ಜ್ಞಾನವಾಪೀ ಮಸೀದಿಯ ಒಳಗಿನ ಸಮೀಕ್ಷೆ ಹಾಗೂ ಚಿತ್ರೀಕರಣ ನಡೆಸಲು ಬಿಡುವುದಿಲ್ಲ !

ನ್ಯಾಯಾಲಯದ ಆದೇಶವನ್ನು ನಿರಾಕರಿಸಿ ‘ಅಂಜುಮನ ಇಂತಜಾಮಿಯಾ ಮಸ್ಜೀದ ಕಮಿಟಿ’ಯ ಎಚ್ಚರಿಕೆ !

ವಾರಾಣಸಿ (ಉತ್ತರಪ್ರದೇಶ) – ವಾರಾಣಸಿಯ ದಿವಾನಿ ನ್ಯಾಯಾಲಯದಿಂದ ಮೇ ೩ ರಿಂದ ೧೦ ರವರೆಗೆ ಕಾಶೀ ವಿಶ್ವನಾಥ ದೇವಸ್ಥಾನ, ಜ್ಞಾನವಾಪಿ ಮಸೀದಿ, ಶೃಂಗಾರಗೌರಿ ದೇವಸ್ಥಾನ ಹಾಗೂ ಅಲ್ಲಿನ ಇತರ ಪರಿಸರದಲ್ಲಿ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಆದೇಶ ನೀಡಲಾಗಿದೆ. ನ್ಯಾಯಾಲಯವು ಮಸೀದಿಯ ಒಳಗಿನ ಭಾಗದ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಹೇಳಿದೆ; ಆದರೆ ಅದನ್ನು ‘ಅಂಜುಮನ ಇಂತಜಾಮಿಯಾ ಮಸ್ಜೀದ ಕಮಿಟಿ’ಯು ವಿರೋಧಿಸಿದೆ.

ಜಿಲ್ಲಾಡಳಿತ ಹಾಗೂ ವಾರಾಣಸಿ ಪೊಲೀಸ ಆಯುಕ್ತರು ಈ ಹಿಂದೆ ನ್ಯಾಯಾಲಯದ ಬಳಿ ಸುರಕ್ಷೆ ಹಾಗೂ ಶಾಂತಿಯ ಕಾರಣದಿಂದಾಗಿ ಸಮೀಕ್ಷೆ ಹಾಗೂ ಚಿತ್ರೀಕರಣವನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿತ್ತು.

ನಾವು ನ್ಯಾಯಾಲಯದ ಅವಮಾನದ ಪರಿಣಾಮವನ್ನು ಅನುಭವಿಸಲು ಸಿದ್ಧರಿದ್ದೇವೆ !

ಈ ಸಂದರ್ಭದಲ್ಲಿ ಖಟ್ಲೆಯಲ್ಲಿ ಮುಸಲ್ಮಾನ ಪಕ್ಷದವರಾದ ಅಂಜುಮನ ಇಂತಜಾಮಿಯಾ ಮಸ್ಜೀದ ಕಮಿಟಿಯ ಸಹಸಚಿವರಾದ ಸಯ್ಯದ ಮಹಮ್ಮದ ಯಾಸಿನರವರು ‘ಯಾವುದೇ ಪರಿಸ್ಥಿತಿಯಲ್ಲಿಯೂ ನ್ಯಾಯಾಲಯದ ಆಯುಕ್ತರ ಸಮೀಕ್ಷೆ ಹಾಗೂ ಚಿತ್ರೀಕರಣವನ್ನು ವಿರೋಧಿಸಲಾಗುವುದು. ಜ್ಞಾನವಾಪೀ ಮಸೀದಿಯ ಒಳಗೆ ಯಾರಿಗೂ ಹೋಗಲು ಬಿಡುವುದಿಲ್ಲ. ನಾವು ಅದನ್ನು ವಿರೋಧಿಸುವೆವು. ನ್ಯಾಯಾಲಯದ ಅವಮಾನವಾದರೂ ಕೂಡ ನಾವು ಅದರ ಪರಿಣಾಮವನ್ನು ಭೋಗಿಸಲು ಸಿದ್ಧರಿದ್ದೇವೆ; ಆದರೆ ಮಸೀದಿಯ ಒಳಗೆ ಹೋಗಲು ಬಿಡುವುದಿಲ್ಲ. ಈ ಎಲ್ಲಾ ಪ್ರಕರಣವು ಶೃಂಗಾರಗೌರಿ ದೇವಸ್ಥಾನದ್ದಾಗಿದೆ; ಆದರೆ ಹಿಂದೂಗಳಿಂದ ಅದರಲ್ಲಿ ಜ್ಞಾನವಾಪೀ ಮಸೀದಿಯ ಸೇರ್ಪಡೆಯ ಪ್ರಯತ್ನವಾಗುತ್ತಿದೆ. ಆದ್ದರಿಂದಲೇ ಆಯುಕ್ತರಿಗೆ ೨ ಬಾರಿ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಸಾಧ್ಯವಾಗಲಿಲ್ಲ. ಸಮೀಕ್ಷೆ ಹಾಗೂ ಚಿತ್ರೀಕರಣದ ಎಲ್ಲಾ ಪ್ರಯತ್ನಗಳು ಕೇವಲ ಧಾರ್ಮಿಕ ದ್ವೇಷ ಹಾಗೂ ರಾಜಕೀಯ ಕಾರಣಗಳಿಂದಲೇ ನಡೆಯುತ್ತಿವೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

ನ್ಯಾಯಾಲಯದ ಆದೇಶಕ್ಕೆ ಬಗ್ಗದವರ ಮೇಲೆ ಕ್ರಮಕೈಗೊಳ್ಳುವಂತೆ ಈಗ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಬೇಕು !

ಇದರಿಂದ ಭಾರತದಲ್ಲಿನ ಇಸ್ಲಾಮಿ ಸಂಸ್ಥೆಗಳು ಎಷ್ಟು ಉದ್ಧಟವಾಗಿವೆ, ಎಂಬುದು ನಮ್ಮ ಗಮನಕ್ಕೆ ಬರುತ್ತದೆ !