ತವಾಂಗನಲ್ಲಿ ಚೀನಾದ ಸೈನಿಕರು ಭಾರತದ ಗಡಿಯೊಳಗೆ ನುಸುಳುತ್ತಿದ್ದರು ! – ಲೆಫ್ಟಿನೆಂಟ ಜನರಲ ಕಲಿತಾ

ಗಡಿಯಲ್ಲಿ ಪರಿಸ್ಥಿತಿ ಸಹಜ ಮತ್ತು ನಿಯಂತ್ರಣದಲ್ಲಿದೆ ಎಂದು ಮಾಹಿತಿ

ಲೆಫ್ಟಿನೆಂಟ ಜನರಲ ಕಲಿತಾ

ಕೋಲಕಾತಾ (ಬಂಗಾಳ) – ಚೀನಾದ `ಪೀಪಲ್ಸ್ ಲಿಬರೇಶನ ಆರ್ಮಿ’ಯು ಅರುಣಾಚಲ ಪ್ರದೇಶದ ತವಾಂಗನ ಯಾಂಗ್ಟ್ಸೆಯಲ್ಲಿ ವಾಸ್ತವಿಕ ಗಡಿ ರೇಖೆಯನ್ನು ದಾಟಲು ಪ್ರಯತ್ನಿಸಿತ್ತು; ಆದರೆ ಭಾರತೀಯ ಸೇನೆಯು ಚೀನಾ ಸೇನೆಗೆ ದಿಟ್ಟ ಉತ್ತರ ನೀಡಿದೆ. ಇದರಿಂದ ಚೀನಾ ಸೇನೆಯು ಹಿಂದೆ ಸರಿಯಬೇಕಾಯಿತು. ಭಾರತೀಯ ಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ನಾನು ದೇಶದ ಜನತೆಗೆ ಭರವಸೆ ನೀಡುತ್ತೇನೆ ಎಂದು ಭಾರತೀಯ ಸೇನೆಯ ಪೂರ್ವ ಕಮಾಂಡನ ಲೆಫ್ಟಿನೆಂಟ ಜನರಲ ಕಲಿತಾ ಇವರು ಪ್ರತಿಪಾದಿಸಿದರು.

ಅವರು ಇಲ್ಲಿಯ 51 ನೇ ವಿಜಯೋತ್ಸವದ ಅಂಗವಾಗಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. `ಪ್ರಸ್ತುತ ಗಡಿಯಲ್ಲಿ ಪರಿಸ್ಥಿತಿ ಸಹಜ ಮತ್ತು ನಿಯಂತ್ರಣದಲ್ಲಿದೆ’ ಎಂದೂ ಅವರು ಸ್ಪಷ್ಟಪಡಿಸಿದರು. ಭಾರತವು 1971 ರ ಬಾಂಗ್ಲಾದೇಶ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಸ್ಮರಣಾರ್ಥವಾಗಿ ಭಾರತವು ಪ್ರತಿವರ್ಷ ಡಿಸೆಂಬರ್ 15 ಅನ್ನು ‘ವಿಜಯ ದಿನ’ ಎಂದು ಆಚರಿಸುತ್ತದೆ.