ಚೀನಾದಿಂದ ತೈವಾನಿನೊಳಗೆ ನುಗ್ಗಿ ಯುದ್ಧಾದ್ಧಭ್ಯಾಸ !

ಬೀಚಿಂಗ – ಚೀನಾ ಕಳೆದ 24 ಗಂಟೆಗಳಲ್ಲಿ ತೈವಾನ ಹತ್ತಿರ 71 ಯುದ್ಧ ವಿಮಾನಗಳನ್ನು ಬಳಸಿಸಮುದ್ರ ಮತ್ತು ಹವಾಯಿ ಕಸರತ್ತು ಮಾಡಿತು. ಚೀನಾದಿಂದ ಅನೇಕ ಯುದ್ಧವಿಮಾನಗಳನ್ನು ತೈವಾನಿನ ಹವಾಯಿ ಕ್ಷೆತ್ರಕ್ಕೆ ನುಗ್ಗಿಸಲಾಯಿತು. ತೈವಾನಿನ ರಕ್ಷಣಾ ಸಚಿವಾಲಯವು, ಇದು ಚೀನಾದ ಎಲ್ಲಕ್ಕಿಂತ ದೊಡ್ಡ ನುಸಳುವ ಪ್ರಯತ್ನವಾಗಿದೆ ಎಂದು ಹೇಳಿದೆ.

ಅಮೇರಿಕಾದ ಪ್ರಚೋದನೆಯ ಪ್ರಯತ್ನಕ್ಕೆ ಪ್ರತ್ಯುತ್ತರವೆಂದು ನಾವು ಸಮುದ್ರ ಮತ್ತು ಹವಾಯಿ ಕಸರತ್ತು ಮಾಡಿದ್ದೇವೆ ಎಂದು ಚೀನಾದ ಸೈನ್ಯ ಹೇಳಿದೆ. ಚೀನಾದ ಅಧಿಕೃತ ವಾರ್ತಾ ಸಂಸ್ಥೆ ಆಗಿರುವ ಗ್ಲೋಬಲ್ ಟೈಮ್ಸ್ ನೀಡಿರುವ ವಾರ್ತೆಯ ಪ್ರಕಾರ, ’ಅಮೇರಿಕಾವು ತನ್ನ ರಕ್ಷಣಾ ಬಜೆಟಿನಲ್ಲಿ ತೈವಾನಿಗಾಗಿ 82 ಸಾವಿರ ಕೋಟಿ ರೂಪಾಯಿ ಸಹಾಯ ನೀಡುವ ವ್ಯವಸ್ಥೆ ಮಾಡಿದೆ. ಚೀನಾ ಇದನ್ನು ಎಂದಿಗೂ ಸಹಿಸುವುದಿಲ್ಲ.’ ‘ಅಲ್ ಜಜೀರಾ’ ದ ವಾರ್ತೆಯ ಪ್ರಕಾರ, ತೈವಾನವು , ಚೀನಾ ಸಂಪೂರ್ಣ ಪ್ರದೇಶದಲ್ಲಿನ ಶಾಂತಿಯನ್ನು ಕದಡುತ್ತಿದೆ ಮತ್ತು ಅಲ್ಲಿನ ಜನರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಚೀನಾ ಸೈನ್ಯದ ವಕ್ತಾರರಾದ ಶೀ ಯಿ ಇವರು, ನಮ್ಮ ಸೈನ್ಯವು ದೇಶದ ಅಖಂಡತೆ ಮತ್ತು ಸುರಕ್ಷೆಗಾಗಿ ಅವಶ್ಯಕವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುತ್ತಲಿರುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಚೀನಾದ ವಿಸ್ತಾರವಾದದ ಧೋರಣೆಯನ್ನು ನೋಡುತ್ತಿದ್ದರೆ, ಅದು ತೈವಾನ ವನ್ನು ವಶಕ್ಕೆ ತೆಗೆದುಕೊಂಡರೆ ಆಶ್ಚರ್ಯವೆನಿಸಲಾರದು !