`ಭಾರತದೊಂದಿಗೆ ಉತ್ತಮ ಸಂಬಂಧ ಮತ್ತು ಗಡಿಯಲ್ಲಿ ಶಾಂತಿ ಕಾಪಾಡಲು ನಾವು ಕಟಿಭದ್ಧರಾಗಿದ್ದೇವೆ !’ (ಅಂತೆ) – ಚೀನಾ

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ

ಬೀಚಿಂಗ್ (ಚೀನಾ) – ಚೀನಾ ಭಾರತದೊಂದಿಗಿನ ಸಂಬಂಧ ಉತ್ತಮ, ಸ್ಥಿರ ಮತ್ತು ಗಟ್ಟಿಗೊಳಿಸಲು ಸಿದ್ಧವಿದೆ. ಜೊತೆಗೆ ಭಾರತ ಮತ್ತು ಚೀನಾದ ಗಡಿಯ ಹತ್ತಿರದ ಪ್ರದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ನಾವು ಕಟಿಬದ್ಧರಾಗಿದ್ದೇವೆ, ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇವರು ಹೇಳಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶದ ತವಾಂಗನ ಗಡಿಯ ಹತ್ತಿರ ಭಾರತೀಯ ಸೈನ್ಯವು ಚೀನಾದ ನುಸುಳುಕೋರ ಸೈನಿಕರಿಗೆ ಥಳಿಸಿದ ನಂತರ ಮೊದಲ ಬಾರಿಗೆ ಚೀನಾದಿಂದ ಈ ರೀತಿಯ ಹೇಳಿಕೆ ನೀಡಲಾಗಿದೆ.

ಪತ್ರಕರ್ತರನ್ನುದ್ದೇಶಿ ಮಾತನಾಡುವಾಗ ವಾಂಗ್ ಇವರು, ಚೀನಾ ಮತ್ತು ಭಾರತ ರಾಜಕೀಯ ಮತ್ತು ಸೈನಿಕರ ಮಾಧ್ಯಮದಿಂದ ಸಂವಾದ ಶಾಶ್ವತವಾಗಿರಿಸಬೇಕು. ಎರಡು ದೇಶದ ಗಡಿಯ ಭಾಗದಲ್ಲಿ ಸ್ಥಿರತೆ ಕಾಪಾಡುವುದಕ್ಕಾಗಿ ವಚನಭದ್ಧರಾಗಿದ್ದೇವೆ. ನಾವು ಒಟ್ಟಾಗಿ ಕೆಲಸ ಮಾಡುವುದಕ್ಕೆ ಸಿದ್ಧರಿದ್ದೇವೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • `ಹಿಂದಿ-ಚಿನಿ ಭಾಯಿ ಭಾಯಿ ಎನ್ನುತ್ತಾ ಭಾರತದ ಮೇಲೆ ದಾಳಿ ಮಾಡಿ ಸಾವಿರಾರು ಚದರ ಕಿಲೋ ಮೀಟರ್ ಭೂಮಿಯನ್ನು ಕಬಳಿಸಿರುವ ಚೀನಾದ ಈ ರೀತಿಯ ಹೇಳಿಕೆಯ ಮೇಲೆ ಎಳೆ ಮಕ್ಕಳಾದರೂ ವಿಶ್ವಾಸ ಇಡುವರೇ ?

  • ಇಂತಹ ಚೀನಾದಿಂದ ಭಾರತ ಯಾವಾಗಲೂ ಎಚ್ಚರಿಕೆಯಿಂದರಲೂ ಅವಶ್ಯಕವಾಗಿದೆ !