ಚೀನಾ, ಜಪಾನ್, ದಕ್ಷಿಣ ಕೋರಿಯಾ, ಹಾಂಕಾಂಗ್ ಮತ್ತು ಥೈಲ್ಯಾಂಡ್ ಈ ದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗರಿಗಾಗಿ `ಆರ್ಟಿಪಿಸಿಆರ್’ ಪರೀಕ್ಷೆ ಅನಿವಾರ್ಯ !

ನವ ದೆಹಲಿ – ಚೀನಾ ಮತ್ತು ಜಪಾನ್ ಎರಡು ದೇಶಗಳಲ್ಲಿ ಕೋರೋನ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಭಾರತವು ಚೀನಾ, ಜಪಾನ್, ದಕ್ಷಿಣ ಕೋರಿಯಾ, ಹಾಂಕಾಂಗ್ ಮತ್ತು ಥೈಲ್ಯಾಂಡ್ ಈ ದೇಶದಿಂದ ಬರುವ ಪ್ರವಾಸಿಗರಿಗಾಗಿ `ಆರ್ಟಿಪಿಸಿಆರ್’ ಪರೀಕ್ಷೆ ಅನಿವಾರ್ಯಗೊಳಿಸಿದೆ. ಕೇಂದ್ರ ಆರೋಗ್ಯ ಸಚಿವರಾದ ಮನಸುಖ ಮಾಂಡವಿಯ ಇವರು ಈ ಮಾಹಿತಿ ನೀಡಿದರು.

ಮಾಂಡವಿಯ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಈ ದೇಶಗಳಲ್ಲಿ ಯಾವ ಪ್ರವಾಸಿಗಳಲ್ಲಿ ಕೊರೋನಾದ ಲಕ್ಷಣಗಳು ಕಾಣುವುದು ಅಥವಾ ಯಾವ ಪ್ರವಾಸಿಗರ ಪರೀಕ್ಷೆ (ಪಾಸಿಟಿವ್) ಸಕಾರಾತ್ಮಕವಾಗಿರುವುದು, ಆ ಪ್ರವಾಸಿಗರನ್ನು ಕೊರಂಟೈನ್ ನಲ್ಲಿ ಇರಿಸಲಾಗುವುದು. `ಏಆರ್ ಸೌಲಭ್ಯ’ ಈ ಅರ್ಜಿ ಸಹ ಅವರು ತುಂಬಿಸುವುದು ಕಡ್ಡಾಯವಾಗಿದೆ. ಇದರಲ್ಲಿ ಅವರು ಅವರ ಆರೋಗ್ಯದ ಪ್ರಸ್ತುತ ಸ್ಥಿತಿ ನಮೂದಿಸ ಬೇಕಾಗುವುದು ಎಂದು ಹೇಳಿದರು.