ಕೋಲಕಾತಾದಲ್ಲಿ ಶ್ರೀರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಭಾಜಪ ಹೇಳಿಕೆಯನ್ನು ನಿರಾಕರಿಸಿದ ಪೊಲೀಸರು !

ಕೋಲಕಾತಾ (ಬಂಗಾಳ) – ಕೋಲಕಾತಾದ ಪಾರ್ಕ್ ಸರ್ಕಸ್ ಸೆವೆನ್ ಪ್ರದೇಶದಲ್ಲಿ ಶ್ರೀರಾಮನವಮಿ ಮೆರವಣಿಗೆಯ ಮೇಲೆ ದಾಳಿ ಮಾಡಲಾಗಿದೆ. ಕೇಸರಿ ಧ್ವಜಗಳಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಭಾಜಪ ಸಂಸದ ಮತ್ತು ಕೇಂದ್ರ ಸಚಿವ ಸುಕಾಂತ ಮಜುಂದಾರ ಹೇಳಿದ್ದಾರೆ.

೧. ಕೇಂದ್ರ ಸಚಿವ ಮಜುಂದಾರ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ಇಲ್ಲಿ ಅವ್ಯವಸ್ಥೆ ಹರಡಿತ್ತು. ಇದು ಅಪಘಾತವಲ್ಲ, ಉದ್ದೇಶಿತ ಹಿಂಸಾಚಾರವಾಗಿತ್ತು. ಈ ಸಮಯದಲ್ಲಿ ಪೊಲೀಸರು ಎಲ್ಲಿದ್ದರು? ಪೊಲೀಸರು ಮೌನವಾಗಿರುವುದನ್ನು ನಾನು ನೋಡಿದೆನು. ಮಮತಾ ಬ್ಯಾನರ್ಜಿ ಅವರು ನೇಮಿಸಿದ ಈ ಪೊಲೀಸ್ ಪಡೆ ತುಷ್ಟೀಕರಣದ ರಾಜಕಾರಣದಿಂದ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಅಮಾಯಕ ಹಿಂದೂಗಳ ರಕ್ಷಣೆಗಾಗಿ ಒಂದೇ ಒಂದು ಹೆಜ್ಜೆಯನ್ನೂ ಇಡುತ್ತಿಲ್ಲ. ಮುಂದಿನ ವರ್ಷ ಪಾರ್ಕ್ ಸರ್ಕಸ್‌ನಿಂದ ನಾವು ಇನ್ನಷ್ಟು ದೊಡ್ಡದಾದ ಮತ್ತು ಭವ್ಯವಾದ ಶ್ರೀರಾಮನವಮಿ ಮೆರವಣಿಗೆಯನ್ನು ನಡೆಸುತ್ತೇವೆ ಮತ್ತು ಇಂದು ಮೌನವಾಗಿದ್ದ ಅದೇ ಪೊಲೀಸರು ನಮ್ಮ ಮೇಲೆ ಪುಷ್ಪವೃಷ್ಟಿ ಮಾಡುವರು ಎಂದು ನಾವು ಕೋಲಕಾತಾಗೆ ಭರವಸೆ ನೀಡುತ್ತೇವೆ, ಎಂದು ಹೇಳಿದರು.

2. ಭಾಜಪ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋಲಕಾತಾ ಪೊಲೀಸರು, ಯಾವುದೇ ಮೆರವಣಿಗೆಗೆ ಯಾವುದೇ ಅನುಮತಿ ಪಡೆಯಲಾಗಿರಲಿಲ್ಲ ಅಥವಾ ಆ ಪ್ರದೇಶದಲ್ಲಿ ಅಂತಹ ಯಾವುದೇ ಕೃತ್ಯ ನಡೆದಿಲ್ಲ. ವಾಹನಗಳಿಗೆ ಹಾನಿಯಾದ ಮಾಹಿತಿ ದೊರೆತ ತಕ್ಷಣ ನಾವು ಮಧ್ಯಪ್ರವೇಶಿಸಿ ಸುವ್ಯವಸ್ಥೆಯನ್ನು ಮರುಸ್ಥಾಪಿಸಿದ್ದೇವೆ. ಈ ಪ್ರಕರಣದ ತನಿಖೆಗಾಗಿ ಪ್ರಕರಣ ದಾಖಲಿಸಲಾಗಿದೆ. ಜನರು ಯಾವುದೇ ವದಂತಿಗಳಿಗೆ ಗಮನ ಕೊಡಬಾರದು, ಎಂದು ಹೇಳಿದೆ.

3. ಪೊಲೀಸರ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಿದ ಭಾಜಪ ನಾಯಕ ತರುಣ ಜ್ಯೋತಿ ತಿವಾರಿ, ಪಾರ್ಕ್ ಸರ್ಕಸ್‌ನಲ್ಲಿ ಯಾವುದೇ ವಿಷಯಕ್ಕೂ ಅನುಮತಿಯ ಆವಶ್ಯಕತೆ ಇದೆಯೇ? ವಕ್ಫ್ ಸುಧಾರಣಾ ಕಾಯ್ದೆಯನ್ನು ವಿರೋಧಿಸಿ ಇಲ್ಲಿ ಆಯೋಜಿಸಲಾಗಿದ್ದ ಸಭೆಗೆ ಅನುಮತಿ ಪಡೆಯಲಾಗಿದೆಯೇ? ಎಂದು ಪ್ರಶ್ನಿಸಿದರು.

ಸಂಪಾದಕೀಯ ನಿಲುವು

ಬಂಗಾಳದ ಪೊಲೀಸರು ಎಂದಾದರೂ ಹಿಂದೂಗಳ ಪರವಾಗಿ ಮಾತನಾಡುತ್ತಾರೆಯೇ ?