ಕೆಎಸ್‌ಆರ್‍‌ಟಿಸಿ ಬಸ್ಸಿನಲ್ಲಿ ಅಕ್ರಮ ಗೋಮಾಂಸ ಸಾಗಾಟ; ಶಕೀರಾ ಬೇಪಾರಿ ಬಂಧನ !

ಬಾಗಲಕೋಟೆ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‍ಟಿಸಿ) ಬಸ್ಸಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ಬೇಪಾರಿ ಎಂಬ ಮುಸ್ಲಿಂ ವ್ಯಕ್ತಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಶಕೀರಾ ಬೇಪಾರಿ ಬಾಗಲಕೋಟೆ ನಗರದ ಬಸ್ ನಿಲ್ದಾಣದಲ್ಲಿ ಸಿಮೆಂಟ್ ಚೀಲದಲ್ಲಿ ಗೋಮಾಂಸ ತುಂಬಿಕೊಂಡು ಬಸ್ಸಿನಲ್ಲಿ ಹತ್ತಿದ್ದನು. ಆತ ಗೋಮಾಂಸದೊಂದಿಗೆ ಪ್ರಯಾಣಿಸುತ್ತಿರುವುದು ತಿಳಿದ ತಕ್ಷಣ ಬಸ್ಸಿನ ಚಾಲಕ ಶಕೀರಾನನ್ನು ಬಸ್ಸಿನಿಂದ ಕೆಳಗಿಳಿಸಿದ. (ಕೇವಲ ಕೆಳಗಿಳಿಸದೆ, ಬಸ್ ಚಾಲಕ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಬೇಕಾಗಿತ್ತು! – ಸಂಪಾದಕರು)

ಈ ಬಗ್ಗೆ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ತಿಳಿದ ತಕ್ಷಣ ಅವರು ಶಕೀರಾನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದಾಗಿನಿಂದ ಮತಾಂಧರ ನೈತಿಕ ಸ್ಥೈರ್ಯ ಹೆಚ್ಚಾಗಿದೆ, ಎಂಬುದೇ ಇಂತಹ ಘಟನೆಗಳಿಂದ ಕಂಡುಬರುತ್ತದೆ ! ಕಾಂಗ್ರೆಸ್‌ಗೆ ಮತ ಹಾಕಿದ ಹಿಂದೂಗಳಿಗೆ ಇದು ಒಪ್ಪಿಗೆಯಿದೆಯೇ ?