ಪಾಕುಡ (ಜಾರ್ಖಂಡ) – ಇಲ್ಲಿ ಆಡಳಿತವು ಹಿಂದೂಗಳಿಗೆ ಶ್ರೀರಾಮನವಮಿ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿದ್ದರಿಂದ ಏಪ್ರಿಲ್ 6 ರಂದು ಮೆರವಣಿಗೆ ನಡೆಸಲು ಸಾಧ್ಯವಾಗಲಿಲ್ಲ. ಮೆರವಣಿಗೆಗೆ ಅಗತ್ಯವಾದ ದಾಖಲೆಗಳನ್ನು ನೀಡಲಾಗಿಲ್ಲ, ಹಾಗೆಯೇ ಮೆರವಣಿಗೆಯಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನು ತಿಳಿಸಲಾಗಿಲ್ಲ ಎಂದು ಆಡಳಿತವು ಹೇಳಿದೆ. ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮೆರವಣಿಗೆಗೆ ಅನುಮತಿ ನೀಡಲಾಗಿಲ್ಲ. ‘ಒಂದು ವೇಳೆ ಆದೇಶವನ್ನು ಉಲ್ಲಂಘಿಸಿದರೆ, ಮೆರವಣಿಗೆ ನಡೆಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 223 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಆಡಳಿತವು ಎಚ್ಚರಿಸಿತ್ತು.
ಶ್ರೀರಾಮನವಮಿ ಆಯೋಜನಾ ಸಮಿತಿಯು ಏಪ್ರಿಲ್ 6, 2025 ರಂದು ಪಾಕುಡನಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿತ್ತು. ಸಮಿತಿಯು ಕೋಲಾಜೋಡಾ, ಸಮಸೇರಾ, ಪ್ರಹಾರಕೋಲ, ಗೋಕುಲಪುರ, ನಾಗರನವಿ, ಝಿಕಹರತಿ, ಪಿರಲೀಪುರ, ಬಹಿರಗ್ರಾಮ ಮತ್ತು ಚೆಂಗಡಂಗಾ ಗ್ರಾಮಗಳ ಜನರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿತ್ತು. ಅವರಲ್ಲಿ ಸಾಂಪ್ರದಾಯಿಕ ಆಯುಧಗಳು, ಧಾರ್ಮಿಕ ಧ್ವಜಗಳು ಮತ್ತು ಧ್ವನಿವರ್ಧಕ ವ್ಯವಸ್ಥೆ ಕೂಡ ಇರುತ್ತದೆ. ಸಮಿತಿಯು ಭದ್ರತೆಯನ್ನು ಒದಗಿಸಿ ಸಹಕರಿಸಬೇಕೆಂದು ಆಡಳಿತವನ್ನು ವಿನಂತಿಸಿತ್ತು. ಜಿಲ್ಲಾಡಳಿತವು ಈ ವಿಷಯದಲ್ಲಿ ಪಾಕುಡ ನಗರ ಪೊಲೀಸ್ ಠಾಣೆಯ ಮುಖ್ಯಸ್ಥರಿಂದ ವರದಿಯನ್ನು ಕೇಳಿತ್ತು; ಆದರೆ ಅವರು ಸಮಯಕ್ಕೆ ಸರಿಯಾಗಿ ವರದಿಯನ್ನು ಸಲ್ಲಿಸಲಿಲ್ಲ. ಆದ್ದರಿಂದ ಆಡಳಿತವು ಅನುಮತಿ ನಿರಾಕರಿಸಿತು.
ಭವಿಷ್ಯದಲ್ಲಿ ದೀಪಾವಳಿ ಮತ್ತು ದುರ್ಗಾಪೂಜೆಯನ್ನೂ ನಿಷೇಧಿಸಬಹುದು! – ಭಾಜಪ
ಭಾಜಪ ಪ್ರದೇಶಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರು ಈ ವಿಷಯದಲ್ಲಿ ಆಡಳಿತ ಮತ್ತು ಸರಕಾರದ ಧೋರಣೆಯನ್ನು ಟೀಕಿಸಿದ್ದಾರೆ. ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ, ಪಾಕುಡ ಜಿಲ್ಲಾಡಳಿತದ ಈ ಆದೇಶವು ಹಿಂದೂಗಳ ಶ್ರದ್ಧೆಯ ಮೇಲಿನ ದಾಳಿಯಾಗಿದೆ ಎಂದು ಹೇಳಿದರು. ಪಾಕುಡದಲ್ಲಿ ತಾಜಿಯಾ (ಇಮಾಮ್ ಹುಸೇನ್ ಅವರ ಗೋರಿಯ ಪ್ರತಿಕೃತಿ. ಅದನ್ನು ಅನೇಕ ವಿಧಗಳು ಮತ್ತು ಆಕಾರಗಳಲ್ಲಿ ತಯಾರಿಸಲಾಗುತ್ತದೆ.) ಮೆರವಣಿಗೆಯನ್ನು ನಡೆಸಲು ಸಾಧ್ಯವಾದರೆ, ಶ್ರೀರಾಮನವಮಿ ಮೆರವಣಿಗೆಯನ್ನು ಏಕೆ ನಡೆಸಬಾರದು? ಇಂದು ಶ್ರೀರಾಮನವಮಿಯನ್ನು ನಿಷೇಧಿಸುವ ಸರಕಾರವು ನಾಳೆ ದೀಪಾವಳಿ ಮತ್ತು ದುರ್ಗಾಪೂಜೆಯನ್ನೂ ನಿಷೇಧಿಸಬಹುದು. ಹಿಂದೂ ವಿರೋಧಿ ಶಕ್ತಿಗಳ ಒತ್ತಡಕ್ಕೆ ಮಣಿಯುವ ಆಡಳಿತವು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಝಾರಖಂಡನಲ್ಲಿ ಪದೇ ಪದೇ ನಡೆಯುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿ ಹಿಂದೂಗಳ ಹಬ್ಬಗಳನ್ನು ನಿಲ್ಲಿಸಲಾಗುತ್ತಿದೆ, ಆದರೆ ಇತರ ಸಮುದಾಯಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೋಮುವಾದಿಗಳ ಒತ್ತಡದಲ್ಲಿ ಸರಕಾರವು ಪಾಕುಡ ಅನ್ನು ಅನಧಿಕೃತ ‘ಗ್ರೇಟರ್ (ಬೃಹತ್) ಬಾಂಗ್ಲಾದೇಶ’ ವನ್ನಾಗಿ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ತೋರುತ್ತದೆ.
No Ram Navami procession in Pakur (Jharkhand) as administration denied permission!
Will Diwali & Durga Puja be banned next? – BJP
Hindus in Jharkhand are now facing the consequences of electing the Jharkhand Mukti Morcha to power. The day Hindus realize this will be a better… pic.twitter.com/6VEENEzm6N
— Sanatan Prabhat (@SanatanPrabhat) April 7, 2025
ಸಂಪಾದಕೀಯ ನಿಲುವುಜಾರ್ಖಂಡನಲ್ಲಿ ಅಲ್ಲಿನ ಹಿಂದೂಗಳು ‘ಜಾರ್ಖಂಡ ಮುಕ್ತಿ ಮೋರ್ಚಾ’ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರ ಪರಿಣಾಮವನ್ನು ಹಿಂದೂಗಳೇ ಅನುಭವಿಸುತ್ತಿದ್ದಾರೆ, ಇದು ಹಿಂದೂಗಳ ಗಮನಕ್ಕೆ ಬಂದಾಗ ಶುಭದಿನ ! |