|

ಪುಣೆ, ಏಪ್ರಿಲ್ ೯ (ವಾರ್ತೆ) – ತಮ್ಮ ತೇಜೋಮಯ ಮಾತು ಮತ್ತು ನಾಯಕತ್ವ ಕೌಶಲ್ಯದಿಂದ ಹಿಂದೂಗಳ ಪ್ರಭಾವಿ ಸಂಘಟನೆ ಮಾಡುತ್ತಿರುವ ಮತ್ತು ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಡೆಯಲು ಹೋರಾಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕರಾದ ಶ್ರೀ. ಸುನೀಲ್ ಘನವಟ್ ಅವರಿಗೆ ‘ಶ್ರೀರಾಮನವಮಿ ಉತ್ಸವ ಸಮಿತಿ’ಯಿಂದ ‘ಹಿಂದೂ ಶೌರ್ಯ ಪುರಸ್ಕಾರ ೨೦೨೫’ ನೀಡಿ ಗೌರವಿಸಲಾಯಿತು. ‘ಶ್ರೀರಾಮನವಮಿ ಉತ್ಸವ ಸಮಿತಿ, ಪುಣೆ’ಯು ಏಪ್ರಿಲ್ ೬ ರಂದು ಧನಕವಡಿಯಲ್ಲಿ ಶ್ರೀರಾಮನವಮಿಯ ನಿಮಿತ್ತ ಭವ್ಯ ಮೆರವಣಿಗೆಯನ್ನು ಆಯೋಜಿಸಿತ್ತು. ಮೆರವಣಿಗೆಯ ನಂತರ ಗಣ್ಯರನ್ನು ಸನ್ಮಾನಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿ ಎಂದ ತಕ್ಷಣ ರಾಷ್ಟ್ರ-ಧರ್ಮ ಪ್ರೇಮಿಗಳ ಮುಂದೆ ಬರುವ ಹೆಸರು ಶ್ರೀ. ಸುನೀಲ್ ಘನವಟ್ ಅವರದು! ಹಿಂದವೀ ಸ್ವರಾಜ್ಯ ಅಂದರೆ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ನೀಡುತ್ತಿರುವ ಕೊಡುಗೆಗಾಗಿ ಶ್ರೀ. ಸುನೀಲ್ ಘನವಟ್ ಅವರಿಗೆ ‘ಹಿಂದೂ ಶೌರ್ಯ ಪುರಸ್ಕಾರ ೨೦೨೫’ ನೀಡಿ ಗೌರವಿಸಲಾಯಿತು. ಕಾತ್ರಜ್ ಭಾಗದ ಸಂಘಚಾಲಕರಾದ ಶ್ರೀ. ಶಿವಾಜಿ ರಾವ್ ಮಾಲೆಗಾಂವಕರ್ ಅವರ ಹಸ್ತದಿಂದ ಶ್ರೀ. ಸುನೀಲ್ ಘನವಟ್ ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು. ಪುರಸ್ಕಾರ ಸ್ವೀಕರಿಸಿದ ನಂತರ ಸುನೀಲ್ ಘನವಟ್ ಅವರು ‘ಶ್ರೀರಾಮನವಮಿ ಉತ್ಸವ ಸಮಿತಿ’ಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಮಹಾಪೌರ ಶ್ರೀ. ದತ್ತಾಜಿ ಧನಕವಡೆ, ಶಾಸಕ ಶ್ರೀ. ಭೀಮರಾವ್ ಅಣ್ಣಾ ತಾಪ್ಕೀರ್, ರಾಷ್ಟ್ರಸಂತ ಭಾವು ಮಹಾರಾಜ್ ಪರಂಡೆ, ಯೋಗಿ ನಿರಂಜನನಾಥಜಿ, ಸಂಸದೆ ಶ್ರೀಮತಿ ಮೇಧಾ ಕುಲಕರ್ಣಿ, ಮಾಜಿ ನಗರಸೇವಕಿ ವರ್ಷಾ ತಾಪ್ಕೀರ್, ಮಾಜಿ ನಗರಸೇವಕಿ ಮೋಹಿನಿ ದೇವಕರ್, ಶ್ರೀ. ಸಚಿನ್ ಭೋಸ್ಲೆ, ಶ್ರೀ. ಬಾಳಾಸಾಹೇಬ್ ಬೋತ್ರೆ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ರಾಮರಾಜ್ಯ ಸ್ಥಾಪನೆಗೆ ಎಲ್ಲರೂ ಪ್ರಯತ್ನಿಸೋಣ! – ಸುನೀಲ್ ಘನವಟ್, ಸಂಘಟಕ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ, ಹಿಂದೂ ಜನಜಾಗೃತಿ ಸಮಿತಿ
ರಾಮರಾಜ್ಯ ಸ್ಥಾಪನೆಗಾಗಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಶ್ರೀರಾಮಜನ್ಮಭೂಮಿಯನ್ನು ಮರಳಿ ಪಡೆಯಲು ನಮಗೆ ೫೦೦ ವರ್ಷಗಳು ಬೇಕಾದವು. ಕಾಶಿ ಮತ್ತು ಮಥುರಾಕ್ಕಾಗಿ ಅಷ್ಟು ವರ್ಷಗಳು ಬೇಕಾಗುವುದಿಲ್ಲ, ಇದಕ್ಕಾಗಿ ಹಿಂದೂಗಳು ಪ್ರಯತ್ನಿಸಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಜಾಗೃತರಾಗಿರೋಣ! ರಾಮರಾಜ್ಯ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯಾಗುವವರೆಗೆ ಧನಕವಡಿಯ ಒಬ್ಬನೇ ಒಬ್ಬ ಯುವಕ ಸುಮ್ಮನೆ ಕೂರುವುದಿಲ್ಲ!, ಎಂದು ಹೇಳಿದರು.

ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಶ್ರೀ. ಸುನೀಲ್ ಘನವಟ್ ಅವರ ಅದ್ವಿತೀಯ ಕೊಡುಗೆ!ಶ್ರೀ. ಸುನೀಲ್ ಘನವಟ್ ಅವರು ಹಿಂದೂ ಜನಜಾಗೃತಿ ಸಮಿತಿಯ ಅಡಿಯಲ್ಲಿ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ೨೦೦೨ ರಿಂದ ಅಖಂಡವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀ. ಘನವಟ್ ಅವರು ಸಂಪೂರ್ಣ ಮಹಾರಾಷ್ಟ್ರ ಹಾಗೂ ಛತ್ತೀಸ್‌ಗಢದ ರಾಜ್ಯ ಸಂಘಟಕರಾಗಿದ್ದು, ಮಂದಿರ ಮಹಾಸಂಘ ಮತ್ತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ರಾಷ್ಟ್ರೀಯ ಸಂಘಟಕರಾಗಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಅವರು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು, ಹಿಂದೂಗಳನ್ನು ಸಂಘಟಿಸುವುದು, ಕೋಟೆಗಳ ರಕ್ಷಣೆಗಾಗಿ ಪ್ರಯತ್ನಿಸುವುದು, ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸುವುದು ಸೇರಿದಂತೆ ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಶ್ರೀ. ಸುನೀಲ್ ಘನವಟ್ ಅವರ ವಿಶೇಷತೆಯೆಂದರೆ ಅವರಲ್ಲಿರುವ ರಾಷ್ಟ್ರ-ಧರ್ಮಗಳ ಬಗೆಗಿನ ತೀವ್ರ ತಳಮಳದಿಂದಾಗಿ ಅವರು ಈವರೆಗೆ ನೀಡಿದ ಕರೆಗಳಿಂದ ಕಳೆದ ಕೆಲವು ವರ್ಷಗಳಲ್ಲಿ ಸಹಸ್ರಾರು ಹಿಂದೂಗಳು ಧರ್ಮಕಾರ್ಯ ಮಾಡುವ ಸಂಕಲ್ಪ ಮಾಡಿದ್ದಾರೆ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಅವರ ಈ ಕೊಡುಗೆ ಶ್ರೇಷ್ಠವಾದುದು. ಅವರು ನಡೆಸಿದ ವಿವಿಧ ಅಭಿಯಾನಗಳಿಗೂ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀ. ಘನವಟ್ ಅವರನ್ನು ಭೇಟಿಯಾದ ನಂತರ ಅನೇಕ ಹಿಂದೂತ್ವನಿಷ್ಠರು ರಾಷ್ಟ್ರ-ಧರ್ಮ ಕಾರ್ಯಗಳಿಗಾಗಿ ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದಾರೆ. ಅವರಲ್ಲಿ ಅನೇಕರು ಈಗ ಸಕ್ರಿಯರಾಗಿದ್ದಾರೆ. |
ವಿಶೇಷ: ರಾಮನವಮಿಯ ನಿಮಿತ್ತ ನಾವೆಲ್ಲರೂ ಹೇಗೆ ಒಟ್ಟಾಗಿ ಸೇರುತ್ತೇವೆಯೋ, ಹಾಗೆಯೇ ರಾಮರಾಜ್ಯ ಸ್ಥಾಪನೆಗಾಗಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲರೂ ಪ್ರತಿಜ್ಞೆ ಮಾಡೋಣವೇ? ಎಂದು ಶ್ರೀ. ಸುನೀಲ್ ಘನವಟ್ ಅವರು ಕೇಳಿದಾಗ, ಎಲ್ಲ ಧರ್ಮಪ್ರೇಮಿಗಳು ಕೈ ಎತ್ತಿ ತಮ್ಮ ಬೆಂಬಲ ಸೂಚಿಸಿದರು.