ಮಾಟ-ಮಂತ್ರದ ಹೆಸರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಅಬ್ದುಲ ಕರೀಮ ಬಂಧನ

ಮಂಗಳೂರು – ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳಿಗೆ ‘ನಿಮ್ಮ ಮೇಲೆ ಯಾರೋ ಮಾಟ ಮಂತ್ರ ಮಾಡಿದ್ದಾರೆ’ ಎಂದು ಹೇಳಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ 1 ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ ಜಿ. ಅಬ್ದುಲ ಕರೀಮ ಉರ್ಫ್ ಕೂಳೂರು ಉಸ್ತಾದನನ್ನು ಪೊಲೀಸರು ಬಂಧಿಸಿದ್ದಾರೆ.

1. ಖಿನ್ನತೆಯಿಂದ ಬಳಲುತ್ತಿದ್ದ ಕಾರಣ ಆಕೆಯ ಸಹೋದರಿಯ ಗಂಡನ ಸಲಹೆಯಂತೆ ಆಕೆ ಹೆಜಮಾಡಿಯಲ್ಲಿದ್ದ ಉಸ್ತಾದ ಅಬ್ದುಲ ಕರೀಮನ ಮನೆಗೆ ಹೋಗಿದ್ದಳು. ಆಗ ಅಬ್ದುಲ ಕರೀಮ ಮಹಿಳೆಯನ್ನು ನೋಡಿ ‘ನಿಮ್ಮ ಮೇಲೆ ಮಾಟ ಮಂತ್ರ ಮಾಡಲಾಗಿದೆ ಮತ್ತು ಅದನ್ನು ತೆಗೆದುಹಾಕಲು ನೀವು ಆಗಾಗ್ಗೆ ಇಲ್ಲಿಗೆ ಬರಬೇಕು’ ಎಂದು ಹೇಳಿದನು.

2. ಸಂತ್ರಸ್ತ ಮಹಿಳೆ ತನ್ನ ಸಹೋದರಿಯೊಂದಿಗೆ ಹಲವು ಬಾರಿ ಈ ವ್ಯಕ್ತಿಯ ಬಳಿ ಹೋಗಿದ್ದಳು. ಅಲ್ಲಿ ಆತ ಕೆಲವು ಬಾರಿ ಮಹಿಳೆಗೆ ಕುರಾನ್ ಓದಿ ತೋರಿಸಿದ್ದಾಗಿ ಆಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

3. ಕೆಲವು ದಿನಗಳ ನಂತರ ಸಂತ್ರಸ್ತೆಯ ಸಹೋದರಿಗೆ ಕೆಲಸವಿದ್ದ ಕಾರಣ ಸಂತ್ರಸ್ತೆ ಒಬ್ಬಳೇ ಹೆಜಮಾಡಿಯ ಮನೆಯಲ್ಲಿಗೆ ಹೋಗಿದ್ದಳು. ಅಲ್ಲಿ ಉಸ್ತಾದ್ ಆಕೆಗೆ ಕುರಾನ್ ಓದಲು ಹೇಳಿ, ನಂತರ ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ ಮಹಿಳೆಯಿಂದ 55 ಸಾವಿರ ರೂಪಾಯಿ ಪಡೆದನು.

4. ಆಕೆ ಹೆಜಮಾಡಿಗೆ ಹೋದಾಗಲೆಲ್ಲಾ ಉಸ್ತಾದ ಆಕೆಗೆ ‘ಚಿಕಿತ್ಸೆಗೆ ಹೆಚ್ಚು ಹಣ ಬೇಕಾಗುತ್ತದೆ’ ಎಂದು ಹೇಳಿ ವಂಚಿಸುತ್ತಿದ್ದನು. ಈವರೆಗೆ ಆತ 1 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಸಂಪಾದಕೀಯ ನಿಲುವು

ಹಿಂದೂ ಕಪಟಿ ಬಾಬಾಗಳ ಬಗ್ಗೆ ಟೀಕೆ ಮಾಡುವ ಬುದ್ಧಿಜೀವಿಗಳು ಮುಸ್ಲಿಂ ನಕಲಿ ಬಾಬಾಗಳ ಇಂತಹ ಕೃತ್ಯಗಳ ವಿರುದ್ಧ ಏಕೆ ಮಾತನಾಡುವುದಿಲ್ಲ ?