Russia Shadow War : ರಷ್ಯಾದಿಂದ ಅಮೇರಿಕಾ ಮತ್ತು ಯುರೋಪ ವಿರುದ್ಧ ‘ಶ್ಯಾಡೋ ವಾರ್’ ಘೋಷಣೆ !

ವಾಷಿಂಗ್ಟನ – ಅಮೇರಿಕಾದ ‘ಸೆಂಟರ ಫಾರ ಸ್ಟ್ರಾಟೆಜಿಕ ಅಂಡ್ ಇಂಟರ್ನ್ಯಾಷನಲ ಸ್ಟಡೀಸ್’ (ಸಿ.ಎಸ್.ಐ.ಎಸ್.) ತನ್ನ ವರದಿಯಲ್ಲಿ, ಪ್ರಪಂಚದ ಒಂದು ದೊಡ್ಡ ಭಾಗವು ಪ್ರಸ್ತುತ ಯುದ್ಧದಲ್ಲಿ ಸಿಲುಕಿಕೊಂಡಿದೆ ಎಂದು ಹೇಳಿದೆ. ರಷ್ಯಾವು ಅಮೇರಿಕಾ ಮತ್ತು ಯುರೋಪ ವಿರುದ್ಧ ‘ಶ್ಯಾಡೋ ವಾರ್’ ಘೋಷಿಸಿದೆ ಎಂದು ಸಿ.ಎಸ್.ಐ.ಎಸ್ ಹೇಳಿದೆ. ರಷ್ಯಾವು ಅಮೇರಿಕಾ ಮತ್ತು ಯುರೋಪ ವಿರುದ್ಧ ಸೈಬರ್ ದಾಳಿಗಳು ಮತ್ತು ಬೇಹುಗಾರಿಕೆ ನಡೆಸುತ್ತಿದೆ. ಪಾಶ್ಚಿಮಾತ್ಯ ದೇಶಗಳಿಂದ ಉಕ್ರೇನಗೆ ಸಿಗುತ್ತಿರುವ ಸಹಾಯವನ್ನು ದುರ್ಬಲಗೊಳಿಸುವುದು ಇದರ ಉದ್ದೇಶವಾಗಿದೆ. ಒಂದು ಕಡೆ ನೇರ ಯುದ್ಧ ಮತ್ತು ಇನ್ನೊಂದು ಕಡೆ ‘ಶ್ಯಾಡೋ ವಾರ್’ ನಡೆಯುತ್ತಿದೆ ಎಂದು ಸಿ.ಎಸ್.ಐ.ಎಸ್ ವರದಿ ಹೇಳುತ್ತಿದೆ.

1. ಈ ವರದಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಯುರೋಪಿನಲ್ಲಿ ಸೈನಿಕ ನೆಲೆಗಳ ಮೇಲೆ ಸ್ಫೋಟಗಳು, ಸರಕಾರಿ ಇಮೇಲ್ ಗಳು ಹ್ಯಾಕ್ ಆಗುವುದು ಮತ್ತು ಸಮುದ್ರದೊಳಗಿನ ಕೇಬಲ್‌ಗಳು ತುಂಡಾಗುವಂತಹ ಘಟನೆಗಳು ಹೆಚ್ಚಾಗಿವೆ.

2. ರಷ್ಯಾ ಆರಂಭಿಸಿರುವ ‘ಶ್ಯಾಡೋ ವಾರ್’ ‘ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್’ (ನ್ಯಾಟೊ) ನ 29 ದೇಶಗಳು ಮತ್ತು ಜಾಗತಿಕ ಭದ್ರತೆಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಸಿ.ಎಸ್.ಐ.ಎಸ್ ಅಭಿಪ್ರಾಯಪಟ್ಟಿದೆ.

3. ರಷ್ಯಾ ಊರ್ಜೆ ಮತ್ತು ಸಾರಿಗೆ ವ್ಯವಸ್ಥೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಿದೆ. ಇದರಿಂದ ಉತ್ತರ ಅಮೇರಿಕಕ್ಕೆ ಸಂಪರ್ಕ ಹೊಂದಿದ ವ್ಯವಸ್ಥೆಗಳು ಅಪಾಯಕ್ಕೆ ಸಿಲುಕಬಹುದು.

‘ಶ್ಯಾಡೋ ವಾರ್’`(ನೆರಳು ಯುದ್ಧ?)  ಎಂದರೇನು? (ಬಾಕ್ಸ್)

‘ಶ್ಯಾಡೋ ವಾರ್’ ಎಂದರೆ ರಹಸ್ಯವಾಗಿ ನಡೆಸುವ ಸಶಸ್ತ್ರ ಸಂಘರ್ಷದ ಒಂದು ರೂಪ. ಇದರಲ್ಲಿ, ಅನೇಕ ಬಾರಿ ಶತ್ರು ರಾಷ್ಟ್ರಗಳು ನೇರವಾಗಿ ಪರಸ್ಪರ ಸೈನಿಕ ಸಂಘರ್ಷಕ್ಕೆ ಇಳಿಯುವ ಬದಲು ಸೈಬರ್ ದಾಳಿಗಳು, ಆರ್ಥಿಕ ನಿರ್ಬಂಧಗಳು ಅಥವಾ ರಹಸ್ಯ ಸೈನಿಕ ಕಾರ್ಯಾಚರಣೆಗಳ ಮೂಲಕ ಸಂಬಂಧಪಟ್ಟ ದೇಶವನ್ನು ನಾಶಮಾಡಲು ಪ್ರಯತ್ನಿಸುತ್ತವೆ.