ವಡೋದರದಲ್ಲಿ ಆಘಾತಕಾರಿ ಘಟನೆ: ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಮಾಡಿದ ಮೌಲಾನಾ !

(ಮೌಲಾನಾ ಎಂದರೆ ಇಸ್ಲಾಂ ಧರ್ಮದ ವಿದ್ವಾಂಸ)

ವಡೋದರಾ (ಗುಜರಾತ) – ಸ್ನಾನಗೃಹದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿದ್ದಕ್ಕಾಗಿ 20 ವರ್ಷದ ಮೌಲಾನಾನನ್ನು ಬಂಧಿಸಲಾಗಿದೆ. ಸಂತ್ರಸ್ತ ಮಹಿಳೆ ಫತೇಹಗಂಜ ಕಲ್ಯಾಣನಗರದ ಸರಕಾರಿ ಗೃಹನಿರ್ಮಾಣ ಸಮುಚ್ಚಯದಲ್ಲಿ ವಾಸಿಸುತ್ತಿದ್ದಾಳೆ. ಅಲ್ಲೇ ಈ ಮೌಲಾನಾ ಕೂಡ ವಾಸಿಸುತ್ತಿದ್ದನು. ಈ ಘಟನೆ ಏಪ್ರಿಲ್ 4 ರಂದು ನಡೆದಿದೆ. ಸಂತ್ರಸ್ತ ಮಹಿಳೆ ಪೊಲೀಸರಿಗೆ ತಿಳಿಸಿದ ಪ್ರಕಾರ, ಆಕೆ ಸ್ನಾನ ಮಾಡುತ್ತಿದ್ದಾಗ ‘ವೆಂಟಿಲೇಷನ್ ವಿಂಡೋ’ದ ಹೊರಗೆ ಒಂದು ‘ಮೊಬೈಲ್ ಕ್ಯಾಮೆರಾ’ ಕಾಣಿಸಿತು. ಸಂತ್ರಸ್ತ ಮಹಿಳೆ ಕಿರುಚಿಕೊಂಡಳು. ನಂತರ ಅವರು ಮನೆಯ ಹೊರಗೆ ಅಳವಡಿಸಿದ್ದ ‘ಸಿಸಿಟಿವಿ ಕ್ಯಾಮೆರಾ’ದ ದೃಶ್ಯಾವಳಿಗಳನ್ನು ನೋಡಿದಾಗ ಮೌಲಾನಾ ಹಾರೂನ ಪಠಾಣ ಆ ಸ್ಥಳದಿಂದ ಹೊರಟು ಹೋಗುತ್ತಿರುವುದು ಕಂಡುಬಂದಿತು.

1. ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2. ಘಟನೆಯ ದಿನದಂದು ‘ಸಿಸಿಟಿವಿ ದೃಶ್ಯಾವಳಿ’ಯಲ್ಲಿ ಹಾರೂನ ಪಠಾಣ ಸ್ನಾನಗೃಹದೊಳಗೆ ಇಣುಕಿ ನೋಡುತ್ತಿರುವುದು ಕಂಡುಬಂದಿದೆ. ಆರೋಪಿ ಈ ಮೊದಲೇ ಆ ಮಹಿಳೆಯ ಮೇಲೆ ಕಣ್ಣಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

3. ಈ ಘಟನೆಯಿಂದಾಗಿ ಪ್ರದೇಶದಲ್ಲಿ ಕೋಲಾಹಲವನ್ನುಂಟುಮಾಡಿದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

4. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ಜನರಿಗೆ ಭರವಸೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಕಾಮಪಿಪಾಸು ಮೌಲಾನಾ! ಸರಕಾರ ಇಂತಹವರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು!