Karnataka Home Minister Apologies : ಎಲ್ಲೆಡೆಯಿಂದ ಟೀಕೆ ವ್ಯಕ್ತವಾದ ನಂತರ ಕರ್ನಾಟಕ ಗೃಹ ಸಚಿವರಿಂದ ಕ್ಷಮೆಯಾಚನೆ!

ಬಾಲಕಿಯ ಮೇಲಿನ ಕಿರುಕುಳ ಪ್ರಕರಣದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಪ್ರಕರಣ

ಬೆಂಗಳೂರು – ಬೆಂಗಳೂರಿನಲ್ಲಿ ನಡೆದ ಲೈಂಗಿಕ ಕಿರುಕುಳ ಘಟನೆಯ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಕ್ಕಾಗಿ ಗೃಹ ಸಚಿವ ಜಿ. ಪರಮೇಶ್ವರ ಈಗ ಕ್ಷಮೆಯಾಚಿಸಿದ್ದಾರೆ. ಅವರು, ‘ನಾನು ಯಾವಾಗಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತೇನೆ. ನನ್ನ ಮಾತುಗಳಿಂದ ಯಾವುದೇ ಮಹಿಳೆಗೆ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ’ ಎಂದು ಹೇಳಿದರು.

https://twitter.com/SanatanPrabhat/status/1909953539712876606

ಬೆಂಗಳೂರಿನಲ್ಲಿ ಓರ್ವ ಹುಡುಗಿಯನ್ನು ಚುಡಾಯಿಸಲಾಗಿತ್ತು. ಈ ಘಟನೆಯ ಪೊಲೀಸ ತನಿಖೆಯ ಬಗ್ಗೆ ಅವರನ್ನು ಕೇಳಿದಾಗ, ಅವರು ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದರು. (ಇಂತಹ ಬೇಜವಾಬ್ದಾರಿಯುತ ಆಡಳಿತಗಾರರನ್ನು ಜನರು ಮನೆಯಲ್ಲಿ ಕೂರಿಸಬೇಕು! – ಸಂಪಾದಕರು) ಇದರ ಬಗ್ಗೆ ಭಾಜಪ ರಾಷ್ಟ್ರೀಯ ವಕ್ತಾರರಾದ ಶಹಜಾದ ಪೂನಾವಾಲಾ ಮಾತನಾಡಿ, ಕಾಂಗ್ರೆಸ ನಾಯಕ ರಾಹುಲ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಮೌನವನ್ನು ಮುರಿಯಬೇಕು ಮತ್ತು ಜಿ. ಪರಮೇಶ್ವರ ಅವರ ರಾಜೀನಾಮೆಯನ್ನು ಕೇಳಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ಕ್ಷಮೆಯಾಚನೆಯಿಂದ ಏನು ಪ್ರಯೋಜನ? ಗೃಹ ಸಚಿವರ ದೃಷ್ಟಿ ಏನು ಎಂಬುದು ಜನತೆಯ ಮುಂದೆಯೇ ಬಂದಿದೆ! ಈಗ ಇಂತಹವರನ್ನು ಆಯ್ಕೆ ಮಾಡಬೇಕೆ? ಎಂಬುದನ್ನು ಜನರೇ ನಿರ್ಧರಿಸಬೇಕು!