ಸಪ್ತರ್ಷಿಗಳ ಆಜ್ಞೆಯಂತೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದ ಅನುಭೂತಿ !

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿ

ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಇಲ್ಲಿಯವರೆಗೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ, ಹಾಗೆಯೇ, ಸಾಧಕರ ಎಲ್ಲ ತೊಂದರೆಗಳು ದೂರವಾಗಬೇಕೆಂದು, ೮ ಲಕ್ಷಕ್ಕಿಂತ ಹೆಚ್ಚು ಕಿಲೋಮೀಟರ್‌ಗಳಷ್ಟು ಪ್ರವಾಸ ಮಾಡಿ ವಿವಿಧ ದೇವಸ್ಥಾನಗಳಲ್ಲಿ ಪ್ರಾರ್ಥನೆ, ಪೂಜಾವಿಧಿಗಳನ್ನು ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಭಾರತದ ಈ ಅಜ್ಞಾತ; ಆದರೆ ಅತ್ಯಂತ ಜಾಗೃತವಾಗಿರುವ ತೀರ್ಥಕ್ಷೇತ್ರಗಳ ಮಾಹಿತಿ ಸಿಗಬೇಕೆಂದು, ಅಲ್ಲಿ ಚಿತ್ರೀಕರಣವನ್ನು ಮಾಡಿದರು ಮತ್ತು ಛಾಯಾಚಿತ್ರಗಳನ್ನೂ ಸಂಗ್ರಹಿಸಿದ್ದಾರೆ. ಆದ್ದರಿಂದಲೇ ನಮಗೆ ಈ ಪೌರಾಣಿಕ ಮಹತ್ವವಿರುವ ಸ್ಥಾನಗಳ ದರ್ಶನವಾಗುತ್ತಿದೆ. ಇದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘೧.೩.೨೦೨೦ ಈ ದಿನದಂದು ಬೆಂಗಳೂರಿನಲ್ಲಿ ಜರುಗಿದ ೧೪೨ ನೇ ನಾಡಿವಾಚನದಲ್ಲಿ ಸಪ್ತರ್ಷಿಗಳು ‘ಈರೋಡ್‌ನಲ್ಲಿ ೮.೩.೨೦೨೦ ಈ ದಿನದಂದು ನಡೆಯಲಿರುವ ‘ಶ್ರೀ ಮಹಾಲಕ್ಷ್ಮೀ ಲಕ್ಷಾರ್ಚನ ಪೂಜೆಯಲ್ಲಿ ಪಾಲ್ಗೊಂಡ ನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕರ್ನಾಟಕದ ಮಾವಿನಕೆರೆಯ ಲಕ್ಷ್ಮೀನಾರಾಯಣ ದೇವರು, ಕೊಂಡಜ್ಜಿಯಲ್ಲಿರುವ ಶ್ರೀ ವರದರಾಜ ಸ್ವಾಮಿ ದೇವಸ್ಥಾನ, ಚಿಕ್ಕಮಗಳೂರಿನ ದತ್ತಪೀಠ, ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಿ, ಹೊಸದುರ್ಗದ ಹಾಲು ರಾಮೇಶ್ವರ ದೇವಸ್ಥಾನ, ಅಮೃತಪುರದ ಶ್ರೀಅಮೃತೇಶ್ವರ ದೇವಸ್ಥಾನ ಮತ್ತು ಸಿಗಂದೂರಿನ ಚೌಡೇಶ್ವರಿ ದೇವಿಯ ದೇವಸ್ಥಾನ ಈ ದೇವಸ್ಥಾನಗಳಿಗೆ ಹೋಗಿ ಬರಬೇಕೆಂದು, ಹೇಳಿದ್ದರು.

೧. ಸಾಮಾನ್ಯವಾಗಿ ಭಕ್ತರಿಂದ ಕಿಕ್ಕಿರಿದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ  ಕೊರೊನಾ ಸೋಂಕಿನಿಂದಾಗಿ ಕೇವಲ ೧೦ ಜನರಿರುವುದು ಮತ್ತು ಅವರಲ್ಲಿನ ಒಬ್ಬರು ಸನಾತನದ ಸಾಧಕರಿರುವುದು

೧೬.೩.೨೦೨೦ ಈ ದಿನದಂದು ಸಪ್ತರ್ಷಿಗಳ ಆಜ್ಞೆಗನುಸಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೊರನಾಡಿನ ಶ್ರೀ ಅನ್ನಪೂರ್ಣೆಶ್ವರಿ ದೇವಿಯ ದೇವಸ್ಥಾನಕ್ಕೆ ಹೋಗಿದ್ದರು. ಆ ಸಮಯದಲ್ಲಿ ಭಾರತದಲ್ಲಿ ಕೊರೊನಾದ ಸೊಂಕು ಹರಡುತ್ತಿದ್ದುದರಿಂದ ಅನೇಕ ಸ್ಥಳಗಳಲ್ಲಿ ‘ದೇವಸ್ಥಾನಗಳನ್ನು ಮುಚ್ಚಲಾಗುತ್ತಿವೆ, ಎನ್ನುವ ವಾರ್ತೆಯು ಬರುತ್ತಿತ್ತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೇವಸ್ಥಾನಕ್ಕೆ ತಲುಪಿದಾಗ ಸಾಯಂಕಾಲದ ೬ ಗಂಟೆಯಾಗಿತ್ತು. ಯಾವಾಗಲೂ ಸಾವಿರಾರು ಭಕ್ತರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಈ ದೇವಸ್ಥಾನದಲ್ಲಿ ಆ ಸಮಯದಲ್ಲಿ ಕೇವಲ ೧೦ ಜನರು ಉಪಸ್ಥಿತರಿದ್ದರು. ಆ ೧೦ ಜನರಲ್ಲಿ ಶ್ರೀ. ಉದಯಕುಮಾರ ಎಂಬ ಸಾಧಕರೂ ಇದ್ದರು.

೨. ದೇವಸ್ಥಾನದ ಆಡಳಿತ ಮಂಡಳಿಯು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ದೇವಿಯ ದರ್ಶನಕ್ಕಾಗಿ  ಗರ್ಭಗುಡಿಯ ದೇವಿಯೆದುರು ಕುಳ್ಳಿರಿಸುವುದು ಮತ್ತು ರಾತ್ರಿ ಪ್ರಸಾದವನ್ನು ಸ್ವೀಕರಿಸಿ ಹೋಗಲು ಹೇಳುವುದು

ದೇವಸ್ಥಾನದ ಆಡಳಿತ ಮಂಡಳಿಯವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ದೇವಿಯ ದರ್ಶನವಾಗಬೇಕೆಂದು ಅವರನ್ನು ಮುಖ್ಯಗರ್ಭಗುಡಿಯ ಹೊರಗೆ ದೇವಿಯ ಎದುರೇ ಕುಳ್ಳಿರಿಸಿದರು. ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಮುಖ್ಯ ಅರ್ಚಕರು ಅವರಿಗೆ “ಮಾತಾಜಿ, ನೀವು ಎಷ್ಟು ಸಮಯ ಬೇಕಾದರೂ ಇಲ್ಲಿ ಕುಳಿತುಕೊಳ್ಳಬಹುದು. ಇಂದು ನೀವು ಕಣ್ತುಂಬ ದೇವಿಯ ದರ್ಶನವನ್ನು ಪಡೆಯಿರಿ ಮತ್ತು ರಾತ್ರಿ ಹೋಗುವಾಗ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಪ್ರಸಾದವನ್ನು ಸ್ವೀಕರಿಸಿಯೇ ಹೋಗಬೇಕು, ಎಂದು ಹೇಳಿದರು. ಅದರಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೇವಿಯ ಎದುರಿಗೆ ಹೋಗಿ ಕುಳಿತುಕೊಂಡರು.

೩. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದ ಅನುಭೂತಿ

೩ ಅ. ಸಪ್ತರ್ಷಿಗಳು ಹೇಳಿದಂತೆ ಸನಾತನದ ಸಾಧಕರಿಗಾಗಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯಲ್ಲಿ ಪ್ರಾರ್ಥಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕಣ್ಣುಗಳಿಂದ ಅಖಂಡ ಭಾವಾಶ್ರು ಹರಿಯುವುದು ಮತ್ತು ಅವರಿಗೆ ‘ದೇವಿಯ ಸ್ಥಾನದಲ್ಲಿ ತಾವೇ ಸ್ವತಃ ನಿಂತಿರುವಂತೆ ಅನುಭೂತಿ ಬರುವುದು : ದೇವಸ್ಥಾನವನ್ನು ಪ್ರವೇಶಿಸುವ ಮೊದಲು ಸಪ್ತರ್ಷಿಗಳಿಂದ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸನಾತನದ ಎಲ್ಲ ಸಾಧಕರಿಗಾಗಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಳಿ ಪ್ರಾರ್ಥನೆ ಮಾಡಬೇಕು ಎಂಬ ಸಂದೇಶ ಬಂದಿತು. ಅದರಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಮುಂಬರುವ ಆಪತ್ಕಾಲದಲ್ಲಿ ಸನಾತನದ ಎಲ್ಲೆಡೆಯ ಸಾಧಕರಿಗೆ ಆಹಾರಧಾನ್ಯಗಳ ಕೊರತೆ ಬಾಧಿಸಬಾರದು ಎಂದು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಳಿ ಪ್ರಾರ್ಥನೆ ಮಾಡಿದರು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸುಮಾರು ಒಂದೂವರೆ ಗಂಟೆಗಳ ಕಾಲ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಎದುರಿಗೆ ಕುಳಿತಿದ್ದರು. ಆ ಸಮಯದಲ್ಲಿ ಅವರ ಕಣ್ಣುಗಳಿಂದ ಸತತವಾಗಿ ಭಾವಾಶ್ರುಗಳು ಹರಿಯುತ್ತಿದ್ದವು. ಅವರಿಗೆ ‘ನಾನು ದೇವಿಯ ಒಳಗೆ ಒಳಗೆ ಹೋಗುತ್ತಿದ್ದೇನೆ ಮತ್ತು ದೇವಿಯ ಸ್ಥಾನದಲ್ಲಿ ನಾನೇ ನಿಂತಿದ್ದೇನೆ, ಎಂದು ಅರಿವಾಗುತ್ತಿತ್ತು.

೩ ಆ. ದೇವಸ್ಥಾನದ  ಆಡಳಿತಾಧಿಕಾರಿಯು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ದೇವಿಯ ಸೀರೆಯನ್ನು ಪ್ರಸಾದವೆಂದು ನೀಡುವುದು, ಆ ಪ್ರಸಾದದ ಸೀರೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಉಟ್ಟುಕೊಂಡಿದ್ದ ಸೀರೆ ಒಂದೇ ರೀತಿಯಾಗಿರುವುದು ಮತ್ತು ‘ಇದೆಲ್ಲವೂ ಮನಸ್ಸು ಮತ್ತು ಬುದ್ಧಿಯ ಆಚೆಗಿನದ್ದಾಗಿದೆ, ಎಂದು ಅರಿವಾಗುವುದು : ಯಾವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೊರಡುವ ಸಮಯ ಬಂದಿತೋ, ಆಗ ದೇವಸ್ಥಾನದ  ಆಡಳಿತಾಧಿಕಾರಿ ಮತ್ತು ಮುಖ್ಯ ಅರ್ಚಕರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ದೇವಿಯ ಎದುರಿಗೆ ನಿಲ್ಲಿಸಿ ದೇವಿಯ ಒಂದು ಸೀರೆಯನ್ನು ಪ್ರಸಾದದ ರೂಪದಲ್ಲಿ ನೀಡಿದರು. ಆ ಸೀರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಉಟ್ಟುಕೊಂಡಿದ್ದ ಸೀರೆಯಂತೆಯೇ ಇತ್ತು ! ಅದರ ನಕ್ಷೆ, ಬಣ್ಣ, ಸೆರಗು, ಅಂಚು ಎಲ್ಲವೂ ಒಂದೇ ರೀತಿಯದಾಗಿತ್ತು. ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಆ ದಿನ ದೇವಸ್ಥಾನಕ್ಕೆ ಹೋಗುವಾಗ ಉಟ್ಟುಕೊಂಡಿದ್ದ ಸೀರೆಯಂತಹ ಸೀರೆಯನ್ನೇ ದೇವಿಯು ನೀಡುವುದು, ಇದೆಲ್ಲವೂ ಮನಸ್ಸು ಮತ್ತು ಬುದ್ಧಿಯ ಆಚೆಗಿನದ್ದಾಗಿತ್ತು.

೪. ಶ್ರೀ ಅನ್ನಪೂರ್ಣೇಶ್ವರಿದೇವಿಯು ಸಾಧಕರಿಗೆ ನೀಡಿದ ಅನುಭೂತಿ !

ಆ ಸಮಯದಲ್ಲಿ ‘ದೇವಿಯು ತಾನು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಒಬ್ಬರೇ ಆಗಿದ್ದಾರೆ ಎನ್ನುವ ಬಗ್ಗೆ ನಮ್ಮೆಲ್ಲ ಸಾಧಕರಿಗೆ ಸಾಕ್ಷಿ ನೀಡಿದಳು, ಎಂದೆನಿಸಿ ನಮ್ಮೆಲ್ಲರ ಕಣ್ಣುಗಳಲ್ಲಿನ ಭಾವಾಶ್ರುಗಳು ಹರಿದು ಬಂದವು.

ಶ್ರೀ. ವಿನಾಯಕ ಶಾನಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೨.೧೦.೨೦೨೦)

ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ/ಸಂತರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು