ಚೀನಾ ಈಗ ಕೊರೊನಾ ರೋಗಿಗಳ ಸಂಖ್ಯೆಯನ್ನು ಘೋಷಣೆ ಮಾಡುವುದಿಲ್ಲ.

ಬೀಜಿಂಗ(ಚೀನಾ)– ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ದೇಶದ ಕೊರೊನಾ ರೋಗಿಗಳ ಅಂಕಿ-ಅಂಶಗಳನ್ನು ಘೋಷಣೆ ಮಾಡುವುದಿಲ್ಲವೆಂದು ಹೇಳಿದೆ. ಕಳೆದ 3 ವರ್ಷಗಳಿಂದ ಆಯೋಗದಿಂದ ಈ ವಿಷಯದ ಅಂಕಿಅಂಶಗಳನ್ನು ಘೋಷಿಸಲಾಗುತ್ತಿತ್ತು. ಇತ್ತೀಚೆಗಷ್ಟೆ ಆಯೋಗವು ಕಳೆದ 20 ದಿನಗಳಲ್ಲಿ ಚೀನಾದಲ್ಲಿ 25 ಕೋಟಿ ಜನರು ಕೊರೊನಾ ಸಾಂಕ್ರಾಮಿಕದಿಂದ ಪೀಡಿತರಾಗಿದ್ದಾರೆಂದು ಘೋಷಣೆ ಮಾಡಿತ್ತು. ಈಗ ಅಂಕಿ ಅಂಶಗಳನ್ನು ಘೋಷಣೆ ಮಾಡದೇ ಇರುವ ಕಾರಣವನ್ನು ಆಯೋಗವು ಸ್ಪಷ್ಟ ಪಡಿಸಿರುವುದಿಲ್ಲ.

ಸಂಪಾದಕೀಯ ನಿಲುವು

ಚೀನಾ ಇಲ್ಲಿಯವರೆಗೆ ಪ್ರತಿಯೊಂದು ವಿಷಯವನ್ನು ಕದ್ದುಮುಚ್ಚಿ ಮಾಡುತ್ತ ಬಂದಿರುವುದರಿಂದ, ಅದು ಇಂತಹ ನಿರ್ಣಯವನ್ನು ತೆಗೆದುಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ.