Waqf Act Copies Torn : ಜಮ್ಮು- ಕಾಶ್ಮೀರ ವಿಧಾನಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯ ಪ್ರತಿಯನ್ನು ಹರಿದು ಹಾಕಿದ ಆಡಳಿತ ಪಕ್ಷದ ಶಾಸಕ

ಶ್ರೀನಗರ (ಜಮ್ಮು- ಕಾಶ್ಮೀರ) – ವಕ್ಫ್ ತಿದ್ದುಪಡಿ ಕಾಯಿದೆಯ ಕುರಿತು ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ನ್ಯಾಷನಲ್ ಕಾನ್ಫರೆನ್ಸ್ ನ ಶಾಸಕರೊಬ್ಬರು ಸದನದಲ್ಲಿ ಕಾನೂನಿನ ಪ್ರತಿಯನ್ನು ಹರಿದು ಹಾಕಿದರು. ಇತರ ಪಕ್ಷಗಳು ವಕ್ಫ್ ಕಾಯಿದೆಯ ವಿರುದ್ಧ ನಿರ್ಣಯ ತರುವ ಬಗ್ಗೆ ಚರ್ಚಿಸಿದ್ದವು. ಈ ಗದ್ದಲದಿಂದಾಗಿ ಸದನದ ಕಲಾಪಗಳನ್ನು ಸ್ಥಗಿತಗೊಳಿಸಲಾಯಿತು.

ಮತ್ತೊಂದೆಡೆ, ವಕ್ಫ್ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ಅನುಮತಿಸಿದೆ. ಈವರೆಗೆ ಸುಪ್ರೀಂ ಕೋರ್ಟ್‌ನಲ್ಲಿ 6 ಅರ್ಜಿಗಳ ಸಲ್ಲಿಕೆಯಾಗಿದೆ. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಏಪ್ರಿಲ್ 11 ರಿಂದ ದೇಶಾದ್ಯಂತ ಪ್ರತಿಭಟನೆಗಳನ್ನು ಮಾಡುವುದಾಗಿ ಘೋಷಿಸಿದೆ.

ಸಂಪಾದಕೀಯ ನಿಲುವು

ಕಾನೂನಿನ ಪ್ರತಿಯನ್ನು ಹರಿದು ಹಾಕುವುದರಿಂದ ಆ ಕಾನೂನು ರದ್ದಾಗುವುದಿಲ್ಲ ಎಂಬುದೂ ತಿಳಿದಿಲ್ಲದವರನ್ನು ಜನತೆಯು ಆಯ್ಕೆ ಮಾಡುತ್ತದೆ, ಇದು ಜನತೆಗೆ ನಾಚಿಕೆಗೇಡಿನ ಸಂಗತಿ !