೨೦೧೩ ಭಾಗ್ಯನಗರ ಬಾಂಬ್ ಸ್ಫೋಟ ಪ್ರಕರಣ: ೫ ಜಿಹಾದಿ ಭಯೋತ್ಪಾದಕರ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದ ತೆಲಂಗಾಣ ಉಚ್ಚ ನ್ಯಾಯಾಲಯ

ಭಾಗ್ಯನಗರ (ತೆಲಂಗಾಣ) – ಭಾರತವು ನಿಷೇಧಿಸಿದ ‘ಇಂಡಿಯನ ಮುಜಾಹಿದ್ದೀನ’ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ 5 ಭಯೋತ್ಪಾದಕರಿಗೆ ಕೆಳ ನ್ಯಾಯಾಲಯವು ವಿಧಿಸಿದ ಗಲ್ಲು ಶಿಕ್ಷೆಯನ್ನು ತೆಲಂಗಾಣ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. 2013 ರಲ್ಲಿ ಭಾಗ್ಯನಗರದ ದಿಲಸುಖನಗರದಲ್ಲಿ ನಡೆದ 2 ಬಾಂಬ್ ಸ್ಫೋಟಗಳಲ್ಲಿ ಈ ಭಯೋತ್ಪಾದಕರು ಭಾಗಿಯಾಗಿದ್ದರು. ಈ ಸ್ಫೋಟದಲ್ಲಿ 18 ಜನರು ಮೃತಪಟ್ಟಿದ್ದರು ಮತ್ತು 131 ಜನರು ಗಾಯಗೊಂಡಿದ್ದರು.

ಡಿಸೆಂಬರ 13, 2016 ರಂದು ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು ಇಂಡಿಯನ ಮುಜಾಹಿದ್ದೀನ ಸಹ-ಸಂಸ್ಥಾಪಕ ಮಹಮ್ಮದ ಅಹ್ಮದ ಸಿದ್ದೀಬಾಪಾ ಉರ್ಫ್ ಯಾಸಿನ ಭಟ್ಕಳ, ಪಾಕಿಸ್ತಾನಿ ಪ್ರಜೆ ಜಿಯಾ-ಉರ್-ರೆಹಮಾನ ಉರ್ಫ್ ವಕಾಸ, ಅಸದುಲ್ಲಾ ಅಖ್ತರ ಉರ್ಫ್ ಹಡ್ಡಿ, ತಹ್ಸಿನ ಅಖ್ತರ ಉರ್ಫ್ ಮೋನು ಮತ್ತು ಎಜಾಜ ಶೇಖ್ ಅವರನ್ನು ದೋಷಿಗಳೆಂದು ತೀರ್ಪು ನೀಡಿತ್ತು.

ಸಂಪಾದಕೀಯ ನಿಲುವು

  • 2013 ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತೀರ್ಪು 2025 ರಲ್ಲಿ ಬಂದಿರುವುದು ನ್ಯಾಯವಲ್ಲ, ಅನ್ಯಾಯವೇ ಆಗಿದೆ.
  • ಈಗ ಈ ಭಯೋತ್ಪಾದಕರು ಇದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ. ಅಲ್ಲಿ ಎಷ್ಟು ವರ್ಷಗಳಲ್ಲಿ ತೀರ್ಪು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿಯೂ ಗಲ್ಲು ಶಿಕ್ಷೆ ಖಾಯಂ ಆದರೆ, ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ಅದರ ಮೇಲೆ ಎಷ್ಟು ದಿನಗಳಲ್ಲಿ ತೀರ್ಪು ಬರುತ್ತದೆ ಎಂದು ತಿಳಿದಿಲ್ಲ. ಅರ್ಜಿ ತಿರಸ್ಕೃತಗೊಂಡ ನಂತರ ಗಲ್ಲು ಶಿಕ್ಷೆ ಯಾವಾಗ ಕಾರ್ಯಗತವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.