ವಿವಿಧ ಸ್ತರಗಳಲ್ಲಿನ ಭಾರತದ ಭದ್ರತೆ ಮತ್ತು ಇತರ ರಾಷ್ಟ್ರಗಳ ನಿಲುವು !

ಕಳೆದ ವರ್ಷ ಪಾಕಿಸ್ತಾನದಿಂದ ಅಮಲು ಪದಾರ್ಥಗಳು ತುಂಬಿರುವ ೧೦೦ ಡ್ರೋನ್‌ಗಳು ಪಂಜಾಬಗೆ ಬಂದಿದ್ದವು; ಆದರೆ ಭಾರತೀಯ ಭದ್ರತಾದಳದವರಿಗೆ ಅವುಗಳನ್ನು ಹೊಡೆದುರುಳಿಸಲು ಸಾಧ್ಯವಾಗಲಿಲ್ಲ. ಅದರಲ್ಲಿನ ೮ ಡ್ರೋನಗಳನ್ನು ವಶಪಡಿಸಿಕೊಳ್ಳಲಾಯಿತು, ಬಾಕಿ ಡ್ರೋನ್‌ಗಳು ಸಾಹಿತ್ಯವನ್ನು ಎಸೆದು ಪಲಾಯನ ಮಾಡಿದವು.

ಚೀನಾದಿಂದ ತೈವಾನಿನೊಳಗೆ ನುಗ್ಗಿ ಯುದ್ಧಾದ್ಧಭ್ಯಾಸ !

ಚೀನಾ ಕಳೆದ 24 ಗಂಟೆಗಳಲ್ಲಿ ತೈವಾನ ಹತ್ತಿರ 71 ಯುದ್ಧ ವಿಮಾನಗಳನ್ನು ಬಳಸಿಸಮುದ್ರ ಮತ್ತು ಹವಾಯಿ ಕಸರತ್ತು ಮಾಡಿತು. ಚೀನಾದಿಂದ ಅನೇಕ ಯುದ್ಧವಿಮಾನಗಳನ್ನು ತೈವಾನಿನ ಹವಾಯಿ ಕ್ಷೆತ್ರಕ್ಕೆ ನುಗ್ಗಿಸಲಾಯಿತು. ತೈವಾನಿನ ರಕ್ಷಣಾ ಸಚಿವಾಲಯವು, ಇದು ಚೀನಾದ ಎಲ್ಲಕ್ಕಿಂತ ದೊಡ್ಡ ನುಸಳುವ ಪ್ರಯತ್ನವಾಗಿದೆ ಎಂದು ಹೇಳಿದೆ.

ನಾಟ್ಯಮಯ ಪರಿವರ್ತನೆಯ ನಮತರ ಪುಷ್ಪಕಮಲ ದಹಲ ಪ್ರಚಂಡರವರು ನೇಪಾಳದ ಪ್ರಧಾನಮಂತ್ರಿಯಾದರು !

ಚೀನಾದ ಸಮರ್ಥಕರಾದ ಒಲೀಯವರೊಂದಿಗೆ ಮೈತ್ರಿ !
ಭಾರತದ ಸಮರ್ಥಕರಾದ ಶೇರ ಬಹಾದುರ ದೆವುಬಾರವರಿಗೆ ಆಘಾತ !

ಚೀನಾ ಈಗ ಕೊರೊನಾ ರೋಗಿಗಳ ಸಂಖ್ಯೆಯನ್ನು ಘೋಷಣೆ ಮಾಡುವುದಿಲ್ಲ.

ಚೀನಾ ಇಲ್ಲಿಯವರೆಗೆ ಪ್ರತಿಯೊಂದು ವಿಷಯವನ್ನು ಕದ್ದುಮುಚ್ಚಿ ಮಾಡುತ್ತ ಬಂದಿರುವುದರಿಂದ, ಅದು ಇಂತಹ ನಿರ್ಣಯವನ್ನು ತೆಗೆದುಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ.

`ಭಾರತದೊಂದಿಗೆ ಉತ್ತಮ ಸಂಬಂಧ ಮತ್ತು ಗಡಿಯಲ್ಲಿ ಶಾಂತಿ ಕಾಪಾಡಲು ನಾವು ಕಟಿಭದ್ಧರಾಗಿದ್ದೇವೆ !’ (ಅಂತೆ) – ಚೀನಾ

`ಹಿಂದಿ-ಚಿನಿ ಭಾಯಿ ಭಾಯಿ ಎನ್ನುತ್ತಾ ಭಾರತದ ಮೇಲೆ ದಾಳಿ ಮಾಡಿ ಸಾವಿರಾರು ಚದರ ಕಿಲೋ ಮೀಟರ್ ಭೂಮಿಯನ್ನು ಕಬಳಿಸಿರುವ ಚೀನಾದ ಈ ರೀತಿಯ ಹೇಳಿಕೆಯ ಮೇಲೆ ಎಳೆ ಮಕ್ಕಳಾದರೂ ವಿಶ್ವಾಸ ಇಡುವರೇ ?

ಚೀನಾ, ಜಪಾನ್, ದಕ್ಷಿಣ ಕೋರಿಯಾ, ಹಾಂಕಾಂಗ್ ಮತ್ತು ಥೈಲ್ಯಾಂಡ್ ಈ ದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗರಿಗಾಗಿ `ಆರ್ಟಿಪಿಸಿಆರ್’ ಪರೀಕ್ಷೆ ಅನಿವಾರ್ಯ !

ಚೀನಾ ಮತ್ತು ಜಪಾನ್ ಎರಡು ದೇಶಗಳಲ್ಲಿ ಕೋರೋನ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಭಾರತವು ಚೀನಾ, ಜಪಾನ್, ದಕ್ಷಿಣ ಕೋರಿಯಾ, ಹಾಂಕಾಂಗ್ ಮತ್ತು ಥೈಲ್ಯಾಂಡ್ ಈ ದೇಶದಿಂದ ಬರುವ ಪ್ರವಾಸಿಗರಿಗಾಗಿ `ಆರ್ಟಿಪಿಸಿಆರ್’ ಪರೀಕ್ಷೆ ಅನಿವಾರ್ಯಗೊಳಿಸಿದೆ.

ತವಾಂಗನಲ್ಲಿ ಚೀನಾದ ಸೈನಿಕರು ಭಾರತದ ಗಡಿಯೊಳಗೆ ನುಸುಳುತ್ತಿದ್ದರು ! – ಲೆಫ್ಟಿನೆಂಟ ಜನರಲ ಕಲಿತಾ

ಚೀನಾದ `ಪೀಪಲ್ಸ್ ಲಿಬರೇಶನ ಆರ್ಮಿ’ಯು ಅರುಣಾಚಲ ಪ್ರದೇಶದ ತವಾಂಗನ ಯಾಂಗ್ಟ್ಸೆಯಲ್ಲಿ ವಾಸ್ತವಿಕ ಗಡಿ ರೇಖೆಯನ್ನು ದಾಟಲು ಪ್ರಯತ್ನಿಸಿತ್ತು; ಆದರೆ ಭಾರತೀಯ ಸೇನೆಯು ಚೀನಾ ಸೇನೆಗೆ ದಿಟ್ಟ ಉತ್ತರ ನೀಡಿದೆ.

ಚೀನಾದ ಸೈನಿಕರು ಪ್ರತಿ ವರ್ಷ ಗಡಿಯಲ್ಲಿ ನುಸಳುವ ಪ್ರಯತ್ನ ಮಾಡುತ್ತಾರೆ ಮತ್ತು ಒದೆ ತಿಂದು ಹೋಗುತ್ತಾರೆ ! – ಮನೋಜ ನರವಣೆ, ಮಾಜಿ ಸೈನ್ಯದಳ ಮುಖ್ಯಸ್ಥ

ಚೀನಾದ ಸೈನಿಕರು ತಮ್ಮನ್ನು ೨೧ ನೇ ಶತಮಾನದ ಎಲ್ಲಕ್ಕಿಂತ ಬುದ್ಧಿವಂತ ಮತ್ತು ವ್ಯಾವಸಾಯಿಕ ಸೈನ್ಯ ತಿಳಿದುಕೊಂಡಿದೆ; ಆದರೆ ಅದರ ಕೃತಿ ಗೂಂಡಾಗಿರಿ ಮತ್ತು ರಸ್ತೆಯಲ್ಲಿ ಜಗಳವಾಡುವವರಿಗಿಂತ ಹೆಚ್ಚು ಕಾಣುತ್ತದೆ.

ಭಾರತ ಬಿಟ್ಟು ಬೇರೆ ಯಾವ ದೇಶವೂ ಚೀನಾವನ್ನು ಎದುರಿಸಲಾರದು ! – ಜರ್ಮನಿ

ಅಭಿವೃದ್ಧಿ, ಜನಸಂಖ್ಯೆ ಮತ್ತು ಇತರ ಅಂಶಗಳ ವಿಷಯದಲ್ಲಿ, ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶವೂ ಚೀನಾದೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಭಾರತದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಅಕರ್ಮನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.