ನಾಟ್ಯಮಯ ಪರಿವರ್ತನೆಯ ನಮತರ ಪುಷ್ಪಕಮಲ ದಹಲ ಪ್ರಚಂಡರವರು ನೇಪಾಳದ ಪ್ರಧಾನಮಂತ್ರಿಯಾದರು !

 ಚೀನಾದ ಸಮರ್ಥಕರಾದ ಒಲೀಯವರೊಂದಿಗೆ ಮೈತ್ರಿ !

ಭಾರತದ ಸಮರ್ಥಕರಾದ ಶೇರ ಬಹಾದುರ ದೆವುಬಾರವರಿಗೆ ಆಘಾತ !

ನೇಪಾಳದ ಪ್ರಧಾನಮಂತ್ರಿ ಪುಷ್ಪಕಮಲ ದಹಲ

ಕಾಠಮಾಂಡು (ನೇಪಾಳ) – ನಾಟ್ಯಮಯ ಪರಿವರ್ತನೆಯ ನಂತರ ‘ಸಿ.ಪಿ.ಎನ್‌. ಮಾವೊವಾದಿ’ಪಕ್ಷದ ನೇತಾರರಾದ ಪುಷ್ಪಕಮಲ ದಹಲ ಪ್ರಚಂಡರವರು ನೇಪಾಳದ ಪ್ರಧಾನಮಂತ್ರಿಯಾದರು. ನೇಪಾಳದಲ್ಲಿ ನಡೆದ ಮಧ್ಯವರ್ತಿ ಚುನಾವಣೆಯಲ್ಲಿ ನೇಪಾಳಿ ಜನತೆಯು ನೇಪಾಳಿ ಕಾಂಗ್ರೆಸ್ಸಿನ ನೇತಾರರು ಹಾಗೂ ಭಾರತ ಸಮರ್ಥಕರಾದ ಶೇರ ಬಹಾದುರ ದೇವುಬಾರವರ ಪಕ್ಷದಲ್ಲಿ ತೀರ್ಪು ನೀಡಿದ್ದರಿಂದ ಅವರ ಪ್ರಧಾನಮಂತ್ರಿ ಪದವಿಯ ಮಾರ್ಗವು ಮುಕ್ತವಾಗಿರುವ ಚಿತ್ರಣವಿತ್ತು. ಪ್ರಚಂಡರವರು ನೇಪಾಳಿ ಕಾಂಗ್ರೆಸ್ಸಿನೊಂದಿಗೆ ಚುನಾವಣೆಯ ಮೊದಲು ಮೈತ್ರಿಕೂಟ ಮಾಡಿದ್ದರು. ಆದರೆ ಅವರು ಒಮ್ಮೆಲೆ ಪಲ್ಟಿ ಹೊಡೆಯುತ್ತ ಚೀನಾದ ಸಮರ್ಥಕರಾದ ಮಾಜಿ ಪ್ರಧಾನಮಂತ್ರಿ ಕೆ.ಪಿ. ಶರ್ಮಾರವರೊಂದಿಗೆ ಮ್ರೈತ್ರಿ ಮಾಡಿ ತನ್ನ ಕಡೆಗೆ ಪ್ರಧಾನಮಂತ್ರಿ ಪದವಿಯನ್ನು ಸೆಳೆದರು. ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿಯವರು ಈಗ ಪ್ರಚಂಡರವರಿಗೆ ಪ್ರಧಾನಮಂತ್ರಿಯ ಶಪಥಗ್ರಹಣ ಮಾಡಿಸುವರು. ಪ್ರಚಂಡರವರು ಮೂರನೇ ಬಾರಿ ನೇಪಾಳದ ಪ್ರಧಾನಮಂತ್ರಿಯಾಗಲಿದ್ದಾರೆ. ಅವರು ತಮಗೆ ೭ ಪಕ್ಷಗಳು ಸೇರಿ ೧೬೬ ಸಂಸದರ ಬೆಂಬಲವಿರುವುದಾಗಿ ಹೇಳಿದ್ದಾರೆ. ಪ್ರಚಂಡ ಹಾಗೂ ದೇವುಬಾರವರ ಮೈತ್ರಿಕೂಟದ ಚುನಾವಣೆಯು ಹೆಚ್ಚಿನ ಜಾಗಗಳಲ್ಲಿ ವಿಜಯ ಸಾಧಿಸಿತ್ತು.

ಸಂಪಾದಕೀಯ ನಿಲುವು

ನೇಪಾಳದಲ್ಲಿನ ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ನೋಡುತ್ತ ಭಾರತದ ಸಮರ್ಥಕರಾದ ದೇವುಬಾರವರನ್ನು ಪ್ರಧಾನಮಂತ್ರಿಯಾಗದಂತೆ ತಡೆಯುವುದರ ಹಿಂದೆ ಚೀನಾದ ಕೈವಾಡ ಇರುವ ಸಾಧ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ ! ಈಗ ಭಾರತವು ಹೆಚ್ಚು ಜಾಗೃತೆಯಿಂದ ಇರುವುದು ಆವಶ್ಯಕವಾಗಿದೆ !