19,000 Pregnant Women Death : 2023 ರಲ್ಲಿ ಭಾರತದಲ್ಲಿ 19 ಸಾವಿರ ಗರ್ಭಿಣಿ ಮಹಿಳೆಯರ ಸಾವು!

ನವದೆಹಲಿ – ಭಾರತದಲ್ಲಿ 2023 ರಲ್ಲಿ ಅಂದಾಜು 19 ಸಾವಿರ ಗರ್ಭಿಣಿ ಮಹಿಳೆಯರು ಮೃತಪಟ್ಟಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 52 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಮಾಣವು ಜಗತ್ತಿನಲ್ಲಿ ಗರ್ಭಿಣಿಯರ ಒಟ್ಟು ಸಾವಿನ ಪ್ರಮಾಣದ  ಶೇ. 7.2 ರಷ್ಟಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಇಂತಹ ಸಾವುಗಳಲ್ಲಿ ನೈಜೀರಿಯಾ ನಂತರ ಭಾರತದ ಸ್ಥಾನವಿದೆ.

1. ಜಗತ್ತಿನಲ್ಲಿ ಪ್ರತಿ 2 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಧಾರಣೆ ಅಥವಾ ಹೆರಿಗೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮೃತಪಡುತ್ತಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

2. ಈ ವರದಿಯ ಪ್ರಕಾರ, 2023 ರಲ್ಲಿ ಪಾಕಿಸ್ತಾನದಲ್ಲಿ 11 ಸಾವಿರ ಗರ್ಭಿಣಿ ಮಹಿಳೆಯರು ಮೃತಪಟ್ಟಿದ್ದಾರೆ. ಇದರರ್ಥ ಪ್ರತಿದಿನ ಸರಾಸರಿ 30 ಸಾವುಗಳು ಸಂಭವಿಸಿವೆ.

3. ನೈಜೀರಿಯಾದಲ್ಲಿ 75 ಸಾವಿರ ಮಹಿಳೆಯರು ಮೃತಪಟ್ಟಿದ್ದಾರೆ. ಇದು ಜಗತ್ತಿನ ಗರ್ಭಿಣಿ ಮಹಿಳೆಯರ ಒಟ್ಟು ಸಾವಿನ ಪ್ರಮಾಣದ ಶೇ. 28.7 ರಷ್ಟಿದೆ.

4. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ಟೆಡ್ರೊಸ ಘೆಬ್ರೆಯೆಸಸ್ ಅವರು ಮಾತನಾಡಿ, ಈ ಅಂಕಿಅಂಶಗಳಿಂದ ಗರ್ಭಿಣಿ ಮಹಿಳೆಯರ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿದುಬರುತ್ತದೆ. ಒಂದು ವೇಳೆ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳಲ್ಲಿ ತ್ವರಿತ ಸುಧಾರಣೆ ಆಗದಿದ್ದರೆ, ಈ ಬಿಕ್ಕಟ್ಟು ಇನ್ನಷ್ಟು ಗಂಭೀರವಾಗಬಹುದು ಎಂದು ಹೇಳಿದ್ದಾರೆ.