
ನವದೆಹಲಿ – ಅಮೆರಿಕವು ಆಮದು ಸುಂಕಗಳನ್ನು ವಿಧಿಸಿದ ನಂತರ, ಪ್ರಪಂಚದಾದ್ಯಂತ ಅದರ ನಕಾರಾತ್ಮಕ ಪರಿಣಾಮಗಳು ಕಾಣಲು ಪ್ರಾರಂಭಿಸಿವೆ. ಭಾರತದ ಮೇಲೆ ಶೇ.26 ರಷ್ಟು ಸುಂಕ ವಿಧಿಸಿದ ನಂತರ ಮೊದಲ ಬಾರಿಗೆ, ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಮೆರಿಕದ ‘ಸೆಕ್ರಟರಿ ಆಫ್ ಸ್ಟೇಟ್’ (ವಿದೇಶಾಂಗ ಕಾರ್ಯದರ್ಶಿ) ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತರರಾಷ್ಟ್ರೀಯ ಸಂಬಂಧಿತ ವಿಷಯಗಳ ಪ್ರಮುಖ ಸಲಹೆಗಾರ ಮಾರ್ಕೊ ರೂಬಿಯೊ ಅವರೊಂದಿಗೆ ಮಾತುಕತೆ ನಡೆಸಿದರು.
1. ಡಾ. ಜೈಶಂಕರ್ ಅವರು ‘ಎಕ್ಸ್’ ನಲ್ಲಿ ಇದರ ಬಗ್ಗೆ ಮಾಹಿತಿ ನೀಡುತ್ತಾ, ಈ ಚರ್ಚೆಗಳಲ್ಲಿ ಎರಡೂ ಕಡೆಯಿಂದ ಸಾಧ್ಯವಾದಷ್ಟು ಬೇಗ ಭಾರತ-ಅಮೇರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸಲು ಒಪ್ಪಿಗೆ ನೀಡಲಾಗಿದೆ. ಈ ಸಂದರ್ಭದಲ್ಲಿ, ಭಾರತೀಯ ಉಪಖಂಡ, ಇಂಡೋ-ಪೆಸಿಫಿಕ್, ಮಧ್ಯಪ್ರಾಚ್ಯ ಏಷ್ಯಾ ಮತ್ತು ಕೆರಿಬಿಯನ್ (ಅಮೆರಿಕದ ಸಮೀಪವಿರುವ ದ್ವೀಪ ದೇಶಗಳು) ರಾಷ್ಟ್ರಗಳ ಬಗ್ಗೆ ನಮ್ಮಲ್ಲಿ ಸಂಭಾಷಣೆ ನಡೆಯಿತು. ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಆದಷ್ಟು ಬೇಗ ಕಾರ್ಯರೂಪಗೊಳಿಸಲು ಎರಡೂ ಕಡೆಯಿಂದ ಒಪ್ಪಿಗೆ ನೀಡಲಾಯಿತು.
2. ಅಮೆರಿಕವು ಭಾರತದ ಮೇಲೆ ಶೇ. 26 ರಷ್ಟು ವ್ಯಾಪಾರ ತೆರಿಗೆ ವಿಧಿಸಿದ ನಂತರ, ಭಾರತವು ಇತರ ಮಾರುಕಟ್ಟೆಗಳನ್ನು ಅನ್ವೇಷಿಸುತ್ತಿದೆ. ಯುರೋಪಿಯನ್ ಒಕ್ಕೂಟ, ಬ್ರಿಟನ್, ನ್ಯೂಜಿಲೆಂಡ್ ಮತ್ತು ಓಮನ್ ಜೊತೆ ಮುಕ್ತ ವ್ಯಾಪಾರ ಸಂದರ್ಭದಲ್ಲಿ ಮಾತುಕತೆಗಳನ್ನು ವಿಸ್ತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!