ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗಾಲುಗಳಿಂದ ಹೊರ ಬಂದ ದ್ರವದಲ್ಲಿ ಬಹಳ ಸಕಾರಾತ್ಮಕ ಊರ್ಜೆ ಇರುವುದು !

ಸಂತರ ಬಗ್ಗೆ ನಾವೀನ್ಯಪೂರ್ಣ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

‘ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಂಗಾಲುಗಳಿಗೆ ‘ಪಾದಾಭ್ಯಂಗ’ (ಅಂಗಾಲುಗಳಿಗೆ ಆಕಳ (ಹಸುವಿನ) ಶುದ್ಧ ತುಪ್ಪವನ್ನು ಹಚ್ಚಿ ಕಂಚಿನ (ಕಂಚಿನ ಧಾತುವಿನಿಂದ ತಯಾರಿಸಿದ) ಬಟ್ಟಲಿನಿಂದ ಉಜ್ಜುವುದು) ಆಯುರ್ವೇದಿಕ ಚಿಕಿತ್ಸೆಯನ್ನು ಮಾಡಲಾಯಿತು. ಈ ಚಿಕಿತ್ಸೆಯಿಂದ ರಕ್ತಸಂಚಾರ ಮತ್ತು ಕಣ್ಣುಗಳ ದೃಷ್ಟಿಯು ಸುಧಾರಿಸುತ್ತದೆ. ‘ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಂಗಾಲುಗಳಿಗೆ ಈ ಚಿಕಿತ್ಸೆಯನ್ನು ೨೭.೫.೨೦೨೦ ಮತ್ತು ೨೮.೫.೨೦೨೦ ಹೀಗೆ ಎರಡು ದಿನಗಳ ಕಾಲ ಮಾಡಲಾಯಿತು. ಪಾದಾಭ್ಯಂಗವನ್ನು ಮಾಡುವಾಗ ಅವರ ಎರಡೂ ಅಂಗಾಲುಗಳಿಂದ ದ್ರವವು ಹೊರಬಂದಿತು. ‘ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಂಗಾಲುಗಳಿಂದ ಹೊರಬಂದ ದ್ರವದ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ವಿಜ್ಞಾನದ ಮೂಲಕ ಅಧ್ಯಯನಕ್ಕಾಗಿ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಬಳಕೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ಪಾದಾಭ್ಯಂಗಕ್ಕಾಗಿ ಬಳಸಲಾದ ಆಕಳ ತುಪ್ಪ, ಕಂಚಿನ ಬಟ್ಟಲು ಮತ್ತು ‘ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಬಲ ಮತ್ತು ಎಡ ಅಂಗಾಲುಗಳಿಂದ ಹೊರಬಂದ ದ್ರವವನ್ನು ‘ಯು.ಎ.ಎಸ್.’ ಈ ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು. ಈ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳಿಗೆ ಸಂಬಂಧಿಸಿದ ನಿರೀಕ್ಷಣೆಗಳ ವಿಶ್ಲೇಷಣೆ

೧ ಅ ೧. ಆಕಳ (ಹಸುವಿನ) ತುಪ್ಪ, ಕಂಚಿನ ಬಟ್ಟಲು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಲ ಮತ್ತು ಎಡ ಅಂಗಾಲುಗಳಿಂದ ಹೊರಬಂದ ದ್ರವದಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬರಲಿಲ್ಲ.

೧ ಅ ೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗಾಲುಗಳಿಗೆ ಪಾದಾಭ್ಯಂಗವನ್ನು ಮಾಡಿದ ನಂತರ ಕಂಚಿನ ಬಟ್ಟಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಗುವುದು : ಕಂಚಿನ ಬಟ್ಟಲಿನಲ್ಲಿ ಆರಂಭದಲ್ಲಿ (ಪಾದಾಭ್ಯಂಗದ ಮೊದಲು) ಸಕಾರಾತ್ಮಕ ಊರ್ಜೆ ಇತ್ತು ಮತ್ತು ಅದರ ಪ್ರಭಾವಲಯವು ೩.೪೪ ಮೀಟರ್‌ಗಳಷ್ಟಿತ್ತು.  ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗಾಲುಗಳಿಗೆ ಎರಡು ದಿನ ಪಾದಾಭ್ಯಂಗವನ್ನು ಮಾಡಿದ ನಂತರ (ಅಂದರೆ ಕಂಚಿನ ಬಟ್ಟಲಿನಿಂದ ಅವರ ಅಂಗಾಲುಗಳನ್ನು ಉಜ್ಜಿದ ನಂತರ) ಬಟ್ಟಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೩೪.೩೪ ಮೀಟರ್‌ಗಳಷ್ಟು ಇತ್ತು; ಅಂದರೆ ಅದರಲ್ಲಿ ೩೦.೯೦ ಮೀಟರ್‌ಗಳಷ್ಟು ಹೆಚ್ಚಳವಾಯಿತು. ಇದು ವೈಶಿಷ್ಟ್ಯಪೂರ್ಣವಾಗಿದೆ.

೧ ಅ ೩. ಪಾದಾಭ್ಯಂಗಕ್ಕಾಗಿ ಬಳಸಲು ತರಲಾದ ಆಕಳ (ಹಸುವಿನ) ತುಪ್ಪದಲ್ಲಿ (ಪಾದಾಭ್ಯಂಗದ ಮೊದಲು) ಸಕಾರಾತ್ಮಕ ಊರ್ಜೆ ಇತ್ತು ಮತ್ತು ಅದರ ಪ್ರಭಾವಲಯವು ೪.೨೮ ಮೀಟರ್‌ಗಳಷ್ಟಿತ್ತು.

೧ ಅ ೪. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗಾಲುಗಳಿಂದ ಹೊರಬಂದ ದ್ರವದಲ್ಲಿ ಬಹಳ ಸಕಾರಾತ್ಮಕ ಊರ್ಜೆ ಇರುವುದು 

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಎಡಅಂಗಾಲಿ ನಿಂದ ಹೊರ ಬಂದ ದ್ರವಕ್ಕಿಂತ ಅವರ ಬಲಅಂಗಾಲಿನಿಂದ ಹೊರಬಂದ ದ್ರವದಲ್ಲಿ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿದೆ.

೨. ಮೊದಲ ದಿನಕ್ಕಿಂತ ಎರಡನೇಯ ದಿನದ ದ್ರವದಲ್ಲಿ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿದೆ.

ಸೌ. ಸ್ವಾತಿ ಸಣಸ

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗಾಲುಗಳನ್ನು ಉಜ್ಜಲು ಬಳಸಲಾದ ಕಂಚಿನ ಬಟ್ಟಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳ ಹೆಚ್ಚಳವಾದುದರ ಹಿಂದಿನ ಕಾರಣ : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಉಚ್ಚ ಆಧ್ಯಾತ್ಮಿಕ ಮಟ್ಟದ ಸಮಷ್ಟಿ ಸಂತರಾಗಿರುವುದರಿಂದ ಅವರಲ್ಲಿ ಬಹಳ ಚೈತನ್ಯವಿದೆ. ಸಂತರ ಚರಣಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತದೆ. ಕಂಚಿನ ಬಟ್ಟಲಿನಿಂದ ಅವರ ಅಂಗಾಲುಗಳನ್ನು ಉಜ್ಜುತ್ತಿರುವಾಗ ಅವರ ಅಂಗಾಲುಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ಕಂಚಿನ ಬಟ್ಟಲು ಚೈತನ್ಯದಿಂದ ತುಂಬಿಹೋಯಿತು.

೨ ಆ. ಆಕಳ ತುಪ್ಪವು ಸಾತ್ತ್ವಿಕವಾಗಿರುವುದರಿಂದ ಅದರಲ್ಲಿ ಸಕಾರಾತ್ಮಕ ಊರ್ಜೆಯು ಕಂಡು ಬರುವುದು : ಆಕಳು ಮೂಲತಃ ಸಾತ್ತ್ವಿಕ ಪ್ರಾಣಿಯಾಗಿದೆ. ಅದರಲ್ಲಿನ ಸಾತ್ತ್ವಿಕತೆಯಿಂದ ಅದರ ಹಾಲು, ಮೊಸರು, ತುಪ್ಪ, ಗೋಮಯ (ಸೆಗಣಿ), ಗೋಮೂತ್ರ ಇವುಗಳಲ್ಲಿಯೂ ಸಾತ್ತ್ವಿಕತೆ ಇದೆ. ಆಕಳ ಹಾಲಿನಿಂದ ತಯಾರಿಸಲಾದ ಶುದ್ಧ ತುಪ್ಪದಲ್ಲಿ ಔಷಧೀಯ ಗುಣಧರ್ಮ ಇರುವುದರಿಂದ ಆಯುರ್ವೇದಿಕ ಚಿಕಿತ್ಸೆಗಳಲ್ಲಿ ತುಪ್ಪವನ್ನು ಬಳಸುತ್ತಾರೆ.

೨ ಇ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದ ಪ್ರಭಾವದಿಂದ ಅವರ ಅಂಗಾಲುಗಳಿಂದ ಹೊರಬಂದ ದ್ರವದಲ್ಲಿ ಬಹಳ ಚೈತನ್ಯವು ನಿರ್ಮಾಣವಾಗುವುದು : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗಾಲುಗಳಿಗೆ ತುಪ್ಪವನ್ನು ಹಚ್ಚಿ ಕಂಚಿನ ಬಟ್ಟಲಿನಿಂದ ಉಜ್ಜುವಾಗ ಆದ ಘರ್ಷಣೆಯಿಂದ ದ್ರವವು ಉತ್ಪನ್ನವಾಯಿತು. ಅವರ ಚರಣಗಳಿಂದ (ಅಂಗಾಲುಗಳಿಂದ) ಪ್ರಕ್ಷೇಪಿತವಾಗುವ ಚೈತನ್ಯದ ಪ್ರಭಾವದಿಂದ ಅವರ ಅಂಗಾಲುಗಳಿಂದ ಹೊರಬಂದ ಈ ದ್ರವದಲ್ಲಿ ಬಹಳ ಚೈತನ್ಯವು ಉತ್ಪನ್ನವಾಯಿತು.

೨ ಈ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಎಡಅಂಗಾಲಿನಿಂದ ಹೊರ ಬಂದ ದ್ರವಕ್ಕಿಂತ ಅವರ ಬಲಅಂಗಾಲಿನಿಂದ ಹೊರಬಂದ ದ್ರವದಲ್ಲಿ ಸಕಾರಾತ್ಮಕ ಊರ್ಜೆಯು ಹೆಚ್ಚಿರುವ ಕಾರಣ : ಶರೀರದ ಬಲ ಭಾಗದಲ್ಲಿ ಸೂರ್ಯನಾಡಿಯ (ಪಿಂಗಲಾ ನಾಡಿಯ) ಮತ್ತು ಎಡಭಾಗದಲ್ಲಿ ಚಂದ್ರನಾಡಿಯ (ಈಡಾ ನಾಡಿಯ) ಪ್ರಭಾವವಿರುತ್ತದೆ. ಸೂರ್ಯನಾಡಿಯು ಅಗ್ನಿತತ್ತ್ವದ ಮತ್ತು ಚಂದ್ರನಾಡಿಯು ಆಪತತ್ತ್ವದ ನಿದರ್ಶಕವಾಗಿದೆ. ಆದುದರಿಂದ ಸೂರ್ಯನಾಡಿಯು ತೇಜಸ್ವಿ (ಪ್ರಖರ) ಮತ್ತು ಚಂದ್ರನಾಡಿಯು ಶೀತಲವಾಗಿರುತ್ತದೆ. ಸೂರ್ಯನಾಡಿಯು ತೇಜಸ್ವಿಯಾಗಿರುವುದರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಎಡಅಂಗಾಲಿಗಿಂತ ಅವರ ಬಲಅಂಗಾಲಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಶಕ್ತಿ (ಚೈತನ್ಯ) ಇದೆ. ಆದ್ದರಿಂದ ಅವರ ಎಡಅಂಗಾಲಿಗಿಂತ ಅವರ ಬಲಅಂಗಾಲಿನಿಂದ ಹೊರ ಬಂದ ದ್ರವದಲ್ಲಿ ಸಕಾರಾತ್ಮಕ ಊರ್ಜೆಯು ಹೆಚ್ಚು ಇರುವುದು ಪರೀಕ್ಷಣೆಯಲ್ಲಿ ಕಂಡು ಬಂದಿತು.

೨ ಉ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗಾಲುಗಳಿಂದ ಹೊರಬಂದ ದ್ರವದಲ್ಲಿ ಮೊದಲ ದಿನಕ್ಕಿಂತ ಎರಡನೇಯ ದಿನ ಹೆಚ್ಚು ಸಕಾರಾತ್ಮಕ ಊರ್ಜೆಯು ಕಂಡು ಬರುವುದರಕಾರಣ : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗಾಲುಗಳನ್ನು ಕಂಚಿನ ಬಟ್ಟಲಿನಿಂದ ಉಜ್ಜಿದುದರಿಂದ ಶರೀರದಲ್ಲಿನ ಕಪ್ಪು ಊರ್ಜೆಯು (ಅನಾರೋಗ್ಯದಿಂದ ಶರೀರದಲ್ಲಿ ಉತ್ಪನ್ನವಾದ ತೊಂದರೆದಾಯಕ ಊರ್ಜೆಯು) ನಾಶವಾಯಿತು. ಆದ್ದರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಂಗಾಲುಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಲ್ಲಿ ಉತ್ತರೋತ್ತರ ಹೆಚ್ಚಳವಾಯಿತು.’ – ಸೌ. ಸ್ವಾತಿ ವಸಂತ ಸಣಸ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೪.೬.೨೦೨೦)

ವಿ-ಅಂಚೆ : [email protected]