Jaipur Drunk & Drive Congress Leader: ಜೈಪುರ: ಕುಡಿದು ವಾಹನ ಚಲಾಯಿಸಿದ ಕಾಂಗ್ರೆಸ್ ನಾಯಕ; 3 ಸಾವು, 6 ಗಾಯ!

ಜನರ ಪಾಲಿಗೆ ಮುಳವಾಗಿರುವ ಕಾಂಗ್ರೆಸ ನಾಯಕರು!

ಜೈಪುರ (ರಾಜಸ್ಥಾನ) – ಇಲ್ಲಿ ಏಪ್ರಿಲ್ 7 ರ ರಾತ್ರಿ ಕಾಂಗ್ರೆಸ ನಾಯಕ ಉಸ್ಮಾನ ಖಾನ ಕುಡಿದ ಮತ್ತಿನಲ್ಲಿ ತಮ್ಮ ಕಾರನ್ನು ಅತಿ ವೇಗವಾಗಿ ಚಲಾಯಿಸಿದ ಪರಿಣಾಮ 9 ಜನರನ್ನು ಹೊಸಕಿ ಹಾಕಿದರು. ಈ ಅಪಘಾತದಲ್ಲಿ ಮಹಿಳೆ ಸೇರಿದಂತೆ 3 ಜನರು ಮೃತಪಟ್ಟಿದ್ದಾರೆ ಮತ್ತು 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ, ಜೈಪುರ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಉಸ್ಮಾನ ಖಾನ ಅವರನ್ನು ಜಿಲ್ಲಾ ಉಪಾಧ್ಯಕ್ಷ ಸ್ಥಾನದಿಂದ ತಕ್ಷಣವೇ ತೆಗೆದುಹಾಕಿತು, ಮತ್ತು ಅವರನ್ನು ಪಕ್ಷದಿಂದಲೂ ಹೊರಹಾಕಿದೆ.

1. 62 ವರ್ಷದ ಉಸ್ಮಾನ ಖಾನ ಕಳೆದ 20 ವರ್ಷಗಳಿಂದ ವ್ಯವಹಾರದೊಂದಿಗೆ ಜೈಪುರ ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಉಸ್ಮಾನ ಖಾನ ಅವರು ಜೈಪುರದ ವಿಶ್ವಕರ್ಮ ಕೈಗಾರಿಕಾ ಪ್ರದೇಶದಲ್ಲಿ ಒಂದು ಸಂಸ್ಥೆಯ ಮಾಲೀಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿದ್ದಾರೆ.

2. ಈ ಪ್ರಕರಣದ ಬಗ್ಗೆ ಜೈಪುರ ಕಾಂಗ್ರೆಸ ಅಧ್ಯಕ್ಷ ಆರ್.ಆರ್. ತಿವಾರಿ ಅವರು ಮಾತನಾಡಿ, ಉಸ್ಮಾನ ಖಾನ ಅವರು ಗಂಭೀರ ಅಪರಾಧ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಕಠಿಣ ಶಿಕ್ಷೆ ನೀಡಬೇಕು, ಎಂದು ಹೇಳಿದರು.

3. ಪ್ರದೇಶ ಕಾಂಗ್ರೆಸ ಸಮಿತಿಯ ಅಧ್ಯಕ್ಷ ಗೋವಿಂದ ಸಿಂಗ ದೋತಾಸರಾ ಮಾತನಾಡಿ, ಕುಡಿದ ಮತ್ತಿನಲ್ಲಿ ಇಂತಹ ದುಷ್ಕೃತ್ಯ ಎಸಗುವ ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.