ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಜಗತ್ತಿನ ಸೂರ್ಯನಾಡಿಯಾಗಿರುವ ‘ಸೂರ್ಯತಾಲ ಮತ್ತು ಚಂದ್ರನಾಡಿಯಾಗಿರುವ ‘ಚಂದ್ರತಾಲ ಇವುಗಳ ದರ್ಶನ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ದೇವಭೂಮಿ ಹಿಮಾಚಲ ಪ್ರದೇಶದ ದೈವೀ ಪ್ರವಾಸದಲ್ಲಿ ಋಷಿಮುನಿ ಮತ್ತು ದೇವತೆಗಳ ಅನೇಕ ಸ್ಥಾನಗಳ ದರ್ಶನವನ್ನು ಪಡೆದರು. ಹಿಮಾಚಲ ಪ್ರದೇಶದಲ್ಲಿನ ‘ಲಾಹೌಲ ಪ್ರದೇಶದಲ್ಲಿ ‘ಸೂರ್ಯತಾಲ ಮತ್ತು ‘ಸ್ಪಿತೀ ಪ್ರದೇಶದಲ್ಲಿ ‘ಚಂದ್ರತಾಲವಿದೆ, ಎಂದು ಒಂದು ದಿನ ಹಿಮಾಚಲ ಪ್ರದೇಶ ಸರಕಾರದ ಸಾಂಸ್ಕೃತಿಕ ವಿಭಾಗದ ಅಧಿಕಾರಿಗಳಿಂದ ತಿಳಿಯಿತು. ತಾಲ ಎಂದರೆ ಸರೋವರ. ‘ಈ ಎರಡೂ ಸರೋವರಗಳು ತುಂಬಾ ಸುಂದರವಾಗಿವೆ; ಆದರೆ ಪ್ರವಾಸವು ಬಹಳ ಕಠಿಣವಾಗಿದೆ, ಎಂದು ಅವರು ಹೇಳಿದರು. ಈ ಮಾಹಿತಿ ತಿಳಿದ ನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಎಷ್ಟೇ ತೊಂದರೆಯಾದರೂ, ನಾವು ಸೂರ್ಯತಾಲ ಮತ್ತು ಚಂದ್ರತಾಲಕ್ಕೆ ಹೋಗೋಣ ಎಂದು ನಿರ್ಧರಿಸಿದರು. ಸನಾತನ ಸಂಸ್ಥೆಯ ಓರ್ವ ಹಿತಚಿಂತಕರಾದ ಶ್ರೀ. ಕಿಸನ ಸಿಂಗ್ ಇವರಿಂದ, ಸೂರ್ಯತಾಲದ ಕಡೆಗೆ ಹೋಗುವಾಗ ದಾರಿಯಲ್ಲಿ ಮೊದಲು ‘ದೀಪಕತಾಲ ಬರುತ್ತದೆ ಎಂದು ತಿಳಿಯಿತು. ಅದರ ದರ್ಶನವನ್ನೂ ಪಡೆಯುವುದೆಂದು ನಿರ್ಧರಿಸಿದೆವು. ಈ ವಾರ ನಾವು ಸೂರ್ಯತಾಲ, ದೀಪಕತಾಲ ಮತ್ತು ಚಂದ್ರತಾಲ ಈ ಮೂರು ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ.

ಶ್ರೀ. ವಿನಾಯಕ ಶಾನಭಾಗ

೧. ಸೂರ್ಯತಾಲ

ಹಿಮಾಚಲ ಪ್ರದೇಶದ ಮನಾಲಿಯಿಂದ ೧೪೦ ಕಿ.ಮೀ. ದೂರದ ಮನಾಲಿ-ಲೇಹ ರಸ್ತೆಯಲ್ಲಿ ಹಿಮಾಲಯ ಪರ್ವತದ ‘ಬಾರಲಾಚಾ ಲಾ ಪಾಸ್ನ ಹತ್ತಿರ ಒಂದು ಸುಂದರವಾದ ಸರೋವರವಿದೆ. ಅದಕ್ಕೆ ‘ಸೂರ್ಯತಾಲ ಎನ್ನುತ್ತಾರೆ. ಈ ಸರೋವರವು ಹಿಮಾಚಲ ರಾಜ್ಯದಲ್ಲಿನ ಲಾಹೌಲ ಪ್ರದೇಶದಲ್ಲಿದೆ. ಈ ಪ್ರದೇಶದಲ್ಲಿ ೩೬೫ ದಿನ ಮಂಜುಗಡ್ಡೆ (ಹಿಮ) ಇರುತ್ತದೆ. ಸೂರ್ಯ ತಾಲವು ಸಮುದ್ರಮಟ್ಟದಿಂದ ೧೬ ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಸೂರ್ಯತಾಲದಿಂದ ಭಾಗಾ ನದಿ ಉಗಮವಾಗಿದೆ ಮತ್ತು ಚಂದ್ರತಾಲದಿಂದ ಚಂದ್ರಾ ನದಿ ಉಗಮವಾಗಿದೆ. ಈ ಎರಡೂ ನದಿಗಳು ಮುಂದೆ ಒಂದಾಗಿ ಚಂದ್ರಭಾಗಾ ನದಿಯಾಗುತ್ತದೆ. ಈಗ ಅದನ್ನು ಜನರು ‘ಚೀನಾಬ ನದಿ ಎಂಬ ಹೆಸರಿನಿಂದ ಗುರುತಿಸುತ್ತಾರೆ.

೨. ದೀಪಕತಾಲ

ಮನಾಲಿಯಿಂದ ಸೂರ್ಯತಾಲಕ್ಕೆ ಹೋಗುವಾಗ ನಡುವೆ ರಸ್ತೆಯ ಬದಿಗೆ ದೀಪಕತಾಲ ಎಂಬ ಹೆಸರಿನ ಒಂದು ಸರೋವರವಿದೆ. (‘ದೀಪಕತಾಲವು ದೀಪದಂತೆ ಕಾಣಿಸುತ್ತದೆ. ದೀಪಕತಾಲದಲ್ಲಿ ಅಗ್ನಿತತ್ತ್ವ ವಿದೆ. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ)

೩. ಚಂದ್ರತಾಲ

ಹಿಮಾಚಲ ಪ್ರದೇಶದಲ್ಲಿನ ಮನಾಲಿ ಯಿಂದ ೧೨೦ ಕಿ.ಮೀ. ದೂರವಿರುವ ಮನಾಲಿ-ಕಾಜಾ ರಸ್ತೆಯಲ್ಲಿ ಹಿಮಾಲಯ ಪರ್ವತದ ‘ಕಾಂಜೂಮ ಲಾ ಪಾಸದ ಹತ್ತಿರ ಒಂದು ಸುಂದರವಾದ ಸರೋವರವಿದೆ. ಇದಕ್ಕೆ ‘ಚಂದ್ರತಾಲ ಎನ್ನುತ್ತಾರೆ. ಈ ಸರೋವರವು ಹಿಮಾಚಲ ರಾಜ್ಯದ ‘ಸ್ಪಿತೀ ಎಂಬ ಪ್ರದೇಶದಲ್ಲಿದೆ. ಚಂದ್ರತಾಲದಿಂದ ಚಂದ್ರಾ ನದಿಯ ಉಗಮವಾಗುತ್ತದೆ. ಚಂದ್ರತಾಲವು ಸಮುದ್ರಮಟ್ಟದಿಂದ ೧೫ ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಸ್ಥಳೀಯ ಜನರು ಈ ಚಂದ್ರತಾಲದಲ್ಲಿ ಬ್ರಹ್ಮಮುಹೂರ್ತದಲ್ಲಿ ಅಪ್ಸರೆಯರು ದೀಪಗಳ ರೂಪದಲ್ಲಿ ಜಲಕ್ರೀಡೆಯನ್ನು ಮಾಡಲು ಬರುತ್ತಾರೆ ಎಂದು ನಂಬುತ್ತಾರೆ.

ಸಂಗ್ರಾಹಕರು : ಶ್ರೀ. ವಿನಾಯಕ ಶಾನಭಾಗ, ಕುಲು, ಹಿಮಾಚಲ ಪ್ರದೇಶ. (೨೫.೬.೨೦೨೧)

ಗಮನಾರ್ಹ ಅಂಶಗಳು

೧. ಕಡಿದಾದ ರಸ್ತೆ ಮತ್ತು ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದರೂ ಪರಾತ್ಪರ ಗುರುದೇವರ ಕೃಪೆಯಿಂದ ಯಾವುದೇ ತೊಂದರೆಯಾಗದಿರುವುದು :ಸೂರ್ಯತಾಲ, ದೀಪಕತಾಲ ಮತ್ತು ಚಂದ್ರತಾಲ ಈ ಸ್ಥಾನಗಳು ಸಮುದ್ರಮಟ್ಟದಿಂದ ತುಂಬಾ ಎತ್ತರದ ಸ್ಥಳದಲ್ಲಿವೆ. ಅಲ್ಲಿಗೆ ಹೋಗುವ ರಸ್ತೆಯು ನಿರ್ಜನವಾಗಿದೆ ಮತ್ತು ಅಲ್ಲಿ ಆಕ್ಸಿಜನ್ ಪ್ರಮಾಣವೂ ಬಹಳ ಕಡಿಮೆಯಿರುತ್ತದೆ. ನಾವು ಹೋದಾಗ ಸೂರ್ಯತಾಲದ ತಾಪಮಾನವು ೨ ಡಿಗ್ರಿ ಸೆಲ್ಸಿಯಸ್ ಇತ್ತು. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ನಮಗೆ ಯಾವುದೇ ತೊಂದರೆಗಳು ಆಗಲಿಲ್ಲ.

೨. ಕಷ್ಟಕರ ಪ್ರಯಾಣ

ಮನಾಲಿಯಿಂದ ಚಂದ್ರತಾಲಕ್ಕೆ ಹೋಗಲು ೬ ಗಂಟೆ ಮತ್ತು ಮರಳಿ ಬರಲು ೬ ಗಂಟೆಗಳು ಬೇಕಾಗುತ್ತವೆ. ಅದರಲ್ಲಿನ ೧ ಗಂಟೆಯ ರಸ್ತೆ ಚೆನ್ನಾಗಿದೆ. ಉಳಿದ ೫ ಗಂಟೆಗಳ ರಸ್ತೆ ಹೇಗಿದೆ ಎಂದರೆ, ಅಲ್ಲಿ ರಸ್ತೆಯೇ ಇಲ್ಲ ಎಂದು ಹೇಳಬಹುದು. ಕೊನೆಯ ೬೦ ಕಿ.ಮೀ.ಗಾಗಿ ೫ ಗಂಟೆಗಳು ಬೇಕಾಗುತ್ತವೆ. ದಾರಿಯಲ್ಲಿ ನೂರಾರು ಸ್ಥಳಗಳಲ್ಲಿ ಹಿಮಾಲಯದ ಮಂಜುಗಡ್ಡೆ(ಹಿಮ)ಕರಗಿ ನೀರು ಕೆಳಗೆ ಬರುವುದರಿಂದ ಸಂಪೂರ್ಣ ರಸ್ತೆಯೇ ಕೊಚ್ಚಿ ಹೋಗಿರುತ್ತದೆ. ಕೆಲವು ಸ್ಥಳಗಳಲ್ಲಿ ಒಂದೇ ವಾಹನ ಹೋಗುವಷ್ಟು ರಸ್ತೆ ಇದೆ ಮತ್ತು ರಸ್ತೆಯ ಇನ್ನೊಂದು ಬದಿಗೆ ಆಳವಾದ ಕಂದಕವಿದೆ. ಹೀಗೆ ೫ ಗಂಟೆಗಳ ಕಠಿಣ ಪ್ರವಾಸದ ನಂತರ ನಾವು ಚಂದ್ರತಾಲದ ‘ಬೇಸಕ್ಯಾಂಪ್ವನ್ನು ತಲುಪಿದೆವು. ಇಲ್ಲಿಂದ ಮುಂದೆ ೧ ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತದೆ. ಆಕ್ಸಿಜನ್ ಪ್ರಮಾಣ ಕಡಿಮೆ ಇರುವುದರಿಂದ ೧ ಕಿ.ಮೀ. ಕ್ರಮಿಸಲು ಅರ್ಧ ಗಂಟೆ ಬೇಕಾಗುತ್ತದೆ. ಅನಂತರ ಮಾತ್ರ ಸುಂದರವಾಗಿರುವ ಚಂದ್ರತಾಲದ ದರ್ಶನವಾಗುತ್ತದೆ.

೩. ಹಿಮಾಲಯದ ಶಿಖರದ ಮೇಲೆ ಶುಭಚಿಹ್ನೆಗಳ ದರ್ಶನ

ಸೂರ್ಯತಾಲ ಮತ್ತು ಚಂದ್ರತಾಲಕ್ಕೆ ಹೋಗುವಾಗ ದಾರಿಯಲ್ಲಿ ಹಿಮಾಲಯದ ಶಿಖರದ ಮೇಲೆ ಶುಭಚಿಹ್ನೆಗಳು ಕಾಣಿಸಿದವು. ಒಂದು ಸ್ಥಳದಲ್ಲಿ ಹಿಮಶಿಖರದ ಮೇಲೆ ‘ಶ್ರೀವಿಷ್ಣುವು ಶೇಷನಾಗನ ಮೇಲೆ ಶಯನ ಮಾಡಿರುವುದು, ಕಾಣಿಸಿತು. ಒಂದು ಪರ್ವತದ ಮೇಲೆ ಹಿಮಗಡ್ಡೆಯ ಆಕಾರ ಗರುಡನಂತೆ ಕಾಣಿಸಿತು. ಒಂದು ಶಿಖರದ ಮೇಲೆ ‘ಓಂ ಕಾಣಿಸಿತು. ಸೂರ್ಯತಾಲದ ಒಂದೇ ಸ್ಥಳದಲ್ಲಿ ನಿಂತು ತೆಗೆದಿರುವ ಎರಡು ಛಾಯಾಚಿತ್ರಗಳಲ್ಲಿ ಸೂರ್ಯತಾಲದ ನೀರಿನ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದಿತು. ಮೊದಲನೇಯ ಛಾಯಾಚಿತ್ರದಲ್ಲಿ ನೀರಿನ ಬಣ್ಣ ಹಸಿರು ಮತ್ತು ಎರಡನೇಯ ಛಾಯಾಚಿತ್ರದಲ್ಲಿ ನೀರಿನ ಬಣ್ಣ ನೀಲಿಯಾಗಿದೆ. ದೀಪಕತಾಲವಿರುವಲ್ಲಿ ಒಂದು ಬದಿಯಿಂದ ನೋಡಿದರೆ ನೀರಿನಲ್ಲಿ ‘ಹಣತೆ ಮತ್ತು ಅದರ ಜ್ಯೋತಿಯಂತಹ ಆಕಾರ ಕಾಣಿಸುತ್ತದೆ.

ಸಂಗ್ರಾಹಕರು : ಶ್ರೀ. ವಿನಾಯಕ ಶಾನಭಾಗ


ಹಿಮಾಚಲ ಪ್ರದೇಶದ ‘ಸೂರ್ಯತಾಲ ಮತ್ತು ‘ಚಂದ್ರತಾಲಗಳ ಮನೋಹರ ದರ್ಶನ

‘ಸೂರ್ಯತಾಲದ ಮುಂದೆ ನಿಂತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ‘ಸೂರ್ಯತಾಲ ದ ಸಮೀಪದ ಹಿಮಾಚ್ಛಾದಿತ ಬೆಟ್ಟದ ಸಾಲುಗಳು !
ಹಿಮಾಚಲ ಪ್ರದೇಶದಲ್ಲಿನ ‘ಸೂರ್ಯತಾಲಕ್ಕೆ ಕೃತಜ್ಞತೆಯಿಂದ ನಮಸ್ಕರಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !
ಹಸಿರಾಗಿ ಕಾಣಿಸುತ್ತಿರುವ ‘ಸೂರ್ಯತಾಲದ ನೀರು. ಅದೇ ಸ್ಥಳದಿಂದ ತೆಗೆದ ಛಾಯಾಚಿತ್ರದಲ್ಲಿ ಆ ನೀರು ನೀಲಿ ಬಣ್ಣದಲ್ಲಿಯೂ ಕಾಣಿಸುತ್ತದೆ !
ನೀಲಿಯಾಗಿ ಕಾಣಿಸುತ್ತಿರುವ ‘ಸೂರ್ಯತಾಲದ ನೀರು. ಅದೇ ಸ್ಥಳದಿಂದ ತೆಗೆದಿರುವ ಛಾಯಾಚಿತ್ರದಲ್ಲಿ ಅದೇ ನೀರು ಹಸಿರು ಬಣ್ಣದಲ್ಲಿಯೂ ಕಾಣಿಸುತ್ತದೆ !
‘ದೀಪಕತಾಲದಲ್ಲಿ ಒಂದೆಡೆಯಿಂದ ನೋಡುವಾಗ ನೀರಿನಲ್ಲಿ ಹಣತೆ ಮತ್ತು ಅದರ ಜ್ಯೋತಿಯ ಆಕಾರ ಕಾಣಿಸುತ್ತದೆ !
ಹಿಮಾಚಲ ಪ್ರದೇಶದಲ್ಲಿನ ‘ಚಂದ್ರತಾಲಕ್ಕೆ ಕೃತಜ್ಞತೆಯಿಂದ ನಮಸ್ಕರಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

‘ಸೂರ್ಯತಾಲ ಮತ್ತು ‘ಚಂದ್ರತಾಲಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ಹೇಳುವ ಏಕಮೇವಾದ್ವಿತೀಯ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ಇದುವರೆಗೆ ನಾವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಕೈಲಾಸ-ಮಾನಸಸರೋವರ, ಅಮರನಾಥ, ಗಂಡಕಿ-ಮುಕ್ತಿನಾಥ, ಜ್ಯೋತಿರ್ಲಿಂಗ, ಶಕ್ತಿಪೀಠ ಇತ್ಯಾದಿ ಅನೇಕ ಸ್ಥಳಗಳ ಪ್ರಯಾಣವನ್ನು ಮಾಡಿದೆವು; ಆದರೆ ಆ ಎಲ್ಲ ಸ್ಥಳಗಳಿಗಿಂತ ‘ಸೂರ್ಯತಾಲ ಮತ್ತು ‘ಚಂದ್ರತಾಲದ ಯಾತ್ರೆಯು ವೈಶಿಷ್ಟ್ಯಪೂರ್ಣವಾಗಿದೆ.

೧. ‘ಸೂರ್ಯತಾಲ ಮತ್ತು ‘ಚಂದ್ರತಾಲ ಇವುಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳ ಸಂದರ್ಭವು ಯಾವುದೇ ಗ್ರಂಥದಲ್ಲಿ ಇಲ್ಲ

ಸೂರ್ಯತಾಲ ಮತ್ತು ಚಂದ್ರತಾಲ ಇವುಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳ ಸಂದರ್ಭವು ಇದುವರೆಗೆ ಯಾವುದೇ ಗ್ರಂಥದಲ್ಲಿ ಅಥವಾ ಇತರ ಎಲ್ಲಿಯೂ ಸಿಕ್ಕಿಲ್ಲ. ಕೈಲಾಸ ಪರ್ವತಕ್ಕೆ ಜಗತ್ತಿನ ‘ಸುಷುಮ್ನಾನಾಡಿ ಎಂದು ಹೇಳಲಾಗಿದೆ; ಆದರೆ ವಿಶ್ವದ ಸೂರ್ಯನಾಡಿ ಮತ್ತು ಚಂದ್ರನಾಡಿ ಇವುಗಳ ಕುರಿತು ಎಲ್ಲಿಯೂ ಸಂದರ್ಭ ಸಿಕ್ಕಿಲ್ಲ.

೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮೂಲಕ ‘ಸೂರ್ಯತಾಲ ಮತ್ತು ಚಂದ್ರತಾಲ ಇವು ವಿಶ್ವದ ಕ್ರಮವಾಗಿ ಸೂರ್ಯನಾಡಿ ಮತ್ತು ಚಂದ್ರನಾಡಿಗಳಾಗಿವೆ, ಎಂಬ ಜ್ಞಾನ ಪ್ರಾಪ್ತವಾಗುವುದು

ಋಷಿಮುನಿಗಳಿಗೆ ಶೃತಿ, ಸ್ಮೃತಿ ಅಥವಾ ದರ್ಶನ ಈ ರೂಪ ಗಳಲ್ಲಿ ಈಶ್ವರನಿಂದ ಜ್ಞಾನ ಪ್ರಾಪ್ತವಾಯಿತು. ಅದೇರೀತಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಸಿಗುವ ಜ್ಞಾನವು ಈಶ್ವರೀ ಜ್ಞಾನವಾಗಿದೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ‘ಸೂರ್ಯತಾಲ ಮತ್ತು ಚಂದ್ರತಾಲ ಇವು ಅನುಕ್ರಮವಾಗಿ ವಿಶ್ವದ ಸೂರ್ಯನಾಡಿ ಮತ್ತು ಚಂದ್ರನಾಡಿಗಳಾಗಿವೆ, ಎಂಬ ಜ್ಞಾನವು ಸಿಕ್ಕಿತು. ಅದು ಶಬ್ದಪ್ರಮಾಣವಾಗಿದೆ.

೩. ಮೇಲಿನ ವಿಷಯವನ್ನು ಶೋಧಿಸಲು ವಿಜ್ಞಾನಿಗಳಿಗೆ ಸಾವಿರಾರು ವರ್ಷಗಳು ಬೇಕಾಗಬಹುದು

ವಿಜ್ಞಾನಿಗಳು ‘ಗಾಡ್ ಪಾರ್ಟಿಕಲ್ಗಳನ್ನು (ದೈವಿ ಕಣಗಳನ್ನು) ಕಂಡುಹಿಡಿದರು; ಆದರೆ ಅವರಿಗೆ ಇದುವರೆಗೆ ‘ಸತ್ತ್ವ, ರಜ, ಮತ್ತು ತಮ ಈ ಸೂಕ್ಷ್ಮಾತೀಸೂಕ್ಷ್ಮ (ಸೂಕ್ಷ್ಮದಲ್ಲಿನ ಸೂಕ್ಷ್ಮ) ತ್ರಿಗುಣಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಅದೇ ರೀತಿ ಈಗ ‘ಸೂರ್ಯತಾಲ ಮತ್ತು ಚಂದ್ರತಾಲ ಇವು ಅನುಕ್ರಮವಾಗಿ ಜಗತ್ತಿನ ಸೂರ್ಯನಾಡಿ ಮತ್ತು ಚಂದ್ರನಾಡಿಗಳಾಗಿವೆ, ಎಂಬುದರ ಸಂಶೋಧನೆಯನ್ನು ಮಾಡಲು ವಿಜ್ಞಾನಿಗಳಿಗೆ ಸಾವಿರಾರು ವರ್ಷಗಳು ಬೇಕಾಗಬಹುದು. ಇಷ್ಟು ಮಾಡಿದರೂ ‘ಅವರಿಗೆ ಯಶಸ್ಸು ಸಿಗುತ್ತದೆ, ಎಂಬ ಭರವಸೆ ಇಲ್ಲ.

೪. ಕೃತಜ್ಞತೆ

ಜ್ಞಾನವು ‘ಸತ್-ಚಿತ್-ಆನಂದದ ಸ್ವರೂಪ ಆಗಿರುತ್ತದೆ. ಜ್ಞಾನವು ಸತ್ಯ ಮತ್ತು ಅವಿನಾಶಿಯಾಗಿರುತ್ತದೆ. ‘ಇಂತಹ ಸತ್-ಚಿತ್-ಆನಂದ ಸ್ವರೂಪದ ಜ್ಞಾನವನ್ನು ನೀಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಾಧಕರಾದ ನಮಗೆಲ್ಲರಿಗೆ ಲಭಿಸಿದ್ದಾರೆ, ಅದಕ್ಕಾಗಿ ನಾವೆಲ್ಲ ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

– ಶ್ರೀ. ವಿನಾಯಕ ಶಾನಭಾಗ, ಕುಲು, ಹಿಮಾಚಲ ಪ್ರದೇಶ. (೧೦.೭.೨೦೨೧)

ಸಾಯಂಕಾಲ ಅಗ್ನಿಹೋತ್ರವನ್ನು ಮಾಡುತ್ತಿರುವಾಗ ಅಗ್ನಿಯಲ್ಲಿ ಸೂರ್ಯತಾಲ ಮತ್ತು ಚಂದ್ರತಾಲದ ದರ್ಶನವಾಗುವುದು, ‘ಸೂರ್ಯತಾಲ ಮತ್ತು ಚಂದ್ರತಾಲ ಇವುಗಳ ಒಟ್ಟು ಶಕ್ತಿಯಿಂದ ಶ್ರೀ ಭುವನೇಶ್ವರಿದೇವಿಯು ಅವತರಿಸಿದ್ದಾಳೆ, ಎಂಬುದು ಕಾಣಿಸುವುದು ಮತ್ತು ಪದ್ಮಾಸನದಲ್ಲಿ ಕುಳಿತಿರುವ ಶ್ರೀ ಭುವನೇಶ್ವರಿದೇವಿಯ ದರ್ಶನವಾಗುವುದು

‘೨೬.೬.೨೦೨೧ ರಂದು ಸಾಯಂಕಾಲ ಅಗ್ನಿಹೋತ್ರ ಮಾಡುವಾಗ ನನಗೆ ಅಗ್ನಿಯಲ್ಲಿ ಹಿಮಾಚಲ ಪ್ರದೇಶದಲ್ಲಿನ ಹಿಮಾಲಯ ಪರ್ವತದ ಮೇಲಿನ ಸೂರ್ಯತಾಲ ಮತ್ತು ಚಂದ್ರ ತಾಲದ ದರ್ಶನವಾಯಿತು. ಆಗ ‘ಸೂರ್ಯತಾಲದಲ್ಲಿ ‘ಮಾರ್ತಂಡ ಶಕ್ತಿ ಮತ್ತು ಚಂದ್ರತಾಲದಲ್ಲಿ ‘ರೋಹಿಣಿ ಶಕ್ತಿಯಿದೆ, ಹಾಗೆಯೇ ಸೂರ್ಯತಾಲವು ವಿಶ್ವದ ಸೂರ್ಯನಾಡಿ ಮತ್ತು ಚಂದ್ರತಾಲವು ವಿಶ್ವದ ಚಂದ್ರನಾಡಿಯಾಗಿದೆ, ಎಂಬುದು ಗಮನಕ್ಕೆ ಬಂದಿತು. ‘ಸೂರ್ಯತಾಲ ಮತ್ತು ಚಂದ್ರತಾಲ ಇವುಗಳ ಒಟ್ಟು ಶಕ್ತಿ, ಅಂದರೆ ಸೂರ್ಯ ಮತ್ತು ಚಂದ್ರ ಇವರ ಒಟ್ಟು ಶಕ್ತಿಯಿಂದ ಶ್ರೀ ಭುವನೇಶ್ವರಿ ದೇವಿಯು ಅವತರಿಸಿದಳು ಎಂದು ಕಾಣಿಸಿತು  ಎಂಬುದು ಕಾಣಿಸಿತು. ‘ಭುವನೇಶ್ವರಿದೇವಿಯು ಕೈಗಳ ಮುದ್ರೆಯನ್ನು ಮಾಡಿ ಪದ್ಮಾಸನ ದಲ್ಲಿ ಕುಳಿತಿದ್ದಾಳೆ ಮತ್ತು ದೇವಿಯ ಸುತ್ತಲು ನೇರಳೆ ಬಣ್ಣದ ಪ್ರಭಾವಲಯ,ವಿರುವಂತಹ ಸಾಕ್ಷಾತ್ ಭುವನೇಶ್ವರಿದೇವಿಯ ದರ್ಶನವಾಯಿತು. ಸೂರ್ಯತಾಲ ಮತ್ತು ಚಂದ್ರತಾಲ ಈ ಎರಡರ ನಡುವಿನ ಪ್ರದೇಶವು ‘ಭುವನೇಶ್ವರಿದೇವಿಯ ಲೋಕವಾಗಿದೆ. ‘ಭುವನೇಶ್ವರಿಯ ಕೃಪೆ ಪಡೆಯಲೆಂದೇ ಮಹರ್ಷಿಗಳು ನಮ್ಮನ್ನು ಹಿಮಾಚಲ ಪ್ರದೇಶಕ್ಕೆ ಕಳುಹಿಸಿರಬಹುದು, ಎಂದು ಅರಿವಾಯಿತು.  –  ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಹಿಮಾಚಲ ಪ್ರದೇಶ.