ದೇಶದಲ್ಲಿ ಪುನಃ ಮಾಸ್ಕ ಖಡ್ಡಾಯವಾಗುವ ಸಾಧ್ಯತೆಯಿದೆ ! – ಕೇಂದ್ರ ಸರಕಾರ

ಚೀನಾದಲ್ಲಿ ಕೊರೋನಾದಿಂದ ಉಂಟಾದ ಭೀಕರ ಪರಿಣಾಮ !

ನವದೆಹಲಿ – ಚೀನಾದಲ್ಲಿ ಕೊರೋನಾ ದೊಡ್ಡ ಪ್ರಮಾಣದಲ್ಲಿ ಭೀಕರ ರೂಪವನ್ನು ತಾಳಿದೆ. ಇಲ್ಲಿ ಮುಂದಿನ ೩ ತಿಂಗಳಲ್ಲಿ ಲಕ್ಷಾಂತರ ಜನರ ಸಾವು ಸಂಭವಿಸಲಿರುವ ಸಾಧ್ಯತೆಯನ್ನು ಊಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಜಗತ್ತಿನಲ್ಲಿ ಜಾಗೃತೆಯಿಂದಿರಲು ಎಚ್ಚರಿಸಲಾಗಿದೆ. ಭಾರತದಲ್ಲಿಯೂ ಕೇಂದ್ರೀಯ ಆರೋಗ್ಯ ಮಂತ್ರಿಗಳಾದ ಡಾ. ಭಾರತಿ ಪವಾರರವರು ‘ದೇಶದಲ್ಲಿ ಪುನಃ ಮಾಸ್ಕನ್ನು ಖಡ್ಡಾಯಗೊಳಿಸುವ ಸಾಧ್ಯತೆ ನಿರ್ಮಾಣವಾಗಿದೆ’, ಎಂದು ಪತ್ರಿಕಾ ಪರಿಷತ್ತಿನಲ್ಲಿ ಹೇಳಿದ್ದಾರೆ. ಚೀನಾದ ಪರಿಸ್ಥಿತಿಯಿಂದಾಗಿ ಭಾರತದಲ್ಲಿ ಜಾಗೃತೆಯ ಕ್ರಮವೆಂದು ಉಪಾಯಯೋಜನೆಗಳನ್ನು ಮಾಡಲಾಗುತ್ತಿದೆ. ಕೇಂದ್ರೀಯ ಆರೋಗ್ಯ ಮಂತ್ರಾಲಯದಿಂದ ಮಾರ್ಗದರ್ಶಕ ತತ್ತ್ವಗಳನ್ನು ಜ್ಯಾರಿಗೊಳಿಸಲಾಗಿದೆ. ಕೇಂದ್ರೀಯ ಆರೋಗ್ಯ ಮಂತ್ರಿಗಳಾದ ಭಾರತಿ ಪವಾರರವರು ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡುತ್ತ, ಕೊರೋನಾದಿಂದಾಗಿ ಕಳೆದ ೨ ವರ್ಷಗಳಲ್ಲಿ ದೇಶದಲ್ಲಿ ಅನೇಕ ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ಸಂಪೂರ್ಣ ದೇಶದಲ್ಲಿನ ಉದ್ಯೋಗಗಳು ಸ್ತಬ್ದವಾಗಿದ್ದವು. ಕೊರೋನಾದ ಮೇಲೆ ನಿಯಂತ್ರಣ ಸಾಧಿಸಲು ಭಾರತದಲ್ಲಿ ಕೊರೋನಾದ ಲಸಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಲಾಗಿತ್ತು. ಭಾರತವು ೨೨೦ ಕೋಟಿ ಲಸಿಕಾಕರಣದ ಹಂತವನ್ನು ತಲುಪಿದೆ. ಚೀನಾದಲ್ಲಿ ಪುನಃ ಕೊರೋನಾದ ಭೀಕರತೆಯು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಕೊರೋನಾದ ರೋಗಿಗಳು ಹೆಚ್ಚುತ್ತಿರುವುದರಿಂದ ಇತರ ದೇಶಗಳು ಜಾಗೃತೆ ವಹಿಸಲು ಆರಂಭಿಸಿವೆ. ವಿದೇಶದಿಂದ ಬರುವ ಜನರಿಂದ ಭಾರತದಲ್ಲಿ ಸೋಂಕು ಹರಡದಿರುವಂತೆ ಸರಕಾರವು ಗಮನ ನೀಡುವುದು, ಎಂದು ಹೇಳಿದರು.

ಕೊರೊನಾದ ‘ಒಮಿಕ್ರಾನ ಬಿಎಫ್‌.೭’ ವೈರಾಣುವಿನ ಹೆಚ್ಚುತ್ತಿರುವ ಪ್ರಭಾವ

ಆರೋಗ್ಯ ತಜ್ಞರು ಹೇಳಿರುವಂತೆ, ‘ಒಮಿಕ್ರಾನ ಬಿಎಫ್‌.೭’ ಎಂಬ ವೈರಾಣುವಿನಿಂದಾಗಿ ಚೀನಾದಲ್ಲಿ ರೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಮುಂದಿನ ೩ ತಿಂಗಳಲ್ಲಿ ಕೊರೋನಾದ ೩ ಅಲೆಗಳು ಬರುವ ಅಪಾಯವಿದೆ. ಆದುದರಿಂದ ೮೦ ಕೋಟಿ ಜನರಿಗೆ ಸೋಂಕು ಹರಡುವ ಸಾಧ್ಯತೆಯಿದೆ.

ಭಾರತದಲ್ಲಿ ಕಳೆದ ವಾರದಲ್ಲಿ ಕೊರೋನಾದಿಂದಾಗಿ ೧೨ ಜನರ ಮೃತ್ಯು

ಕಳೆದ ವಾರದಲ್ಲಿ ಭಾರತದಲ್ಲಿ ಕೊರೋನಾದ ೧ ಸಾವಿರದ ೧೦೩ ಹೊಸ ರೋಗಿಗಳು ಕಂಡುಬಂದಿದ್ದಾರೆ, ಆದರೆ ೧೨ ಜನರ ಸಾವು ಸಂಭವಿಸಿರುವುದನ್ನು ನೋಂದಾಯಿಸಲಾಗಿದೆ. ಕಳೆದ ೩ ದಿನಗಳಿಂದ ಒಂದು ಸಾವನ್ನೂ ನೋಂದಾಯಿಸಲಾಗಿಲ್ಲ.

ಹೆದರದೇ ಮಾರ್ಗದರ್ಶಕ ಸೂಚನೆಗಳನ್ನು ಪಾಲಿಸಿ ! – ಅದರ ಪೂನಾವಾಲಾ

ಪುಣೆಯಲ್ಲಿರುವ ಸಿರಮ ಇನಸ್ಟಿಟ್ಯೂಟ್‌ನ ಪ್ರಮುಖರಾದ ಅದರ ಪೂನಾವಾಲರವರು ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಅವರು ಮಾತನಾಡುತ್ತ, ಚೀನಾದಲ್ಲಿನ ಕೊರೋನಾ ರೋಗದಲ್ಲಿ ಹೆಚ್ಚಳವಾಗುತ್ತಿರುವ ವಾರ್ತೆಗಳು ಚಿಂತಾಜನಕವಾಗಿವೆ. ಆದರೆ ನಮ್ಮ ಉತ್ಕೃಷ್ಟ ಲಸೀಕಾಕರಣದ ಅಭಿಯಾನ ಮತ್ತು ಹಿಂದಿನ ಅನುಭವವನ್ನು ನೋಡಿದರೆ ಹೆದರುವ ಆವಶ್ಯಕತೆಯಿಲ್ಲ. ಭಾರತ ಸರಕಾರ ಹಾಗೂ ಆರೋಗ್ಯ ಮಂತ್ರಾಲಯವು ನೀಡಿರುವ ಮಾರ್ಗದರ್ಶಕ ತತ್ತ್ವಗಳನ್ನು ವಿಶ್ವಾಸವಿಟ್ಟು ಪಾಲನೆ ಮಾಡಬೇಕಿದೆ, ಎಂದು ಹೇಳಿದ್ದಾರೆ.