗಳ ಬಗ್ಗೆ ಕುತೂಹಲದಿಂದ ತಿಳಿದುಕೊಂಡರು.
ಆಶ್ರಮ ಮತ್ತು ಸಾಧಕರ ಕುರಿತು ಸ್ವಾಮಿ ಶಿವಜ್ಞಾನಾನಂದ ಸರಸ್ವತಿ ಮಹಾರಾಜ ಅವರ ಗೌರವೋದ್ಗಾರಆಶ್ರಮದ ವ್ಯವಸ್ಥೆ ಮತ್ತು ನಿಯೋಜನೆ ಉತ್ತಮ ಮತ್ತು ಅದ್ಭುತವಾಗಿದೆ. ನಿಮಗೆ ಇಂತಹ ಗುರುದೇವ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಸಿಕ್ಕಿರುವುದು ನಿಮ್ಮೆಲ್ಲರ ಭಾಗ್ಯ. ನೀವು ಈ ಸಾಧನಾ ಮಾರ್ಗಕ್ಕೆ ಬಂದಿದ್ದೀರಿ. ಆಶ್ರಮದ ಸ್ವಚ್ಛತೆ ನೋಡಿ ಸಂತೋಷವಾಯಿತು. |
ಸ್ವಾಮಿ ಶಿವಜ್ಞಾನಾನಂದ ಸರಸ್ವತಿ ಮಹಾರಾಜ ಅವರ ಪರಿಚಯ!ಹಸ್ತಸಾಮುದ್ರಿಕ ಶಾಸ್ತ್ರ, ವೈದಿಕ ಜ್ಯೋತಿಷ್ಯ ಶಾಸ್ತ್ರ, ಆಯುರ್ವೇದ ವಿಷಯಗಳಲ್ಲಿ ಸ್ವಾಮೀಜಿಯವರಿಗೆ ಅಧ್ಯಯನವಿದೆ. ಹಿಂದೂ ಧರ್ಮ ಕಾರ್ಯಕ್ಕಾಗಿ ಅವರು ವಿವಿಧ ರಾಜ್ಯಗಳಿಗೆ ಹೋಗುತ್ತಾರೆ ಹಾಗೂ ಯುವ ಪೀಳಿಗೆಯ ಪ್ರಬೋಧನೆಯ ಕಾರ್ಯವನ್ನೂ ಮಾಡುತ್ತಾರೆ. |