ಸೈಬರ್ ಅಪರಾಧ ಮತ್ತು ಅದರ ಬಗ್ಗೆ ವಹಿಸಬೇಕಾದ ಕಾಳಜಿ !

ಸೈಬರ್ ಅಪರಾಧಗಳಿಗೆ ಸಂಬಂಧಿತ ಸಾಂಕೇತಿಕ ಛಾಯಾಚಿತ್ರ

(ಟಿಪ್ಪಣಿ : ‘ಸೈಬರ್ ಅಪರಾಧ’ವೆಂದರೆ ಗಣಕಯಂತ್ರ ಮತ್ತು ಇಂಟರ್‌ನೆಟ್ ಉಪಯೋಗಿಸಿ ಮಾಡುವ ಅಪರಾಧ !)

‘ಪ್ರತಿದಿನ ಮತ್ತು ಪ್ರತಿಯೊಂದು ಸ್ಥಳದಲ್ಲಿ ಸೈಬರ್ ಅಪರಾಧಗಳ ಹೆಚ್ಚುತ್ತಿರುವ ಸಂಖ್ಯೆಯು ಕೇವಲ ಚಿಂತಾಜನಕ ಮಾತ್ರವಲ್ಲದೇ ದುಃಖದಾಯಕವೂ ಆಗಿದೆ. ಶ್ರೀಮಂತರು ಅಥವಾ ಬಡವರು, ವಿದ್ಯಾವಂತರು ಅಥವಾ ಅವಿದ್ಯಾವಂತರು, ಪುರುಷರು ಮತ್ತು ಸ್ತ್ರೀಯರು, ವೃದ್ಧರು ಹಾಗೂ ಯುವಕರು ಯಾರೇ ಇರಲಿ, ಹೆಚ್ಚುಕಡಿಮೆ ಪ್ರತಿಯೊಬ್ಬರೂ ಇದರಲ್ಲಿ ಮೋಸ ಹೋಗುತ್ತಿದ್ದಾರೆ. ಇದಕ್ಕೆ ಯಾರೂ ಅಪವಾದವಲ್ಲ. ಅಪರಾಧಿಗಳು ಯಾವಾಗಲೂ ಅದೃಶ್ಯರಾಗಿರುತ್ತಾರೆ ಹಾಗೂ ಕಾಣಿಸಿದರೂ ಅವರ ಪರಿಚಯ ನಕಲಿ ಆಗಿರುತ್ತದೆ. ಮೋಸಹೋಗುವವರು ಪ್ರಾಮಾಣಿಕರು, ಮುಗ್ಧರಾಗಿರುತ್ತಾರೆ. ಅವರು ಸಹಜವಾಗಿ ಇಂತಹ ಯುಕ್ತಿಗಳಿಗೆ ಬಲಿಯಾಗುತ್ತಾರೆ. ಈ ಸಂತ್ರಸ್ತರು ಹೆಚ್ಚಾಗಿ ನಾಚಿಕೆ ಅಥವಾ ಭಯದಿಂದ ಹಾಗೂ ಜಾಗರೂಕತೆಯ ಅಭಾವದಿಂದಾಗಿ ಈ ಅಪರಾಧಗಳ ಬಗ್ಗೆ ದೂರು ನೀಡುವುದಿಲ್ಲ. ಅವರಿಗೆ ಮೋಸ ಆಗಿದೆಯೆಂದು ತಿಳಿಯುವಾಗ ಸಮಯ ಮೀರಿ ಹೋಗಿರುತ್ತದೆ ಹಾಗೂ ಅಷ್ಟರವರೆಗೆ ವ್ಯವಹಾರ ಪೂರ್ಣಗೊಂಡು ಹಸ್ತಾಂತರವಾದ ಮೊತ್ತವನ್ನು ಅಪರಾಧಿ ಕಬಳಿಸಿರು ತ್ತಾನೆ. ೨೬_೧೦ರ ಸಂಚಿಕೆಯಲ್ಲಿ ಮುದ್ರಣವಾದ ಲೇಖನದಲ್ಲಿ ನಾವು ಸಂತ್ರಸ್ತರನ್ನು ಮೋಸಗೊಳಿಸಲು ಸೈಬರ್ ಅಪರಾಧಿಗಳಿಂದ ವಿವಿಧ ತಂತ್ರಗಳ ಪ್ರಯೋಗ, ಸಂತ್ರಸ್ತ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಪಡೆಯಲು ಸೈಬರ್ ಅಪರಾಧಿಯಿಂದ ವಿವಿಧ ಪ್ರಯತ್ನ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಭಾರತೀಯ ಬ್ಯಾಂಕ್‌ಗಳಿಂದ ಗ್ರಾಹಕರಿಗೆ ಸೂಚನೆ’, ಇತ್ಯಾದಿ ವಿಷಯಗಳನ್ನು ಓದಿದೆವು. ಇಂದು ಈ ಲೇಖನದ ಕೊನೆಯ ಭಾಗವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಶ್ರೀ. ಪ್ರವೀಣ ದೀಕ್ಷಿತ

೬. ಜಾಲತಾಣಗಳಲ್ಲಿರುವ ಸೈಬರ್ ಅಪರಾಧಿಗಳ ಶ್ರೇಣಿ

ಅ. ‘ಕ್ರಿಪ್ಟೋ ಕರೆನ್ಸಿ (ಭಾಸಮಾನ-ಚಲನ) ಅಪರಾಧ

ಆ. ಸೈಬರ್ ಜಿಹಾದ್

ಇ. ಗಣಕಯಂತ್ರ ವ್ಯವಸ್ಥೆಯನ್ನು ಹ್ಯಾಕ್ ಮಾಡುವುದು ಅಥವಾ ಕೆಡಿಸುವುದು

ಈ. ಆನ್‌ಲೈನ್ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದ ಅಪರಾಧ

ಈ ೧. ಪರಿಚಯವನ್ನು ಅಡಗಿಸಿ ಮೋಸಗೊಳಿಸುವುದು

ಈ ೨. ಸೈಬರ್ ಬುಲ್ಲಿಂಗ್ (ಗೂಂಡಾಗಿರಿ), ‘ಸ್ಟಾಕಿಂಗ್ (ಬೆದರಿಕೆಹಾಕುವುದು) ಅಥವಾ ಸೆಕ್ಟಿಂಗ್ (ಅಶ್ಲೀಲ ಚಿತ್ರಗಳನ್ನು ಕಳುಹಿಸುವುದು)

ಈ ೩. ನಮ್ಮ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನ ‘ಪಾಸ್‌ವರ್ಡ್’ ಅಥವಾ ಐ.ಡಿ. ತಿಳಿದುಕೊಳ್ಳಲು ನಿಮಗೆ ವಿ-ಅಂಚೆ ಪತ್ರ ಅಥವಾ ಸಂದೇಶ ಕಳುಹಿಸುವುದು.

ಉ. ನಕಲಿ ವಿ-ಅಂಚೆ ವಿಳಾಸ (ಇ-ಮೇಲ್)

ಊ. ವಿ-ಅಂಚೆಯ ಮೂಲಕ ಬೆದರಿಸುವುದು

ಎ. ಆನ್‌ಲೈನ್ ನೌಕರಿಯ ಮೋಸಗಾರಿಕೆ

ಏ. ಆನ್‌ಲೈನ್ ವೈವಾಹಿಕ ಮೋಸಗಾರಿಕೆಯ ಘಟನೆ

ಓ. ‘ಪ್ರೋಫೈಲ್ ಹ್ಯಾಕಿಂಗ್ (ಪರಿಚಯವನ್ನು ಕದಿಯುವುದು)

ಔ. ಕಾನೂನುಬಾಹಿರ ಕೃತ್ಯಗಳಿಗಾಗಿ ಬೆದರಿಕೆಯುಳ್ಳ ಭಾಷಣ

೭. ಮೋಸಗಾರಿಕೆಯನ್ನು ತಪ್ಪಿಸಲು ಜಾಗರೂಕತೆಯ ಉಪಾಯ

ಗಣಕಯಂತ್ರ, ಸಂಚಾರಿವಾಣಿ ಅಥವಾ ಇನ್ನಿತರ ಯಾವುದೇ ಇಲೆಕ್ಟ್ರಾನಿಕ್ ಉಪಕರಣದ ಮೂಲಕ ‘ಸೈಬರ್ ಸ್ಪೇಸನ್ನು ಉಪಯೋಗಿಸುವ ಪ್ರತಿಯೊಬ್ಬರೂ ಭಾರತದ ಅಥವಾ ವಿದೇಶದ ಅಜ್ಞಾತ ಸಂಚಾರಿವಾಣಿ ಕ್ರಮಾಂಕದಿಂದ ಅಥವಾ ಗಣಕೀಯ ವಿಳಾಸದಿಂದ (ವಿ-ಅಂಚೆಯಿಂದ) ಅಥವಾ ‘ವಿಡಿಯೋ ಕಾಲ್ ಮೂಲಕ ಬರುವ ಯಾವುದೇ ಸಂಪರ್ಕಗಳಿಗೆ ಪ್ರತಿಕ್ರಿಯೆ ನೀಡುವುದನ್ನು ಸಂಪೂರ್ಣ ನಿಲ್ಲಿಸಬೇಕು, ಎಂದು ಕರೆ ನೀಡಿ ನಾನು ಈ ಲೇಖನವನ್ನು ಮುಕ್ತಾಯಗೊಳಿಸುವೆನು. ಒಂದು ವೇಳೆ ನಿಮಗೆ ಪ್ರತಿಕ್ರಿಯೆ ನೀಡಲಿಕ್ಕಿದ್ದರೆ, ಮೊದಲು ಆ ವ್ಯಕ್ತಿಯ ವಿವರ, ಸಂಪರ್ಕ ಅಥವಾ ವಿ-ಅಂಚೆ ಪತ್ರವನ್ನು ಪರಿಶೀಲಿಸಿ ನೋಡಿ. ಸತತ ಜಾಗರೂಕರಾಗಿರುವುದರಿಂದಲೆ ನಿಮ್ಮ ಜೀವನ, ಹಣ ಹಾಗೂ ಪ್ರತಿಷ್ಠೆಯು ಹೆಚ್ಚುತ್ತಿರುವ ಸೈಬರ್ ಅಪರಾಧಿಗಳಿಂದ ರಕ್ಷಣೆಯಾಗಬಹುದು. ನಾನು ಭಾರತ ಸರಕಾರಕ್ಕೆ ವಿನಂತಿಸುವೆನು, ‘೨೪ ಗಂಟೆ ಉಪಲಬ್ಧವಿರುವ ಈ ‘ಪೋರ್ಟಲ್ (ಜಾಲತಾಣ) ಮತ್ತು ‘ಹೆಲ್ಪ್‌ಲೈನ್ ಉಪಯೋಗಿಸಲು ಸುಲಭಗೊಳಿಸಬೇಕು, ಅದರಿಂದ ಪ್ರತಿಯೊಬ್ಬರೂ ಅದನ್ನು ಅನುಕರಣೆ ಮಾಡಬಹುದು. ಆನ್‌ಲೈನ್ ಕಂಪನಿಗಳು, ಬ್ಯಾಂಕ್‌ಗಳು, ಹೂಡಿಕೆಯ ಕೇಂದ್ರಗಳ ಮೂಲಕ ಬಳಸುವ ವೈಯಕ್ತಿಕ ಮಾಹಿತಿಯ ಸುರಕ್ಷೆಯ ವಿಷಯದಲ್ಲಿಯೂ ಸರಕಾರ ನಿರ್ಧರಿಸ ಬೇಕು. ಮೋಸಗಾರರು ಈ ಮಾಹಿತಿಯನ್ನು ಸಹಜ ವಾಗಿ ಗಳಿಸಬಹುದು. ನಿಜವಾಗಿ ನೋಡಿದರೆ ಇದನ್ನು ತಡೆ ಗಟ್ಟಲು ಸರಕಾರ ಕಾನೂನು ಮಾಡಬೇಕು ಹಾಗೂ ಈ ಮಾಹಿತಿಯನ್ನು ಇತರರಿಗೆ ನೀಡುವವರ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳಬೇಕು.’ ಅನೇಕ ಪ್ರಗತಿ ಹೊಂದಿದ ದೇಶಗಳಲ್ಲಿ ಸೈಬರ್ ಅಪರಾಧಿಗಳಿಗೆ, ಅವರು ಎಲ್ಲಿಂದ ಕಾರ್ಯ ನಡೆಸುತ್ತಿರಬಹುದು ಎಂಬುದನ್ನು ನೇರವಾಗಿ ಹುಡುಕಲು ಹಾಗೂ ಹಿಡಿಯಲು ಸಕ್ಷಮ ವಾಗಿರುವ ಹೊಸ ತಾಂತ್ರಿಕ ಹೊಸಕಲ್ಪನೆಗಳ ಅಭ್ಯಾಸ ಮಾಡಲು ಪ್ರಯತ್ನಿಸುವ ಅವಶ್ಯಕೆಯಿದೆ.’

(ಮುಕ್ತಾಯ)

– ಶ್ರೀ. ಪ್ರವೀಣ ದೀಕ್ಷಿತ, ಮಾಜಿ ಪೊಲೀಸ್ ಮಹಾಸಂಚಾಲಕರು, ಮುಂಬಯಿ.

ಸೈಬರ್ ಅಪರಾಧವನ್ನು ದಾಖಲಿಸಲು ಸಹಾಯ ಮಾಡುವ ಜಾಲತಾಣಗಳು

ಅ. ಭಾರತ ಸರಕಾರ ೧೯೩೦ ಈ ಕ್ರಮಾಂಕದ ‘ಹೆಲ್ಪ್‌ಲೈನ್ ಆರಂಭಿಸಿದ್ದು ‘ಸೈಬರ್ ಕ್ರೈಮ್ಗೆ ಬಲಿಯಾದವರು https://www.cybercrime.gov.in ಈ ಜಾಲತಾಣವನ್ನು ಸಂಪರ್ಕಿಸ ಬೇಕು.

ಆ. ದೂರಸಂಚಾರ ಖಾತೆಯ ‘ಚಕ್ಷು ಈ ಹೆಸರಿನಲ್ಲಿ ‘ಪೋರ್ಟಲ್ ಇದೆ. ಇದರಲ್ಲಿ ಸಂಶಯಾಸ್ಪದ ಹಗರಣ ಹಾಗೂ ಕಳೆದ ೩೦ ದಿನಗಳಲ್ಲಿ ಬಂದಿರುವ ಆಗಂತುಕ ವ್ಯಾವಸಾಯಿಕ ಸಂವಾದಗಳ ಮಾಹಿತಿಯನ್ನು ನೀಡಬಹುದು. https://services. india.gov.in/service/detail/chakshu-report-suspected-fraud-communication

ಈ ಪೋರ್ಟಲ್ ನಿಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ನಿಮಗೆ ಇಂಟರ್‌ನೆಟ್ ಸೇವೆಯನ್ನು ನೀಡುವ ಕಂಪನಿಗಳು ಯಾವುವು, ಎಂಬುದನ್ನು ತಿಳಿಯಲು

(https://services.india.gov.in/service/service_url_) ಲಿಂಕ್ ಉಪಯೋಗಿಸಬಹುದು.

ನಿಮಗೆ ಬಂದಿರುವ ಭಾರತೀಯ ಕ್ರಮಾಂಕ ಇರುವ ಅಂತಾ ರಾಷ್ಟ್ರೀಯ ಕಾಲ್‌ನ ಮಾಹಿತಿಗಾಗಿ (https://services.india.gov.in/service/services_url_redirected? id=MjQOMDg= ಈ ಲಿಂಕ್ ಉಪಯುಕ್ತವಾಗಿದೆ.

ನಿಮ್ಮ ಹೆಸರಿನಲ್ಲಿ ನೀಡಿರುವ ಜೋಡಿಸುವ ಸಂಖ್ಯೆಯನ್ನು ತಿಳಿದುಕೊಳ್ಳಲು (https://services.india.gov.in/service/services_url_redirected?id=MjQwNTA= ಈ ಲಿಂಕ್ ಉಪ ಯೋಗಿಸಬಹುದು

ನಿಮ್ಮ ಐ.ಎಮ್.ಇ.ಐ. ಕ್ರಮಾಂಕವನ್ನು ಉಪಯೋಗಿಸಿ ಸಂಚಾರಿವಾಣಿಯನ್ನು ಪರಿಶೀಲಿಸಲು (https//services.india.gov.in/service/service_urlredirect?id=MjQwNDg=) ಲಿಂಕ್  ಉಪಯುಕ್ತವಾಗಿದೆ – ಶ್ರೀ. ಪ್ರವೀಣ ದೀಕ್ಷಿತ

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ

ಸೈಬರ್ ಅಪರಾಧಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕಾನೂನನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ದೃಷ್ಟಿಕೋನ ನೀಡಲು ಗೃಹಸಚಿವಾಲಯ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು (ಐ೪ಸಿ) ನವದೆಹಲಿಯಲ್ಲಿ ಸ್ಥಾಪಿಸಿದೆ. ದೇಶದ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ‘ನೋಡಲ್ ಪಾಯಿಂಟ್ (ಕೇಂದ್ರಬಿಂದು) ಆಗಿ ಕೆಲಸ ಮಾಡು ವುದು ಈ ಕೇಂದ್ರದ ಕಲ್ಪನೆಯಾಗಿದೆ. (https://i4c.mha.gov.in)

ಈ ಕೇಂದ್ರ ಸೈಬರ್ ಯೋಧನ ಸ್ವರೂಪದಲ್ಲಿ ಕಾನೂನಿನ ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ತರಬೇತಿ ನೀಡಿ ಜಾಗರೂಕತೆ ನಿರ್ಮಿಸುವುದಕ್ಕೆ ಸಂಬಂಧಿಸಿದೆ. ಈ ಕೇಂದ್ರ ಸೈಬರ್ ಅಪರಾಧಗಳ ವಿಷಯದಲ್ಲಿ ಸಾವಿರಾರು ಪೊಲೀಸ್ ಅಧಿಕಾರಿ ಗಳಿಗೆ ತರಬೇತಿ ನೀಡಿದೆ. ಇದು  ಸೈಬರ್ ಮಿತ್ರನ ಸ್ವರೂಪದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗರೂಕತೆಯ ಸಂದೇಶವನ್ನೂ ಹರಡುತ್ತದೆ. ಅದಕ್ಕನುಸಾರ ಸೈಬರ್ ಅಪರಾಧ ಗಳನ್ನು ತಡೆಗಟ್ಟುವ ಸುರಕ್ಷಿತ ಪದ್ಧತಿಯಲ್ಲಿ ಈ ಮುಂದಿನ ವಿಷಯಗಳ ಸಮಾವೇಶವಿದೆ.

೧. ಗಣಕಯಂತ್ರದಲ್ಲಿ ಬರುವ ವಿವಿಧ ಸೂಚನೆಗಳು (ಪಾಪ್‌ಅಪ್),  ಅಜ್ಞಾತ ಮೇಲ್ ಮತ್ತು ಲಿಂಕ್‌ಗಳನ್ನು ತಪ್ಪಿಸುವುದು

(https://i4c.mha.gov.in/#:-text=Avoid%20pop%2dups%2C%20unknow%20emails%20and%20and%20links)

೨. ಸುರಕ್ಷಿತ ಸಂಕೇತಾಂಕ (ಚಿಹ್ನೆಗಳು) ಹಾಗೂ ಪ್ರಮಾಣೀಕರಣ ವನ್ನು ಉಪಯೋಗಿಸಿರಿ

(https://i4c.mha.gov.in/#:-text=Use%20strong%password%20protection%20and%20authentication)

೩. ನಿಮ್ಮ ಮಾಹಿತಿಗಾಗಿ ಸುಧಾರಿತ ಪದ್ಧತಿ ಹಾಗೂ ಬ್ಯಾಕ್‌ಅಪ್ ಸ್ಥಾಪಿಸಿಕೊಳ್ಳಿ !

(https://i4c.mha.gov.in/#:-:text=install%20updates%20and20back%20up%20your%20files)

– ಶ್ರೀ. ಪ್ರವೀಣ ದೀಕ್ಷಿತ