ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳು ಇಫ್ತಾರ ಪಾರ್ಟಿಯನ್ನು ಆಯೋಜಿಸಿದ್ದರಿಂದ ವಿದ್ಯಾರ್ಥಿಗಳಲ್ಲಿ ಆಕ್ರೋಶ !

ವಾರಾಣಸಿ (ಉತ್ತರಪ್ರದೇಶ) – ಬನಾರಸ ಹಿಂದು ವಿಶ್ವವಿದ್ಯಾಲಯದಲ್ಲಿ ಇಫ್ತಾರ ಪಾರ್ಟಿಯನ್ನು ಆಯೋಜಿಸಲಾಯಿತು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿನ ಮಹಿಳಾ ಮಹಾವಿದ್ಯಾಲಯದಲ್ಲಿ ಎಪ್ರಿಲ್ ೨೭ರಂದು ಇಫ್ತಾರ ಪಾರ್ಟಿಯನ್ನು ವಿರೋಧಿಸಲಾಯಿತು. ಇಫ್ತಾರ ಪಾರ್ಟಿಯನ್ನು ಆಯೋಜಿಸಿದ ಕುಲಪತಿ ಪ್ರಾ. ಸುಧೀರ ಜೈನರವರ ವಿರುದ್ಧ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪರಿಸರದಲ್ಲಿ ಆಂದೋಲನ ನಡೆಸಿ ಅವರ ಪುತ್ತಳಿಯನ್ನು ಸುಟ್ಟು ಹಾಕಿದರು. ಈ ಇಫ್ತಾರ ಪಾರ್ಟಿಯಲ್ಲಿ ಮಹಿಳಾ ಮಹಾವಿದ್ಯಾಲಯದಲ್ಲಿನ ಮುಸಲ್ಮಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಮಯದಲ್ಲಿ ಡಾ. ಮಹಮ್ಮದ ಅಫಝಲ ಹುಸೈನರವರ ನೇತೃತ್ವದಲ್ಲಿ ರೊಜಾ ಹಾಗೂ ರಮಝಾನ ಬಗ್ಗೆ ಚರ್ಚೆ ಮಾಡಲಾಯಿತು.

೧. ಈ ಬಗ್ಗೆ ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳು, ‘ಕಳೆದ ಅನೇಕ ವರ್ಷಗಳಿಂದ ಇಲ್ಲಿ ಇಫ್ತಾರಿನ ಆಯೋಜನೆಯಾಗುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಕುಲಪತಿಗಳು ಬನಾರಸ ಹಿಂದೂ ವಿಶ್ವವಿದ್ಯಾಲಯವನ್ನು ‘ಜಾಮಿಯಾ ಮಿಲಿಯಾ ಉಸ್ಮಾನಿಯಾ ವಿಶ್ವವಿದ್ಯಾಲಯ’ (ಮುಸಲ್ಮಾನರ ವಿಶ್ವವಿದ್ಯಾಲಯ) ವನ್ನಾಗಿಸಿದ್ದಾರೆ. ಇದು ಮುಸಲ್ಮಾನರ ಓಲೈಕೆಯ ಪ್ರಯತ್ನವಾಗಿದೆ’ ಎಂದು ಹೇಳಿದರು.

೨. ಇಫ್ತಾರ ಕೂಟದ ಬಳಿಕ ವಿಶ್ವವಿದ್ಯಾಲಯದ ಪರಿಸರದ ಗೋಡೆಗಳ ಮೇಲೆ ಹಿಂದೂ ವಿರೋಧಿ ಘೋಷಣೆಗಳನ್ನು ಬರೆಯಲಾಯಿತು. ‘ಕಶ್ಮೀರ ತೊ ಬಸ ಝಾಂಕೀ ಹೈ, ಪೂರಾ ಕಶ್ಮೀರ ಬಾಕೀ ಹೈ’, ‘ಬ್ರಾಹ್ಮಣೋಂ ತೆರೀ ಕಬ್ರ ಖುದೆಗೀ ಬಿಎಚ್ಯೂ (ಬನಾರಸ ಹಿಂದೂ ವಿಶ್ವವಿದ್ಯಾಲಯ) ಕೀ ಧರತೀ ಪರ’ ಈ ರೀತಿಯ ಘೋಷಣೆಗಳನ್ನು ಬರೆಯಲಾಗಿದೆ. (ವಿಶ್ವವಿದ್ಯಾಲಯದಲ್ಲಿ ಇಫ್ತಾರನ್ನು ಆಯೋಜಿಸಿ ಕುಲಪತಿಗಳು ಏನು ಸಾಧಿಸಿದ್ದಾರೆ? ಮತಾಂಧರ ಹಿಂದೂ ದ್ವೇಷ ಹಾಗೂ ರಾಷ್ಟ್ರದ್ವೇಷವು ಹಾಗೆಯೇ ಇದೆ, ಎಂಬುದೇ ಇದರಿಂದ ಕಂಡುಬರುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಮುಸಲ್ಮಾನ ವಿದ್ಯಾರ್ಥಿಗಳಲ್ಲಿ ಕಟ್ಟರತೆಯನ್ನು ಹಬ್ಬಿಸಲು ‘ಅಲೀಗಡ ಮುಸ್ಲಿಮ್ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಲಾಯಿತು, ಹಾಗೂ ಭಾವೀ ಪೀಳಿಗೆಯು ರಾಷ್ಟ್ರಪ್ರೇಮೀ ಹಾಗೂ ಸುಸಂಸ್ಕೃತಿಯನ್ನು ಮುನ್ನಡೆಸಲು ಬನಾರಸ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಬನಾರಸ ವಿಶ್ವವಿದ್ಯಾಲಯದಲ್ಲಿನ ‘ಹಿಂದೂ’ ಶಬ್ಧವೇ ಅದರ ನಿಜವಾದ ಪರಿಚಯವಾಗಿದೆ. ಅದನ್ನೇ ಒರಸಿ ಹಾಕುವ ಪ್ರಯತ್ನವು ಸ್ವತಃ ಕುಲಪತಿಗಳಿಂದಲೇ ನಡೆಯುತ್ತಿದ್ದರೆ, ಅದು ಆಕ್ರೋಶಜನಕವೇ ಆಗಿದೆ !

*ಜಾತ್ಯಾತೀತತೆಯ ಹೆಸರಿನಲ್ಲಿ ‘ಹಿಂದೂ’ಗಳದ್ದು ಎಂದು ಗುರುತಿಸಲ್ಪಟ್ಟ ಭಾರತದಲ್ಲಿನ ವಿಶ್ವವಿದ್ಯಾಲಯವು ಇಫ್ತಾರನ್ನು ಆಯೋಜಿಸುತ್ತದೆ; ಆದರೆ ಮುಸಲ್ಮಾನರ ಶೈಕ್ಷಣಿಕ ಸಂಸ್ಥೆಗಳು ಅಥವಾ ಮಹಾವಿದ್ಯಾಲಯಗಳಲ್ಲಿ ಆರತಿ ಅಥವಾ ಪೂಜೆಯನ್ನಾದರೂ ಆಯೋಜಿಸಲಾಗಿದೆಯೇ? ಹಿಂದೂಗಳಲ್ಲಿ ಮಾರಣಾಂತಿಕ ಜಾತ್ಯಾತೀತೆಯು ಒಂದು ದಿನ ಅವರನ್ನು ವಿನಾಶದ ಕಂದಕಕ್ಕೆ ತಳ್ಳಲಿದೆ, ಎಂಬುದು ಖಚಿತ !