ಶೃಂಗಾರ ಗೌರಿ ಮಂದಿರ ಮತ್ತು ಜ್ಞಾನವಾಪಿ ಮಸೀದಿಯ ಪರಿಶೀಲನೆಗೆ ಮುಸಲ್ಮಾನರ ವಿರೋಧ !

ಹಿಂದೂಗಳಿಂದ ವಿರೋಧಕ್ಕೆ ಪ್ರತ್ಯುತ್ತರ ನೀಡುವ ಪ್ರಯತ್ನ !

ವಾರಾಣಸಿ (ಉತ್ತರಪ್ರದೇಶ) – ನ್ಯಾಯಾಲಯದ ಆದೇಶದ ಪ್ರಕಾರ ಮೇ ೬ ರಂದು ನ್ಯಾಯಾಲಯ ಆಯುಕ್ತರಿಂದ ಶೃಂಗಾರ ಗೌರಿ ಮಂದಿರ ಮತ್ತು ಜ್ಞಾನವಾಪಿ ಮಸೀದಿ ಇವುಗಳ ಚಿತ್ರೀಕರಣ ಮತ್ತು ಪರಿಶೀಲನೆ ನಡೆಸಲಾಯಿತು. ಶುಕ್ರವಾರ ಇರುವುದರಿಂದ ಜ್ಞಾನವಾಪಿ ಮಸೀದಿಯಲ್ಲಿ ಮಧ್ಯಾಹ್ನ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ನಮಾಜ್ ಪಠಣಕ್ಕಾಗಿ ಬಂದಿದ್ದರು. ಮಧ್ಯಾಹ್ನದ ನಂತರ ಇಲ್ಲಿ ನಿರೀಕ್ಷಣೆಗಾಗಿ ನ್ಯಾಯಾಲಯ ನೇಮಿಸಿರುವ ಎರಡು ಪಕ್ಷದ ನ್ಯಾಯವಾದಿಗಳು ಬಂದಿದ್ದರು, ಕಾಶಿ ವಿಶ್ವನಾಥ ಧಾಮದ ಪ್ರವೇಶ ಕ್ರಮಾಂಕ ೪ರ ಹೊರಗೆ ಮುಸಲ್ಮಾನರು ಇದಕ್ಕೆ ವಿರೋಧ ವ್ಯಕ್ತಪಡಿಸುವ ಪ್ರಯತ್ನ ಮಾಡಿದರು. ಆ ಸಮಯದಲ್ಲಿ ಹಿಂದೂಗಳಿಂದ ಈ ವಿರೋಧಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಲಾಯಿತು. ಈ ಸಮಯದಲ್ಲಿ ಎರಡೂ ಪಕ್ಷಗಳ ಜನಸಂದಣಿ ಆಗಿತ್ತು. ಮುಸಲ್ಮಾನರಿಂದ ಅಲ್ಲಾಹು ಅಕ್ಬರ್ ಹಾಗೂ ಹಿಂದೂಗಳಿಂದ ಹರ ಹರ ಮಹಾದೇವ ಎಂಬ ಘೋಷಣೆಗಳು ನೀಡಲಾಯಿತು. ಈ ಸಮಯದಲ್ಲಿ ಪೊಲೀಸರು ಎರಡು ಪಕ್ಷದವರನ್ನು ಚದುರಿಸಿದರು. ಇಲ್ಲಿ ಮೊದಲಿನಿಂದಲೇ ಪೊಲೀಸ ಬಂದೋಬಸ್ತು ಮಾಡಲಾಗಿತ್ತು. ಪೊಲೀಸ್ ಆಯುಕ್ತ ಎ. ಸತೀಶ ಗಣೇಶ ಇವರು ಗಮನ ಇಟ್ಟಿದ್ದರು, ಹಾಗೂ ಜ್ಞಾನವಾಪಿ ಮಸೀದಿಯ ರಸ್ತೆಯ ಮೇಲೆ ಕಾಣುವ ಭಾಗ ತೆರೆ ಎಳೆದು ಮುಚ್ಚಲಾಗಿತ್ತು.

ನ್ಯಾಯಾಲಯದ ಆದೇಶದ ಮೂಲಕ ಈಗ ಈ ಸ್ಥಳದ ಸ್ಥಿತಿ ಏನು ಎಂಬುವುದರ ಮಾಹಿತಿ ಪಡೆದರು. ಆ ಸಮಯದಲ್ಲಿ ಯಾವುದೇ ಅಳತೆ ಮಾಡಲಾಗಲಿಲ್ಲ. ನ್ಯಾಯಾಲಯ ನೇಮಿಸಿರುವ ಅಜಯ ಕುಮಾರ ಮಿಶ್ರಾ ಇವರು ತಾವಾಗಿಯೇ ಹೋಗಿ ಅಲ್ಲಿಯ ಸ್ಥಿತಿಯ ನಿರೀಕ್ಷಣೆ ನಡೆಸಿ ಅದರ ಚಿತ್ರೀಕರಣ ಮಾಡಿದರು. ಇದರ ವರದಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗುವುದು.

ಸಂಪಾದಕೀಯ ನಿಲುವು

ವಾರಾಣಸಿಯಲ್ಲಿ ಹಿಂದೂ ಮತ್ತು ಮುಸಲ್ಮಾನರು ಹೊಂದಿಕೊಂಡು ಬಾಳುತ್ತಿದ್ದಾರೆ, ಎಂದು ಹೇಳುವವರಿಗೆ ಕಪಾಳಮೋಕ್ಷ ! ನ್ಯಾಯಾಲಯದ ಆದೇಶದ ಪ್ರಕಾರ ನಡೆಯುವ ಚಿತ್ರೀಕರಣಕ್ಕೆ ಈ ರೀತಿ ವಿರೋಧ ಏಕೆ ಎಂಬುವುದಕ್ಕೆ ಜಾತ್ಯತೀತರು ಉತ್ತರ ನೀಡಬೇಕು ! ನ್ಯಾಯಾಲಯದ ಆದೇಶಕ್ಕೆ ವಿರೋಧಿಸಿ ಕೃತಿ ಮಾಡುವವರು ಎಂದಾದರೂ ಇತರರೊಂದಿಗೆ ಹೊಂದಿಕೊಂಡು ಬಾಳಲು ಸಾಧ್ಯವೇ ?