‘ಗೋಲ ಟೋಪಿಯನ್ನು ಧರಿಸಿ ‘ಈದ ಮುಬಾರಕ’ ಎಂದು ಹೇಳುವಾಗ ವಿಡಿಯೋ ಮಾಡಿ ಕಳುಹಿಸಿ !’(ಅಂತೆ)

  • ಪ್ರಯಾಗರಾಜ (ಉತ್ತರಪ್ರದೇಶ)ದಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ ಫತ್ವಾ

  • ಆಕ್ರೋಶಗೊಂಡ ಹಿಂದೂ ಪಾಲಕರಿಂದ ಮುಖ್ಯಮಂತ್ರಿಗಳ ಬಳಿ ದೂರು !

ಪ್ರಯಾಗರಾಜ (ಉತ್ತರಪ್ರದೇಶ) – ಈದ್‌ನ ನಿಮಿತ್ತ ನ್ಯಾಯನಗರ ಪಬ್ಲಿಕ್‌ ಸ್ಕೂಲ್‌, ಝೂಂಸಿ ಈ ಶಾಲೆಯು ವಿದ್ಯಾರ್ಥಿಗಳಿಗೆ ಕುರ್ತಾ, ಪಾಯಜಾಮ ಮತ್ತು ಗೋಲ ಟೋಪಿಯನ್ನು ಧರಿಸಿ ‘ಈದ ಮುಬಾರಕ’ ಎಂದು ಹೇಳುತ್ತಿರುವಾಗ ವಿಡಿಯೋ ಮಾಡಿ ಶಾಲೆಯ ಗುಂಪಿನಲ್ಲಿ ಪ್ರಸಾರ ಮಾಡುವ ಫತವಾ ತೆಗೆದಿತ್ತು. ಇದರೊಂದಿಗೆ ವಿದ್ಯಾರ್ಥಿನಿಯರಿಗೆ ಸಲವಾರ, ಕುರ್ತಾ, ದುಪಟ್ಟಾ ಧರಿಸಿ ಇದೇ ರೀತಿಯಲ್ಲಿ ಕೃತಿ ಮಾಡಲು ಹೇಳಲಾಗಿತ್ತು. ‘ಈ ಉಪಕ್ರಮದಲ್ಲಿ ಸಹಭಾಗಿಯಾಗುವ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಕೆಲವು ಅಂಕಗಳನ್ನು ನೀಡಲಾಗುವುದು, ಎಂದು ಶಾಲೆಯ ಸೂಚನಾಪತ್ರದಲ್ಲಿ ಹೇಳಲಾಗಿದೆ. ಇದರ ಮೇಲೆಯೂ ಪಾಲಕರು ಆಕ್ಷೇಪವೆತ್ತಿದ್ದಾರೆ.

೧. ಈ ಪ್ರಕರಣದಲ್ಲಿ ಸಂದೀಪ ಪಾಠಕರವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಜಿಲ್ಲಾಧಿಕಾರಿ ಮತ್ತು ಪೊಲೀಸರ ಬಳಿ ದೂರನ್ನು ದಾಖಲಿಸಿದ್ದಾರೆ. ಇದನ್ನು ತಕ್ಷಣ ಪರಿಗಣಿಸಿ ಪ್ರಯಾಗರಾಜ ಪೊಲೀಸರು ಝೂಂಸಿ ಪೊಲೀಸ ಠಾಣೆಯ ನಿರೀಕ್ಷರಿಗೆ ತನಿಖೆ ನಡೆಸಿ ಆವಶ್ಯಕವಾದ ಕಾರ್ಯಾಚರಣೆಯನ್ನು ಮಾಡಲು ಸೂಚಿಸಿದ್ದಾರೆ.

೨. ಶಾಲೆಯ ಮುಖ್ಯಾಧ್ಯಾಪಕರಾದ ಬುಶರಾ ಮುಸ್ತಫಾರವರು ದಸರಾ, ದೀಪಾವಳಿ, ಸ್ವಾತಂತ್ರ್ಯದಿನ, ಗಣರಾಜ್ಯದಿನಗಳಂತಹ ಎಲ್ಲ ಹಬ್ಬಗಳ ದಿನದಂದು ಶಾಲೆಯಲ್ಲಿ ಹೆಚ್ಚುವರಿ ಉಪಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದೇ ರೀತಿಯಲ್ಲಿ ಈ ವರ್ಷದಂದು ಈದ್‌ನ ನಿಮಿತ್ತವಾಗಿ ಮಕ್ಕಳಿಗೆ ‘ಈದ್‌ ಮುಬಾರಕ’ ಎಂದು ಹೇಳುತ್ತಿರುವಾಗ ವಿಡಿಯೋ ತಯಾರಿಸಲು ಹೇಳಲಾಗಿತ್ತು. (ದಸರಾ, ದೀಪಾವಳಿಯ ದಿನದಂದು ‘ಶುಭ ದಸರಾ’ ಅಥವಾ ‘ಶುಭ ದೀಪಾವಳಿ’ ಎಂದು ಹೇಳುತ್ತ ಅಲ್ಪಸಂಖ್ಯಾತ ಸಮಾಜದಲ್ಲಿನ ವಿದ್ಯಾರ್ಥಿಗಳಿಗೆ ವಿಡಿಯೋ ತಯಾರಿಸಿ ಕಳಿಸಲು ಈ ಹಿಂದೆ ಏಕೆ ಹೇಳಲಾಗಿಲ್ಲ? ಮುಖ್ಯಾಧ್ಯಾಪಕರು ಇದರ ಉತ್ತರ ನೀಡಬೇಕು ! – ಸಂಪಾದಕರು) ಯಾವ ಪಾಲಕರಿಗೆ ಒಪ್ಪಿಗೆ ಇಲ್ಲ ಅವರು ತಮ್ಮ ಮಕ್ಕಳನ್ನು ಶಾಲೆಯಿಂದ ತೆಗೆಯಬಹುದು. (ಹಿಂದೂ ಪಾಲಕರು ತಮ್ಮ ಮಕ್ಕಳನ್ನು ಇಂತಹ ಉದ್ಧಟ ಮತಾಂಧರ ಶಾಲೆಗೆ ಏಕೆ ಕಳುಹಿಸಬೇಕು ? ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ? – ಸಂಪಾದಕರು)

ಜಾತ್ಯಾತೀತತೆಯ ಹೆಸರಿನಡಿಯಲ್ಲಿ ಇಂತಹ ಫತವಾ ತೆಗೆಯುವ ಶಾಲೆಯು ಹಿಂದೂಗಳ ಹಬ್ಬಗಳ ಸಮಯದಲ್ಲಿ ಹಿಂದೂ ಪದ್ಧತಿಯಿಂದ ಬಟ್ಟೆಗಳನ್ನು ಧರಿಸಿ ಶುಭಾಶಯಗಳನ್ನು ನೀಡುವ ಬಗ್ಗೆ ಯಾವಾಗಲಾದರೂ ಸೂಚಿಸಿದೆಯೇ ?