ಸಕಾಲಕ್ಕೆ ತಲುಪದ ಆಂಬ್ಯುಲೆನ್ಸ್; ಶಾಸಕರ ಕಾರ್ಯಕರ್ತನ ಸಾವು!

ಮುಂಬಯಿ ಆಕಾಶವಾಣಿ ಶಾಸಕರ ನಿವಾಸದಲ್ಲಿನ ನಡೆದ ಘಟನೆ

ಮುಂಬಯಿ – ಮುಂಬಯಿಯ ಆಕಾಶವಾಣಿ ಶಾಸಕರ ನಿವಾಸದಲ್ಲಿ ತಂಗಿದ್ದ ಕಾರ್ಯಕರ್ತ ಚಂದ್ರಕಾಂತ ಧೋತ್ರೆ ಅವರು ಮಧ್ಯರಾತ್ರಿ 12.30 ಕ್ಕೆ ಹೃದಯಾಘಾತದಿಂದ ನಿಧನರಾದರು. ಆಂಬ್ಯುಲೆನ್ಸ್ ಲಭ್ಯವಾಗದ ಕಾರಣ ರೋಗಿಯು ಮೃತಪಟ್ಟಿದ್ದಾನೆ ಎಂದು ಧೋತ್ರೆ ಅವರ ಸಂಬಂಧಿಕರು ಆರೋಪಿಸಿದ್ದಾರೆ; ಆದರೆ ಅವರು ದೂರು ದಾಖಲಿಸಿಲ್ಲ. ಚಂದ್ರಕಾಂತ ಧೋತ್ರೆ ಅವರು ಸೋಲಾಪುರದ ಭಾಜಪ ಶಾಸಕ ವಿಜಯಕುಮಾರ ದೇಶಮುಖ ಅವರ ಕಾರ್ಯಕರ್ತರಾಗಿದ್ದರು.

ಧೋತ್ರೆ ಅವರು ಸಭೆಯೊಂದಕ್ಕಾಗಿ ಮುಂಬಯಿಗೆ ಬಂದಿದ್ದರು. ಅವರು ಶಾಸಕ ದೇಶಮುಖ ಅವರ ಆಕಾಶವಾಣಿ ಶಾಸಕರ ನಿವಾಸದ ಕೊಠಡಿ ಸಂಖ್ಯೆ 408 ರಲ್ಲಿ ತಂಗಿದ್ದರು. ಧೋತ್ರೆ ಅವರಿಗೆ ಹೃದಯಾಘಾತವಾದ ನಂತರ ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಯಿತು; ಆದರೆ ಅದು ಸಮಯಕ್ಕೆ ಸರಿಯಾಗಿ ತಲುಪಲಿಲ್ಲ. ಕೊನೆಗೆ ಸಂಬಂಧಿಕರು ಪೊಲೀಸರಿಗೆ ದೂರವಾಣಿ ಕರೆ ಮಾಡಿದರು. ನಂತರ ಪೊಲೀಸರ ವಾಹನದಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು; ಆದರೆ ಚಿಕಿತ್ಸೆ ಪಡೆಯುವ ಮೊದಲೇ ಅವರು ಮೃತಪಟ್ಟರು.

ಸಂಪಾದಕೀಯ ನಿಲುವು

ಮುಂಬಯಿಯಂತಹ ಅಭಿವೃದ್ಧಿ ಹೊಂದಿದ ನಗರದಲ್ಲಿ ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬರದೇ ಇರುವುದು ನಾಚಿಕೆಗೇಡಿನ ಸಂಗತಿ! ಶಾಸಕರ ನಿವಾಸದಂತಹ ಸ್ಥಳದಲ್ಲಿ ಇಂತಹ ಘಟನೆ ಸಂಭವಿಸಿದರೆ, ಸಾಮಾನ್ಯ ರೋಗಿಗಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಯೋಚಿಸದಿರುವುದೇ ಉತ್ತಮ.