Pakistan Stock Market Crash : ಅಮೇರಿಕಾದ ಆಮದು ಸುಂಕದಿಂದ ಪಾಕಿಸ್ತಾನ ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಕುಸಿತ

ಇಸ್ಲಾಮಾಬಾದ್ (ಪಾಕಿಸ್ತಾನ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಮದು ಸುಂಕವನ್ನು ವಿಧಿಸಿದ ನಂತರ, ಭಾರತ ಸೇರಿದಂತೆ ಅನೇಕ ದೇಶಗಳ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿದಿವೆ. ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕವು ಮೂರುವರೆ ಸಾವಿರ ಪಾಯಿಂಟ್‌ಗಳಷ್ಟು ಕುಸಿದಿದ್ದರಿಂದ, ಹೂಡಿಕೆದಾರರು ಸುಮಾರು 14 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಅದೇ ಸಮಯದಲ್ಲಿ, ಪಾಕಿಸ್ತಾನದ ಷೇರು ಮಾರುಕಟ್ಟೆಯೂ ಕುಸಿದಿದೆ. ಇದರಲ್ಲಿ ಭಾರತಕ್ಕಿಂತ ಹೆಚ್ಚು ಪಾಕಿಸ್ತಾನಿ ಹೂಡಿಕೆದಾರರು ನಷ್ಟವನ್ನು ಅನುಭವಿಸಿದ್ದಾರೆ. ಪಾಕಿಸ್ತಾನದ ಷೇರು ಮಾರುಕಟ್ಟೆ ಸೂಚ್ಯಂಕವು 8 ಸಾವಿರದ 600 ಪಾಯಿಂಟ್‌ಗಳಷ್ಟು ಕುಸಿದಿದೆ. ಈ ಕುಸಿತವನ್ನು ತಡೆಯಲು ಒಂದು ಗಂಟೆಗಳ ಕಾಲ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು; ಆದಾಗ್ಯೂ, ನಂತರವೂ 2 ಸಾವಿರ ಪಾಯಿಂಟ್‌ಗಳಷ್ಟು ಕುಸಿತವಾಗಿದೆ.