ಚೀನಾದ ಸೈನಿಕರು ಪ್ರತಿ ವರ್ಷ ಗಡಿಯಲ್ಲಿ ನುಸಳುವ ಪ್ರಯತ್ನ ಮಾಡುತ್ತಾರೆ ಮತ್ತು ಒದೆ ತಿಂದು ಹೋಗುತ್ತಾರೆ ! – ಮನೋಜ ನರವಣೆ, ಮಾಜಿ ಸೈನ್ಯದಳ ಮುಖ್ಯಸ್ಥ

ಸೈನ್ಯದಳದ ಮಾಜಿ ಮುಖ್ಯಸ್ಥ ಮನೋಜ ಮುಕುಂದ ನರವಣೆ

ನವ ದೆಹಲಿ – ಚೀನಾದ ಸೈನಿಕರು ತಮ್ಮನ್ನು ೨೧ ನೇ ಶತಮಾನದ ಎಲ್ಲಕ್ಕಿಂತ ಬುದ್ಧಿವಂತ ಮತ್ತು ವ್ಯಾವಸಾಯಿಕ ಸೈನ್ಯ ತಿಳಿದುಕೊಂಡಿದೆ; ಆದರೆ ಅದರ ಕೃತಿ ಗೂಂಡಾಗಿರಿ ಮತ್ತು ರಸ್ತೆಯಲ್ಲಿ ಜಗಳವಾಡುವವರಿಗಿಂತ ಹೆಚ್ಚು ಕಾಣುತ್ತದೆ. ಇದು ಕೇವಲ ಈಗಷ್ಟೇ ಅಲ್ಲ, ಚೀನಾದ ಸೈನಿಕರು ಪ್ರತಿ ವರ್ಷ ನುಸುಳುವ ಪ್ರಯತ್ನ ಮಾಡುತ್ತದೆ ಮತ್ತು ಪ್ರತಿಸಲ ಅದು ಲಜ್ಜೆಗೆಟ್ಟದಂತೆ ಒದೆ ತಿನ್ನಬೇಕಾಗುತ್ತದೆ, ಎಂದು ಸೈನ್ಯದಳದ ಮಾಜಿ ಮುಖ್ಯಸ್ಥ ಮನೋಜ ಮುಕುಂದ ನರವಣೆ ಇವರು `ಎ.ಎನ್.ಐ.’ ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾಹಿತಿ ನೀಡಿದರು.

ನರವಣೆ ಇವರು ಮಂಡಿಸಿರುವ ಅಂಶಗಳು

೧. ಒಂದು ಕಡೆಗೆ ಅದು ತಾಂತ್ರಿಕ ಶಕ್ತಿ ತೋರಿಸುವ ಪ್ರಯತ್ನ ಮಾಡುತ್ತದೆ ಮತ್ತು ಇನ್ನೊಂದು ಕಡೆ ಅದು ಮೊನಚಾದ ಲಾಠಿ ತೆಗೆದುಕೊಂಡು ಬರುತ್ತಾರೆ, ಇದು ಹಾಸ್ಯಸ್ಪದವಾಗಿದೆ.

೨. ಭಾರತ ಇದು ಎಂತಹ ದೇಶವಾಗಿದೆ ಎಂದರೆ, ಪಕ್ಕದವರ ಗೂಂಡಾಗಿರಿಗೆ ಪ್ರತ್ಯುತ್ತರ ನೀಡುತ್ತೇವೆ ಎಂಬುದು ಜಗತ್ತಿಗೆ ತೋರಿಸಿಕೊಟ್ಟಿದೆ. ನಾನು ಸಂಪೂರ್ಣ ದೇಶಕ್ಕೆ, ನಾವು ಯಾವಾಗಲೂ ಸಿದ್ದರಿರುತ್ತೇವೆ. ನಮ್ಮ ಮೇಲೆ ಏನೆಲ್ಲಾ ಎಸೆಯಲಾಗುವುದು ಅದಕ್ಕೆ ಪ್ರತ್ಯುತ್ತರ ನೀಡುವುದಕ್ಕಾಗಿ ನಾವು ಸಿದ್ದರಿರುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ.

೩. ಚೀನಾ ಅನೇಕ ವರ್ಷಗಳಿಂದ ಪ್ರತ್ಯಕ್ಷ ನಿಯಂತ್ರಣ ರೇಖೆಯ ಮೇಲೆ ಪರಿಸ್ಥಿತಿಯನ್ನು ಹಂತಹಂತವಾಗಿ ಬದಲಾಯಿಸಲು ಪ್ರಯತ್ನ ಮಾಡುತ್ತಿದೆ.

೪. ನಾವು ಯಾವಾಗಲೂ `ಪೆಟ್ರೋಲಿಂಗ್ ಪಾಯಿಂಟ್ ೧೫’ ವರೆಗೆ ಗಸ್ತು ಮಾಡುತ್ತೇವೆ: ಆದರೆ ಚೀನಿ ಸೈನಿಕರು ನಮಗೆ `ಪೆಟ್ರೋಲಿಂಗ್ ಪಾಯಿಂಟ್’ ಮೇಲೆ ಹೋಗುವುದನ್ನು ತಡೆಯಲು ಪ್ರಯತ್ನ ಮಾಡುತ್ತದೆ. ಇದು ಸಂಪೂರ್ಣವಾಗಿ ಒಪ್ಪಿಗೆ ಇಲ್ಲ. ನಮ್ಮನ್ನು ಗಸ್ತು ಮಾಡುವುದನ್ನು ತಡೆಯುವದಕ್ಕಾಗಿ ಒಂದು ಚಿಕ್ಕ ಚೌಕಿ ನಿರ್ಮಾಣ ಮಾಡಿದ್ದಾರೆ, ಅದರ ಬಗ್ಗೆ ನಾವು ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಹಿಗಿದ್ದರೂ ಕೂಡ, `ನಾವು ಹಿಂದೆ ಸರಿಯುವುದಿಲ್ಲ’ ಅದರ ಬಗ್ಗೆ ಅವರು ಪಟ್ಟು ಬಿದ್ದಿದ್ದಾರೆ. ಇದರ ಬಗ್ಗೆ ನಮ್ಮ ಸೈನಿಕರು ತೀವ್ರವಾಗಿ ನಿಷೇಧ ವ್ಯಕ್ತಪಡಿಸಿದ್ದಾರೆ. ಅದರ ನಂತರ ಚೀನಾ ಸೈನಿಕರು ಹೆಚ್ಚಿನ ಸಂಖ್ಯಾಬಲದ ಸಹಿತ ಬಂದರು. ಇದರಿಂದ ಅಲ್ಲಿ ಘರ್ಷಣೆ ಆಯಿತು. ಆದರೂ ಅವರಿಗೆ ಹಿಂತಿರುಗಿಸಲು ಬೇಕಾಗುವಷ್ಟು ನಮ್ಮ ಸೈನಿಕರು ಇದ್ದರು.

೫. ಮಾಜಿ ಜನರಲ್ ನರವಣೆ ಇವರು ಪಾಕಿಸ್ತಾನದ ಮಾಜಿ ಸೈನ್ಯ ದಳ ಪ್ರಮುಖ ಜನರಲ್ ಕಮರ್ ಜಾವೇದ್ ಬಾಜವಾ ಇವರ `೧೯೭೧ ರ ಬಾಂಗ್ಲಾದೇಶ ಯುದ್ಧದಲ್ಲಿನ ಪರಾಭವ ಇದು ರಾಜಕೀಯ ಪರಭವವಾಗಿತ್ತು, ಇದು ಪಾಕಿಸ್ತಾನಿ ಸೈನ್ಯದ ಪರಾಭವಾಗಿರಲಿಲ್ಲ. ಪಾಕಿಸ್ತಾನವು ಕೇವಲ ೩೪ ಸಾವಿರ ಸೈನಿಕರು ಭಾರತದ ಮುಂದೆ ಆತ್ಮಸಮರ್ಪಣೆ ಮಾಡಿದ್ದರು, ೯೩ ಸಾವಿರ ಅಲ್ಲ’ ಈ ಹೇಳಿಕೆ ತಳ್ಳಿ ಹಾಕಿದ್ದಾರೆ. ಅವರು, ನೀವು ಸತ್ಯ ಮತ್ತು ಇತಿಹಾಸ ಬದಲಾಯಿಸಲು ಸಾಧ್ಯವಿಲ್ಲ. ೧೯೭೧ ರಲ್ಲಿ ಪಾಕಿಸ್ತಾನಿ ಸೈನ್ಯದ ಜನರಲ್ ನಿಯಾಝಿ ಆತ್ಮ ಸಮರ್ಪಣೆ ಮಾಡಿರುವುದು ಛಾಯಾಚಿತ್ರ `ನಾವು (ಭಾರತ) ಏನನ್ನು ಮಾತನಾಡದೆ ಏನು ಮಾಡಬಹುದು? ಇದನ್ನು ತೋರಿಸುತ್ತೇವೆ. ಕಾರ್ಗಿಲ್ ನ ಸಮಯದಲ್ಲಿ ಕೂಡ ಪಾಕಿಸ್ತಾನವು ಸತ್ಯ ಸ್ವೀಕರಿಸಲಿಲ್ಲ ಎಂದು ಹೇಳಿದರು.