ವಿವಿಧ ಸ್ತರಗಳಲ್ಲಿನ ಭಾರತದ ಭದ್ರತೆ ಮತ್ತು ಇತರ ರಾಷ್ಟ್ರಗಳ ನಿಲುವು !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಪಾಕಿಸ್ತಾನ ಮತ್ತು ಚೀನಾ ಭಾರತದ ಶತ್ರುರಾಷ್ಟ್ರಗಳಾಗಿವೆ. ಇವೆರಡೂ ರಾಷ್ಟ್ರಗಳು ಭಾರತದೊಂದಿಗೆ ಬಹಿರಂಗ ಯುದ್ಧವನ್ನು ಮಾಡುವುದಿಲ್ಲ, ಅವು ಭಯೋತ್ಪಾದನೆ, ಆರ್ಥಿಕ ಹಾನಿ ಮಾಡುವುದು ಇವುಗಳ ಮಾಧ್ಯಮದಿಂದ ತೊಂದರೆ ಕೊಡುತ್ತವೆ. ಇವೆಲ್ಲವುಗಳೊಂದಿಗೆ ಭಾರತ ಹೇಗೆ ಹೋರಾಡಲು ಪ್ರಯತ್ನಿಸುತ್ತಿದೆ, ಎನ್ನುವುದರ  ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಭಾರತೀಯ ಕ್ಷಿಪಣಿಯ ಸಂಗ್ರಹ ಚಿತ್ರ

೧. ಶಸ್ತ್ರಾಸ್ತ್ರಗಳು

೧ ಅ. ಭಾರತ ಆಫ್ರಿಕಾದ ದೇಶಗಳೊಂದಿಗೆ ಶಸ್ತ್ರಗಳಿಗೆ ಸಂಬಂಧಿಸಿದ ಒಪ್ಪಂದವನ್ನು ಮಾಡಿದೆ ! : ‘ಎಕ್ಝಿಟ್ ಬ್ಯಾಂಕ್’ನ ವರದಿಯಲ್ಲಿ ‘ಭಾರತವು ಆಫ್ರಿಕಾ ದೇಶಗಳ ಶಸ್ತ್ರಗಳ ಆವಶ್ಯಕತೆಯನ್ನು ಪೂರ್ಣಗೊಳಿಸುವುದು’, ಎಂದು ಹೇಳಿದೆ. ಅನಂತರ ಭಾರತವು ಆಫ್ರಿಕಾ ದೇಶಗಳಿಗೆ ಭೇಟಿ ನೀಡಿತು. ಆ ಸಮಯದಲ್ಲಿ ಅವರಿಗೆ ಪೂರೈಸುವ ಶಸ್ತ್ರಗಳ ಸಂದರ್ಭದಲ್ಲಿ ಒಪ್ಪಂದವನ್ನು ಮಾಡಲಾಯಿತು. ಇದರಿಂದ ದೇಶದಲ್ಲಿ ಶಸ್ತ್ರಾಸ್ತ್ರಗಳ ಉದ್ಯಮವೃದ್ಧಿಯಾಗಿ ಜನರಿಗೆ ನೌಕರಿ-ವ್ಯವಸಾಯ ಲಭಿಸುವವು.

೧ ಆ. ಶತ್ರುಗಳ ಕ್ಷಿಪಣಿಗಳಿಂದ ರಕ್ಷಣೆ ಪಡೆಯಲು ಭಾರತ ‘ಎಡೀ-೧’ ಎಂಬ ಕ್ಷಿಪಣಿಯ ಪರೀಕ್ಷಣೆಯನ್ನು ಮಾಡಿತು : ಭಾರತದ ‘ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ’ಯು (‘ಡಿ.ಆರ್.ಡಿ.ಓ.’) ಒಂದು ‘ಎಂಟೀ ಬ್ಯಾಲೆಸ್ಟಿಕ್ ಡಿಫೆನ್ಸ್’ ಯಂತ್ರದ ವಿಷಯದಲ್ಲಿ (ಕ್ಷಿಪಣಿವಿರೋಧಿ ರಕ್ಷಣಾ ಯಂತ್ರದ ವಿಷಯದಲ್ಲಿ) ಸಂಶೋಧನೆ ಮಾಡಿತು. ಅದು ಇಂಟರ್‌ಸೆಪ್ಟರ್ ‘ಎಡಿ-೧’ ಎಂಬ ಹೆಸರಿನ ಕ್ಷಿಪಣಿಯ ಪರೀಕ್ಷಣೆ ಮಾಡಿತು. ಶತ್ರುಗಳ ವಿಮಾನ ಅಥವಾ ಕ್ಷಿಪಣಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಭಾರತ ‘ಎಡಿ-೧’ ಈ ಕ್ಷಿಪಣಿಯನ್ನು ನಿರ್ಮಿಸಿದೆ. ಅದು ೩೦೦ ರಿಂದ ೪೦೦ ಕಿಲೋಮೀಟರ್‌ಗಳ ವರೆಗೆ ಕಾರ್ಯವನ್ನು ಮಾಡುತ್ತದೆ. ಆದುದರಿಂದ ಶತ್ರುಗಳ ಕ್ಷಿಪಣಿಗಳು ಅಥವಾ ಯುದ್ಧ ವಿಮಾನಗಳು ಭಾರತದಲ್ಲಿ ಪ್ರವೇಶಿಸುವುದರ ಮೊದಲೆ ಅವುಗಳನ್ನು ನಾಶ ಮಾಡಬಹುದು. ಇಂತಹ ಸಂಶೋಧನೆಗಳನ್ನು ಮುಂದುವರಿಸಬೇಕಾಗುವುದು. ಪಾಕಿಸ್ತಾನದಿಂದ ಬರುವ ಡ್ರೋನ್‌ಗಳನ್ನೂ ನಾಶಮಾಡಲು ಭಾರತ ಈಗ ಕ್ಷಿಪಣಿಗಳನ್ನು ತಯಾರಿಸುತ್ತಿದೆ.

೧ ಇ. ಶಸ್ತ್ರಾಸ್ತ್ರಗಳಲ್ಲಿ ಸ್ವಯಂಪೂರ್ಣವಾಗಲು ಭಾರತ ಸ್ವದೇಶಿ ಉದ್ಯೋಗಗಳನ್ನು  ಪ್ರೋತ್ಸಾಹಿಸುವುದು ! : ‘ಇನ್ನು ಮುಂದೆ ಯಾವುದೇ ಶಸ್ತ್ರಾಸ್ತ್ರಗಳನ್ನು ಆಮದು ಮಾಡಲಿಕ್ಕಿಲ್ಲ, ಅವುಗಳನ್ನು ನಮ್ಮ ದೇಶದಲ್ಲಿಯೆ ತಯಾರಿಸಲಾಗುವುದು’, ಎಂದು ಭಾರತ ನಿರ್ಧರಿಸಿದೆ. ಭಾರತ ಸರಕಾರಿ ಹಾಗೂ ಖಾಸಗಿ ಕಾರ್ಖಾನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದಕ್ಕಾಗಿ ಭಾರತೀಯ ಸೈನ್ಯವು ಈ ಉದ್ಯೋಗಗಳಿಂದ ೫ ವಿವಿಧ ಶಸ್ತ್ರಗಳ ಬೇಡಿಕೆಯನ್ನು ಮಾಡಿದೆ. ಅದರಲ್ಲಿ ‘ಮ್ಯಾನ್ ಪ್ಯಾಕ್ಟ್ ಹೈಫ್ರಿಕ್ವೆನ್ಸಿ ಸಾಫ್ಟ್‌ವೇರ್ ಡಿಸೈನ್’ ‘ರೆಡಿಯೋ ಸಿಸ್ಟಮ್’, ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಧನಗಳು, ತುಬಾಕಿಯಲ್ಲಿನ ಬಾಂಬ್‌ಗಳಿಗೆ ಗೈಡ್ ಮಾಡಿ ಆದಷ್ಟು ಹೆಚ್ಚು ನಿಖರವಾಗಿ ಮಾಡುವುದು ಇತ್ಯಾದಿ ವಿಷಯಗಳನ್ನು ಮಾಡಲು ಕಾರ್ಖಾನೆಗಳಿಗೆ ಹೇಳಲಾಗಿದೆ.

೨. ಭಾರತೀಯ ಆರ್ಥಿಕವ್ಯವಸ್ಥೆ 

೨ ಅ. ಭಾರತದ ಅರ್ಥವ್ಯವಸ್ಥೆಯ ಪ್ರಯಾಣ ವೇಗವಾಗಿ ಆಗುವುದು : ಭಾರತದ ಆಮದು-ರಫ್ತು ಹೆಚ್ಚಾಗಿದೆ. ಅದರಿಂದ ಭಾರತದ ‘ಫಾರಿನ್ ಎಕ್ಸೇಂಜ್ ರಿಝರ್ವ್’ ೬ ಅಬ್ಜ ಡಾಲರ್ಸ್‌ಗಳಷ್ಟು ಹೆಚ್ಚಾಗಿದೆ. ಭಾರತದ ಅರ್ಥವ್ಯವಸ್ಥೆಯು ವೇಗದಿಂದ ಮುಂದೆ ಸಾಗುತ್ತಿದೆ. ಅದರ ತುಲನೆಯಲ್ಲಿ ಇತರ ರಾಷ್ಟ್ರಗಳ ಅರ್ಥವ್ಯವಸ್ಥೆಗಳು ಬಹಳ ಕೆಳಗಿನ ಹಂತಕ್ಕೆ ಹೋಗಿವೆ.

೨ ಆ. ತಮ್ಮ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳದೆ ಪರಸ್ಪರ ಜಗಳವಾಡುವ ಪಾಕಿಸ್ತಾನ ! : ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಮೇಲೆ ಹಲ್ಲೆಯಾಯಿತು. ಆಗ ಅವರ ಮೇಲೆ ೪ ಗುಂಡುಗಳನ್ನು ಹಾರಿಸಲಾಯಿತು; ಆದರೆ ಅವರು ಸ್ವಲ್ಪದರಲ್ಲಿ ಪಾರಾದರು. ಇಮ್ರಾನ್ ಖಾನ್ ಇವರು ಶಾಹಬಾಜ್ ಶರೀಫ ಮತ್ತು ಪಾಕ್ ಸೈನ್ಯಕ್ಕೆ ಸವಾಲೆಸಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಗೃಹಯುದ್ಧ ನಡೆದಿದೆ. ಅಲ್ಲಿನ ಆರ್ಥಿಕವ್ಯವಸ್ಥೆಯು ಬಹಳ ಕಠಿಣ ಪರಿಸ್ಥಿತಿಯಲ್ಲಿದೆ. ಈ ಪರಿಸ್ಥಿತಿಯನ್ನು ಸುಧಾರಿಸುವ ಬದಲು ಅವರು ಪರಸ್ಪರ ಜಗಳವಾಡುತ್ತಿದ್ದಾರೆ.

೩. ಭಯೋತ್ಪಾದನೆ

೩ ಅ. ಸಿಲಿಂಡರ್ ಸ್ಫೋಟದಲ್ಲಿ ಮರಣಹೊಂದಿದ ಯುವಕನಿಗೆ ಮತ್ತು ‘ಐಸಿಸ್’ಗೆ ಸಂಬಂಧವಿದೆ ಎಂಬುದು ಬೆಳಕಿಗೆ ಬಂದಿದ್ದರೂ ತಮಿಳುನಾಡು ಸರಕಾರ ಈ ಪ್ರಕರಣದ ತನಿಖೆಯನ್ನು ಮಾಡಲು ತಯಾರಿಲ್ಲ ಹಾಗೂ ದೇಶದ ಭದ್ರತೆಯ ದೃಷ್ಟಿಯಿಂದ ಇದು ಅಪಾಯಕಾರಿಯಾಗಿದೆ : ತಮಿಳುನಾಡಿನ ಕೊಯಮುತ್ತೂರ್‌ನಲ್ಲಿ ಸಿಲಿಂಡರ್ ಸ್ಫೋಟದಲ್ಲಿ ಒಬ್ಬ ಯುವಕನು ಸಾವನ್ನಪ್ಪಿದನು. ತಮಿಳುನಾಡು ಸರಕಾರ ಈ ಘಟನೆಯನ್ನು ಅಡಗಿಸಲು ಪ್ರಯತ್ನಿಸಿತು; ಆದರೆ ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ತನ್ನ ಗಮನವನ್ನು ಹಾಕಿತು. ಆ ಯುವಕನ ವಾಹನದಲ್ಲಿ ಮೊಳೆಗಳು ಮತ್ತು ಬಾಂಬ್‌ಗಳಿಗೆ ಬೇಕಾಗುವ ಸಾಹಿತ್ಯಗಳು ಸಿಕ್ಕವು. ಅವನಿಗೆ ಮತ್ತು ‘ಐಸಿಸ್’ ಈ ಉಗ್ರವಾದಿ ಸಂಘಟನೆಯ ಜೊತೆಗೆ ಸಂಬಂಧವಿರುವುದು ಬೆಳಕಿಗೆ ಬಂದಿದೆ. ಇದರ ಅರ್ಥ ಮತಪೆಟ್ಟಿಗೆಯ ರಾಜಕಾರಣಕ್ಕಾಗಿ ತಮಿಳುನಾಡು ಸರಕಾರ ಅಪರಾಧಿಗಳ ತನಿಖೆಯನ್ನು ಮಾಡಲು ತಯಾರಿಲ್ಲ. ಇದೇ ರೀತಿ ಬಂಗಾಲದಲ್ಲಿಯೂ ನಡೆಯುತ್ತದೆ, ಅಲ್ಲಿನ ಸರಕಾರ ಇಂತಹ ಘಟನೆಗಳನ್ನು ಅಡಗಿಸಿಡುತ್ತದೆ ಹಾಗೂ ಎನ್.ಐ.ಎ.ಯನ್ನು ಅಲ್ಲಿಗೆ ಬರಲು ಬಿಡುವುದಿಲ್ಲ. ಇದು ದೇಶದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ.

೩. ಆ. ಜಮ್ಮು-ಕಾಶ್ಮೀರದ ಪೂಂಛ್‌ನಲ್ಲಿ ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ಮೂವರು ಉಗ್ರವಾದಿಗಳನ್ನು ಯಮಸದನಕ್ಕೆ ಅಟ್ಟುವಲ್ಲಿ ಸೈನಿಕರು ಯಶಸ್ವಿಯಾದರು

೩ ಇ. ಭಾರತದಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ಉಗ್ರವಾದ ವಿರೋಧಿ ಸಮಿತಿಯ ಸಭೆಯನ್ನು ತೆಗೆದುಕೊಳ್ಳಲಾಯಿತು ಮತ್ತು ಅದರಲ್ಲಿ ಎಲ್ಲ ಪ್ರತಿನಿಧಿಗಳಿಗೆ ಭಾರತದಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಮಾಹಿತಿಯನ್ನು ನೀಡಲಾಯಿತು : ವಿಶ್ವ ಸಂಸ್ಥೆಗಳ ಭದ್ರತಾ ಪರಿಷತ್ತಿನ ಜಾಗತಿಕ ಸ್ತರದಲ್ಲಿ ಉಗ್ರವಾದ ವಿರೋಧಿ ಸಮಿತಿ ಇದೆ. ಇತ್ತೀಚೆಗಷ್ಟೆ ಈ ಸಮಿತಿಯ ಒಂದು ಸಭೆಯನ್ನು ಭಾರತ ಪ್ರಯತ್ನಪೂರ್ವಕ ತನ್ನ ದೇಶದಲ್ಲಿ ಆಯೋಜಿಸಿತ್ತು. ಈ ಸಭೆಯು ಮುಂಬಯಿಯ ಹೋಟೇಲ್ ತಾಜ್‌ನಲ್ಲಿ ನೆರವೇರಿತು. ಅಲ್ಲಿ ೨೬ ನವೆಂಬರ್ ೨೦೦೮ ರಂದು ಉಗ್ರವಾದಿಗಳು ಮಾಡಿದ ಆಕ್ರಮಣದ ವಿಷಯವನ್ನು ಪ್ರತಿನಿಧಿಗಳು ತಿಳಿದುಕೊಂಡರು. ಅನಂತರ ಅವರನ್ನು ದೆಹಲಿಗೆ ಕರೆದೊಯ್ಯಲಾಯಿತು. ಅಲ್ಲಿ ೨೦೦೧ ರಲ್ಲಿ ಸಂಸತ್ತಿನ ಮೇಲಾದ ಆಕ್ರಮಣದ ಮಾಹಿತಿಯನ್ನು ನೀಡಲಾಯಿತು. ಈ ಸಭೆಯಲ್ಲಿ ಅನೇಕ ವಿಷಯಗಳ ಮೇಲೆ ಗಮನವನ್ನು ಕೇಂದ್ರಿಕರಿಸಲಾಯಿತು. ಇದರಲ್ಲಿ ‘ಆನ್‌ಲೈನ್’ ಭಯೋತ್ಪಾದನೆಯಲ್ಲಿ ಹೆಚ್ಚಳ, ಉಗ್ರರ ‘ಆನ್‌ಲೈನ್’ ಭರ್ತಿ, ‘ಆನ್‌ಲೈನ್’ದಲ್ಲಿ ಹಣ ಸಂಗ್ರಹ, ಡ್ರೋನ್‌ಗಳ ಸಹಾಯದಿಂದ ಪಾಕಿಸ್ತಾನ ಪಂಜಾಬ್‌ನಲ್ಲಿ ಅಮಲು ಪದಾರ್ಥಗಳ ಕಳ್ಳಸಾಗಾಟ ಇತ್ಯಾದಿಗಳ ಬಗ್ಗೆ ಚರ್ಚೆಯನ್ನು ಮಾಡಲಾಯಿತು.

ಕಳೆದ ವರ್ಷ ಪಾಕಿಸ್ತಾನದಿಂದ ಅಮಲು ಪದಾರ್ಥಗಳು ತುಂಬಿರುವ ೧೦೦ ಡ್ರೋನ್‌ಗಳು ಪಂಜಾಬಗೆ ಬಂದಿದ್ದವು; ಆದರೆ ಭಾರತೀಯ ಭದ್ರತಾದಳದವರಿಗೆ ಅವುಗಳನ್ನು ಹೊಡೆದುರುಳಿಸಲು ಸಾಧ್ಯವಾಗಲಿಲ್ಲ. ಅದರಲ್ಲಿನ ೮ ಡ್ರೋನಗಳನ್ನು ವಶಪಡಿಸಿಕೊಳ್ಳಲಾಯಿತು, ಬಾಕಿ ಡ್ರೋನ್‌ಗಳು ಸಾಹಿತ್ಯವನ್ನು ಎಸೆದು ಪಲಾಯನ ಮಾಡಿದವು. ಪಾಕಿಸ್ತಾನವು ಪಂಜಾಬ್‌ನಲ್ಲಿ ಖಲಿಸ್ತಾನ ಭಯೋತ್ಪಾದನೆಯ ಬದಲು ಅಫೂ-ಗಾಂಜಾದ ಭಯೋತ್ಪಾದನೆಯನ್ನು ಹೆಚ್ಚಿಸುತ್ತಿದೆ. ಇದನ್ನೆ ಭಾರತವು ಜಗತ್ತಿನ ಮುಂದಿಡಲು ಪ್ರಯತ್ನಿಸಿತು.

೪. ವಿಶ್ವದ ಶತ್ರು : ಚೀನಾ !

೪ ಅ. ಇಡೀ ಜಗತ್ತಿನಲ್ಲಿ ಚೀನಾದ ವಿರುದ್ಧ ರೋಷವಿದೆ : ಚೀನಾದ ಅನೇಕ ಯೋಜನೆಗಳು ಇತರ ದೇಶಗಳಲ್ಲಿ ನಡೆಯುತ್ತಿವೆ. ಈ ಯೋಜನೆಗಳ ಮೇಲೆ ವಿವಿಧ ಆಕ್ರಮಣಗಳಾಗುತ್ತವೆ. ಆದ್ದರಿಂದ ಅವುಗಳ ರಕ್ಷಣೆಗಾಗಿ ಚೀನಾ ಅಲ್ಲಿ ಖಾಸಗಿ ಸುರಕ್ಷಾ ಸಂಸ್ಥೆಗಳನ್ನು ಕಳಿಸಲಿಕ್ಕಿದೆ. ಇದರಿಂದ ಜಗತ್ತಿನಲ್ಲಿ ಚೀನಾದ ವಿರುದ್ಧ ಎಷ್ಟು ಆಕ್ರೋಶವಿದೆ ಎಂಬುದು ಗಮನಕ್ಕೆ ಬರುತ್ತದೆ.

೪ ಆ. ಚೀನಾಕ್ಕೆ ಕೆನಡಾದ ವಿರೋಧ : ಚೀನಾ ಕೆನಡಾದ ಭೂಮಿಯಿಂದ ‘ಲಿಥಿಯಮ್’ ಧಾತುವನ್ನು ತೆಗೆಯುತ್ತಿತ್ತು. ಅದಕ್ಕೆ ಕೆನಡಾ ನಿರ್ಬಂಧ ಹೇರಿದೆ; ಏಕೆಂದರೆ ಲಿಥಿಯಮ್ ಇದು ಅತ್ಯಂತ ಕ್ಲಿಷ್ಟ ಧಾತು ಆಗಿದ್ದು ಅದಕ್ಕೆ ತುಂಬಾ ಮಹತ್ವ ಇದೆ.

೪ ಇ. ಅಮೇರಿಕಾದಿಂದಲೂ ಚೀನಾಗೆ ವಿರೋಧ : ಚೀನಾದ ಜೊತೆಗೆ ‘ಸೆಮಿಕಂಡಕ್ಟರ್’ಗಳ ವ್ಯಾಪಾರವನ್ನು ಸ್ವಲ್ಪವೂ ಮಾಡಲಿಕ್ಕಿಲ್ಲ. ಅದಕ್ಕಾಗಿ ಅಮೇರಿಕಾ ನೆದರ್‌ಲ್ಯಾಂಡದ ಮೇಲೆ ಒತ್ತಡವನ್ನು ಹಾಕಿದೆ. ಭಾರತವೂ ನೆದರ್‌ಲ್ಯಾಂಡದ ಮೇಲೆ ಒತ್ತಡವನ್ನು ಹಾಕುತ್ತಿದೆ. ಇದರಿಂದ ಚೀನಾದ ತಂತ್ರಜ್ಞಾನ ಹಿಂದೆ ಬೀಳುವುದು ಹಾಗೂ ಚೀನಾದ ಭಾರತದ ವಿರುದ್ಧ ಕಾರ್ಯವನ್ನು ಮಾಡುವ ಕ್ಷಮತೆ ಕ್ರಮೇಣ ಕಡಿಮೆಯಾಗುವುದು.

೪ ಈ. ಚೀನಾದ ವಿರುದ್ಧ ಫ್ರಾನ್ಸ್ ಭಾರತದ ಜೊತೆಗೆ : ಇಂಡೋ-ಫೆಸಿಫಿಕ್ ಸಾಗರದಲ್ಲಿ ಚೀನಾದ ಹಡಗುಗಳು ನುಸುಳುತ್ತವೆ. ಭಾರತ ಅದನ್ನು ಎದುರಿಸಲು ಪ್ರಯತ್ನಿಸುತ್ತದೆ. ಭಾರತಕ್ಕೆ ಸಹಾಯ ಮಾಡಲು ಫ್ರಾನ್ಸ್ ದೊಡ್ಡ ಪ್ರಮಾಣದಲ್ಲಿ ತನ್ನ ಹಡಗುಗಳನ್ನು ಇಂಡೋ-ಫೆಸಿಪಿಕ್ ಸಾಗರದಲ್ಲಿ ಕಳುಹಿಸುತ್ತಿದೆ.

೫. ಅಮೇರಿಕಾ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತಕ್ಕೆ ಸಹಕರಿಸಲು ಸಿದ್ಧ

ಅಮೇರಿಕಾ ಇತ್ತೀಚೆಗಷ್ಟೆ ‘ಯು.ಎಸ್ ನ್ಯಾಶನಲ್ ಡಿಫೆನ್ಸ್ ಸ್ಟ್ರೇಟಜೀ ೨೦೨೨’ ಅನ್ನು ಜಗತ್ತಿನ ಮುಂದೆ ಮಂಡಿಸಿದೆ. ಈ ‘ಸ್ಟ್ರೇಟಜಿ’ ಭಾರತದ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದರಿಂದ ಅಮೇರಿಕಾ ಭಾರತದ ಜೊತೆಗೆ ತಂತ್ರಜ್ಞಾನದ ಕ್ಷೇತ್ರದಲ್ಲಿ ಸಹಕರಿಸಲು ಪ್ರಯತ್ನಿಸುತ್ತಿದೆ ಎಂಬುದು ತಿಳಿಯುತ್ತಿದೆ. ಅಮೇರಿಕಾ ತಂತ್ರಜ್ಞಾನದ ಮಹಾಶಕ್ತಿಯಾಗಿದೆ. ಅದರಿಂದ ಭಾರತಕ್ಕೆ ತಂತ್ರಜ್ಞಾನ ಲಭಿಸಿದರೆ ದೇಶದ ಆರ್ಥಿಕ ಪ್ರಗತಿ ಸಹಿತ ಸೈನ್ಯ ಪ್ರಗತಿಯೂ ಹೆಚ್ಚು ವೇಗದಿಂದ ಆಗಬಹುದು. ಚೀನಾ ನಮ್ಮ ಮೊದಲ ಕ್ರಮಾಂಕದ ಶತ್ರು ಆಗಿದೆ, ಆದ್ದರಿಂದ ನಾವು ಚೀನಾದ ವಿರುದ್ಧ ಕೃತಿ ಮಾಡುವವರೇ ಇದ್ದೇವೆ’ ಎಂದು ಅಮೇರಿಕಾ ಹೇಳಿದೆ.

೬. ರಕ್ಷಣಾ ಒಪ್ಪಂದ

ಭಾರತದ ಸೈನ್ಯದಳ ಪ್ರಮುಖ ಜನರಲ್ ಮನೋಜ ಪಾಂಡೆ ಇವರು ಭಾರತ ಮತ್ತು ಭೂತಾನ ಇವುಗಳಲ್ಲಿ ರಕ್ಷಣಾ ಒಪ್ಪಂದವನ್ನು ಮಾಡಿದರು. ಪ್ರತಿವರ್ಷ ಭೂತಾನ ಮತ್ತು ಭಾರತದ ಸೈನ್ಯ ಭೂತಾನದಲ್ಲಿ ಸೈನ್ಯಾಭ್ಯಾಸ ಮಾಡುತ್ತದೆ.

೭. ಮಾಲಿನ್ಯ

ರಾಷ್ಟ್ರೀಯ ರಾಜಧಾನಿ ಕ್ಷೇತ್ರದಲ್ಲಿ (ದೆಹಲಿಯಲ್ಲಿ) ಕಳೆದ ಕೆಲವು ವಾರಗಳಿಂಂದ ಭಯಂಕರ ಹೊಗೆ ಹರಡಿದೆ. ಅಲ್ಲಿನ ಗಾಳಿ ವಿಷಯುಕ್ತವಾಗಿದೆ. ಇದರಿಂದ ಜನರು ಕಾಯಿಲೆ ಬೀಳುತ್ತಿದ್ದಾರೆ ಮತ್ತು ಕೆಲವರು ಸಾಯುತ್ತಿದ್ದಾರೆ. ಇದೇ ಸಮಯದಲ್ಲಿ ದೆಹಲಿಯ ಪಕ್ಕದ ರಾಜ್ಯ ಪಂಜಾಬ್‌ನಲ್ಲಿ ಪರಾಲಿಯನ್ನು (ಪಂಜಾಬ್ ರಾಜ್ಯದಲ್ಲಿನ ಕೃಷಿಕರು ಬೆಳೆಯ ಅವಶೇಷಗಳನ್ನು ಹೊರಗೆ ತೆಗೆಯಲು ಪರಾಲಿಯನ್ನು ಸುಡುತ್ತಾರೆ. ಪರಾಲಿಯು ಭತ್ತದ ಬೆಳೆಯ ಕೆಳಗಿನ ಉಳಿದ ಭಾಗವಾಗಿದೆ. ಭತ್ತದ ಮೇಲಿನ ಭಾಗವನ್ನು ಕತ್ತರಿಸಿದ ನಂತರ, ಯಾವ ಭಾಗವು ಕೆಳಗೆ ಉಳಿಯುತ್ತದೆಯೋ ಅದಕ್ಕೆ ಪರಾಲಿ ಎನ್ನುತ್ತಾರೆ. ಕೃಷಿಕರಿಗೆ ಅದರ ಯಾವುದೇ ಉಪಯೋಗ ಇರುವುದಿಲ್ಲ.) ಅದರಿಂದಾಗಿ ವಾತಾವರಣದಲ್ಲಿ ಹೊಗೆ ನಿರ್ಮಾಣವಾಗುತ್ತದೆ. ಇದನ್ನು ತಪ್ಪಿಸಲು ಪಂಜಾಬ್‌ನ ಕೃಷಿಕರಿಗೆ ಅನೇಕ ಪರ್ಯಾಯಗಳನ್ನು ನೀಡಲಾಗಿದೆ; ಆದರೆ ಅವರು ಕೇಳಲು ಸಿದ್ಧರಿಲ್ಲ. ದೆಹಲಿ ಸರಕಾರಕ್ಕೆ ಪಂಜಾಬ್ ಸರಕಾರವನ್ನು ನಿಲ್ಲಿಸುವ ಧೈರ್ಯವಿಲ್ಲ. ಆದ್ದರಿಂದ ಮುಂದಿನ ಎರಡು ತಿಂಗಳು ದೆಹಲಿಯ ಜನರಿಗೆ ಇದನ್ನು ಸಹಿಸಿಕೊಳ್ಳಬೇಕಾಗುವುದು.

೮.  ವಾಯುದಳದ / ವಿಮಾನಗಳ ಸುರಕ್ಷೆ 

೮ ಅ. ಭಾರತದ ವಾಯುದಳಕ್ಕಾಗಿ ‘ಸೀ ೨೯೫’ ಏರ್‌ಕ್ರಾಫ್ಟ್ ತಯಾರಿಸುವ ಯೋಜನೆ ! : ‘ಟಾಟಾ’ ಕಂಪನಿಯು ‘ಏರ್‌ಬಸ್’ ವಿಮಾನ ತಯಾರಿಸುವ ಕಂಪನಿಯೊಂದಿಗೆ ಒಂದು ಬಹುದೊಡ್ಡ ಒಪ್ಪಂದ ಮಾಡಿಕೊಂಡಿದೆ. ಭಾರತೀಯ ವಾಯುದಳಕ್ಕಾಗಿ ‘ಸೀ ೨೯೫’ ಏರ್‌ಕ್ರಾಫ್ಟ್ ಈ ವಿಮಾನಗಳನ್ನು ಭಾರತದಲ್ಲಿ ತಯಾರಿಸಲಾಗುವುದು. ಹಿಂದೆ ಭಾರತ ಸರಕಾರ ಈ ಕಂಪನಿಗೆ ಭಾರತದ ‘ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. ’ನೊಂದಿಗೆ ಈ ಯೋಜನೆಯನ್ನು ಮಾಡಲು ಹೇಳಿತ್ತು. ಜಗತ್ತಿನಲ್ಲಿನ ಇನ್ನಿತರ ಕಾರ್ಖಾನೆಗಳು ‘ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ.’ನೊಂದಿಗೆ ಈ ಯೋಜನೆಯನ್ನು ಮಾಡಲು ಸಿದ್ಧರಿರಲಿಲ್ಲ; ಏಕೆಂದರೆ ಅದರ ಕ್ಷಮತೆ ಬಹಳ ಕಡಿಮೆಯಿದೆ. ಅದೇ ರೀತಿ ಅವರ ಜೊತೆಗೆ ಕೆಲಸವನ್ನು ಮಾಡಲು ಯಾವುದೇ ದೇಶ ಸಿದ್ಧವಿಲ್ಲ. ಅವರು ಟಾಟಾದ ಜೊತೆಗೆ ಕೆಲಸವನ್ನು ಮಾಡಲು ಸಿದ್ದರಾಗಿದ್ದಾರೆ.

ಈಗ ೩-೪ ವರ್ಷಗಳಲ್ಲಿ ಭಾರತದಲ್ಲಿ ೪೦ ವಿಮಾನಗಳು ತಯಾರಾಗುವವು. ಸಾಧ್ಯವಾದರೆ ಈ ವಿಮಾನಗಳನ್ನು ಇತರ ರಾಷ್ಟ್ರಗಳಿಗೂ ರಫ್ತು ಮಾಡಲಾಗುವುದು. ನಾವು ಎಲ್ಲ ವಿಷಯಗಳನ್ನೂ ಭಾರತದಲ್ಲಿ ತಯಾರಿಸಲಾರೆವು; ಆದರೆ ಉಚ್ಚ ಮಟ್ಟದ ಯಾವ ಕಂಪನಿಗಳಿವೆಯೊ, ಅವರ ಸಹಾಯದಿಂದ ಭಾರತದಲ್ಲಿ ಒಳ್ಳೆಯ ಶಸ್ತ್ರಾಸ್ತ್ರ ತಯಾರಿಸಬಹುದು. ಭಾರತದಿಂದ ಇದೇ ಪ್ರಯತ್ನವಾಗುತ್ತಿದೆ.

೯. ಭಾರತೀಯ ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಳನ್ನು ಹಿಡಿಯುವುದು ಆವಶ್ಯಕ !

ಚೀನಾದ ವಿರುದ್ಧ ಕ್ರಮತೆಗೆದುಕೊಳ್ಳಲು ನಾವು ನಮ್ಮ ಮಿತ್ರ ರಾಷ್ಟ್ರಗಳ ಸಹಾಯ ಪಡೆಯಬೇಕು. ಅದರಿಂದ ಭಾರತದ ಖರ್ಚು ಕಡಿಮೆಯಾಗುವುದು ಹಾಗೂ ಚೀನಾದ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಶೀ ಜಿನ್‌ಪಿಂಗ್ ಇತ್ತೀಚೆಗಷ್ಟೆ ಚೀನಾದ ಸರ್ವಾಧಿಕಾರಿಯಾಗಿದ್ದು ಅವರು ಜೀವಮಾನವಿಡೀ ಅಧ್ಯಕ್ಷರಾಗಿರುವರು. ಆದ್ದರಿಂದ ಚೀನಾ ಮುಂಬರುವ ಕಾಲದಲ್ಲಿ ಸೈನ್ಯ ಮತ್ತು ಆಕ್ರಮಕತೆಯನ್ನು ಹೆಚ್ಚಿಸಬಹುದು. ಈ ಹಿನ್ನೆಲೆಯಲ್ಲಿ ಇತರ ರಾಷ್ಟ್ರಗಳಿಂದ ಭಾರತಕ್ಕೆ ಹೇಗೆ ಸಹಾಯ ಸಿಗುತ್ತಿದೆ ಎಂಬುದನ್ನು ನೋಡೋಣ.

ಜಪಾನ್ ತನ್ನ ಭೂಮಿಯ ಮೇಲೆ ‘ಹೈಪರ್‌ಸೊನಿಕ್’ ಕ್ಷಿಪಣಿಗಳನ್ನು ಅಳವಡಿಸುತ್ತಿದೆ. ಆದ್ದರಿಂದ ಚೀನಾದ ನೌಕಾದಳಗಳು ದಾಳಿ ಮಾಡಿದರೆ ಅದಕ್ಕೆ ಪ್ರತಿದಾಳಿಯನ್ನು ಇವುಗಳಿಂದ ಮಾಡಬಹುದು. ಉತ್ತರ ಮತ್ತು ದಕ್ಷಿಣ ಅಮೇರಿಕಾ ಖಂಡಗಳಲ್ಲಿನ ದೇಶಗಳಲ್ಲಿ ಸೈನ್ಯವಿಲ್ಲ, ಎಂಬುದನ್ನು ಗಮನಿಸಿ ಚೀನಾದ ಹಡಗುಗಳು ಅವರ ಸರಹದ್ದಿನಲ್ಲಿ ಹೋಗಿ ಮೀನುಗಳನ್ನು ಹಿಡಿಯುತ್ತವೆ. ಒಂದು ದ್ವೀಪದಲ್ಲಿ ಚೀನೀ ಹಡಗುಗಳಿಂದ ಮೀನು ಹಿಡಿಯುವ ಕಾರ್ಯ ನಡೆದಿತ್ತು. ಆಗ ಯು.ಎಸ್.ಎ. ಯ ದಡರಕ್ಷಕ ದಳದ ಸೈನಿಕರು ಅವರನ್ನು ಓಡಿಸಿದರು. ಭಾರತದ ಮೀನುಗಾರರು ಕೇವಲ ಭಾರತದ ತೀರದಲ್ಲಿಯೇ ಮೀನುಗಾರಿಕೆಯನ್ನು ಮಾಡುತ್ತಾರೆ; ಆದರೆ ಚೀನೀ ಮೀನುಗಾರರು ಯಾರೂ ಹೋಗಂದಂತಹ ಆಳವಾದ (ಆಳವಾದ ಅಂದರೆ ಸಮುದ್ರದ ದಡದಿಂದ ದೂರ) ಸಮುದ್ರಕ್ಕೆ ಹೋಗಿ ಅಲ್ಲಿ ಮೀನುಗಳನ್ನು ಹಿಡಿಯುತ್ತಾರೆ. ಭಾರತೀಯ ಮೀನುಗಾರರು ಅಂಡಮಾನ-ನಿಕೋಬಾರ ಅಥವಾ ಲಕ್ಷದ್ವೀಪದ ಸಮೀಪ ಹೋಗಿ ಮೀನುಗಳನ್ನು ಹಿಡಿಯಬೇಕು; ಆದರೆ ಅವರು ಹಾಗೆ ಮಾಡುವುದಿಲ್ಲ.

– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.