ಪಾಕಿಸ್ತಾನದ ಸಹಯೋಗದೊಂದಿಗೆ ವಾಯುಪಡೆ ನೆಲೆಯ ನಿರ್ಮಾಣ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶವು ಕೋಲಕಾತಾದಿಂದ ಕೇವಲ ೨೦೦ ಕಿ.ಮೀ ದೂರದಲ್ಲಿರುವ ಮೊಂಗ್ಲಾ ಬಂದರಿನ ವಿಸ್ತರಣೆಯ ಜವಾಬ್ದಾರಿಯನ್ನು ಚೀನಾಗೆ ವಹಿಸಿದೆ. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರ ಇತ್ತೀಚಿನ ಚೀನಾ ಪ್ರವಾಸದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಬಂದರಿನ ಅಭಿವೃದ್ಧಿಗೆ ಚೀನಾ ಸುಮಾರು ೩ ಸಾವಿರದ ೩೦೦ ಕೋಟಿ ರೂಪಾಯಿ ನೀಡುವ ಭರವಸೆ ನೀಡಿದೆ.
ಇದರ ಜೊತೆಗೆ, ಬಾಂಗ್ಲಾದೇಶ ಸರಕಾರವು ಲಾಲ್ಮೋನಿರ್ಹತ್ ಜಿಲ್ಲೆಯಲ್ಲಿ ವಾಯುಸೇನಾ ನೆಲೆಯನ್ನು ನಿರ್ಮಿಸುತ್ತಿದೆ, ಇದು ಭಾರತದ “ಚಿಕನ್ ನೆಕ್” ಅಂದರೆ ಸಿಲಿಗುರಿ ಕಾರಿಡಾರ್‌ನಿಂದ (ಬಂಗಾಳದಲ್ಲಿರುವ ಸುಮಾರು ೨೨ ಕಿಲೋಮೀಟರ್ ಉದ್ದದ ಅತ್ಯಂತ ಕಿರಿದಾದ ಭೂಭಾಗ. ಈಶಾನ್ಯದ ೭ ರಾಜ್ಯಗಳನ್ನು ಉಳಿದ ಭಾರತಕ್ಕೆ ಸಂಪರ್ಕಿಸುವ ಏಕೈಕ ಭೂಮಾರ್ಗವಾಗಿದೆ) ಕೇವಲ ೧೨೦ ಕಿ.ಮೀ ದೂರದಲ್ಲಿದೆ. ಈ ನೆಲೆಗಾಗಿ ಪಾಕಿಸ್ತಾನದಲ್ಲಿರುವ ಅಮೇರಿಕನ್ ನಿರ್ಮಿತ “ಜೆಎಫ್ -೧೭” ಯುದ್ಧ ವಿಮಾನಗಳನ್ನು ಹಾರಿಸಲು ಕಲಿಯಲು ಬಾಂಗ್ಲಾದೇಶದ ಪೈಲಟ್‌ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ. ಮಾರ್ಚ್ ೨೭ ರಂದು ೫ ಪೈಲಟ್‌ಗಳನ್ನು ತರಬೇತಿಗಾಗಿ ಕಳುಹಿಸಲಾಗಿದೆ.
2. ಚೀನಾ ಈಗಾಗಲೇ ಬಾಂಗ್ಲಾದೇಶಕ್ಕೆ ಜಲಾಂತರ್ಗಾಮಿ ನೌಕೆಗಳನ್ನು ನೀಡಿದ್ದು, ಈಗ ಬಂಗಾಳ ಕೊಲ್ಲಿಯಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸುತ್ತಿದೆ. ಚಿತ್ತಗಾಂಗ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ವ್ಯವಹಾರಗಳ ಪ್ರಾಧ್ಯಾಪಕ ಡಾ. ಫರೀದುಲ್ ಆಲಂ ಅವರು, ಇಂದಿನ ದಿನಗಳಲ್ಲಿ ಯಾವುದೇ ದೊಡ್ಡ ನೆರೆಯ ದೇಶದೊಂದಿಗೆ ಹಗೆತನ ಸಾಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. ಯೂನಸ್ ಸರಕಾರವು ಭಾರತದೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು, ಇಲ್ಲದಿದ್ದರೆ ಬಾಂಗ್ಲಾದೇಶಕ್ಕೆ ಹಾನಿಯಾಗುತ್ತದೆ.
ಸಂಪಾದಕೀಯ ನಿಲುವುಭಾರತವು ಬಾಂಗ್ಲಾದೇಶದ ವಿರುದ್ಧ ಯಾವಾಗ ಸಕ್ರಿಯವಾಗುತ್ತದೆ? |