ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಮತ್ತು ವಿರೋಧ ಪಕ್ಷ ಭಾಜಪದ ಶಾಸಕರ ನಡುವೆ ನುಗ್ಗಾಟ
ಶ್ರೀನಗರ (ಜಮ್ಮು- ಕಾಶ್ಮೀರ) – ಏಪ್ರಿಲ್ 7 ರ ನಂತರ, ಏಪ್ರಿಲ್ 8 ರಂದೂ ಸಹ ಜಮ್ಮು- ಕಾಶ್ಮೀರದ ವಿಧಾನಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಕೋಲಾಹಲ ಉಂಟಾಯಿತು. ಈ ಕಾನೂನಿನ ಬಗ್ಗೆ ಚರ್ಚೆಗೆ ಒತ್ತಾಯಿಸಿ ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಸದನದಲ್ಲಿ ಘೋಷಣೆಗಳನ್ನು ಕೂಗಿದರು. ಈ ಸಮಯದಲ್ಲಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಭಾಜಪ ಶಾಸಕರ ನಡುವೆ ತಳ್ಳಾಟ ನಡೆಯಿತು. ಹಿಂದಿನ ದಿನ, ನ್ಯಾಷನಲ್ ಕಾನ್ಫರೆನ್ಸ್ ನ ಶಾಸಕರು ಕಾನೂನಿನ ಪ್ರತಿಯನ್ನು ಹರಿದು ಹಾಕಿದ್ದರು. ಇದರಿಂದಾಗಿ, ದಿನದ ಮಟ್ಟಿಗೆ ಕಾರ್ಯಕಲಾಪವನ್ನು ಸ್ಥಗಿತಗೊಳಿಸಲಾಗಿತ್ತು.
ಸಂಪಾದಕೀಯ ನಿಲುವುಕಾಶ್ಮೀರದಲ್ಲಿ ಭಯೋತ್ಪಾದನೆ ಇದೆ, ಆದರೆ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಭಯೋತ್ಪಾದನೆ ಇದೆ, ಇದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ! |