ಭಾರತ ಬಿಟ್ಟು ಬೇರೆ ಯಾವ ದೇಶವೂ ಚೀನಾವನ್ನು ಎದುರಿಸಲಾರದು ! – ಜರ್ಮನಿ

ಭಾರತದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಅಕರ್ಮನ್

ನವ ದೆಹಲಿ – ಅಭಿವೃದ್ಧಿ, ಜನಸಂಖ್ಯೆ ಮತ್ತು ಇತರ ಅಂಶಗಳ ವಿಷಯದಲ್ಲಿ, ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶವೂ ಚೀನಾದೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಭಾರತದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಅಕರ್ಮನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

೧. ಅಕರ್ಮನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಅರುಣಾಚಲ ಪ್ರದೇಶದಲ್ಲಿನ ಪ್ರತ್ಯಕ್ಷ ನಿಯಂತ್ರಣಾ ರೇಖೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆ ಚಿಂತೆಯ ಸಂಗತಿಯಾಗಿದೆ, ಅಲ್ಲಿ ಅಂತಾರಾಷ್ಟ್ರೀಯ ಗಡಿಯ ಉಲ್ಲಂಘನೆಯಾಗಬಾರದು. ಚೀನಾ ಮತ್ತು ರಷ್ಯಾಗೆ ಸಂಬಂಧಿಸಿದ ಅಂಶಗಳ ಕುರಿತು ಭಾರತ ಮತ್ತು ಜರ್ಮನಿ ಎರಡೂ ಪರಸ್ಪರ ಸಂಪರ್ಕದಲ್ಲಿದ್ದೇವೆ.

೨. ವ್ಯಾಪಾರದ ಬಗ್ಗೆ ಅಕರ್ಮನ್ ಅವರು ಮಾತನಾಡುತ್ತಾ, ವ್ಯಾಪಾರಕ್ಕೆ ಬಂದಾಗ, ಎಲ್ಲರೂ ಮಲೇಷಿಯಾ ಮತ್ತು ವಿಯೆಟ್ನಾಂ ಅನ್ನು ನೋಡುತ್ತಾರೆ ಅವರು ಹೀಗೇಕೆ ಮಾಡುತ್ತಿದ್ದಾರೆ ಎಬುದು ನನಗೆ ತಿಳಿಯುತ್ತಿಲ್ಲ. ಭಾರತದಲ್ಲಿನ ನಿಯಮಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಅಥವಾ ಭದ್ರತೆಯ ವಿಷಯ ಇದಕ್ಕೆ ಕಾರಣವಾಗಿರಬಹುದು. ಜರ್ಮನಿಯು ಚೀನಾದ ಮೇಲೆ ಬಹಳ ಹೆಚ್ಚು ಪ್ರಮಾಣದಲ್ಲಿ ಅವಲಂಬಿಸಿದೆ. ನಾವು ಇತರ ದೇಶಗಳೊಂದಿಗೂ ವ್ಯಾಪಾರ ಮಾಡಬೇಕಾಗಿದೆ. ದುರದೃಷ್ಟವಶಾತ್, ಭಾರತವು ನಮ್ಮ ಆದ್ಯತೆಯಲ್ಲಿ ಎಷ್ಟು ಪ್ರಮಾಣದಲ್ಲಿರಬೇಕೋ ಅಷ್ಟು ಪ್ರಮಾಣದಲ್ಲಿಲ್ಲ ಎಂದು ಹೇಳಿದರು.