ನವದೆಹಲಿ – ನವೆಂಬರ್ 26, 2008 ರಂದು ಮುಂಬಯಿನಲ್ಲಿ ನಡೆದ ಜಿಹಾದಿ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು ಶೀಘ್ರದಲ್ಲೇ ಅಮೆರಿಕದಿಂದ ಭಾರತಕ್ಕೆ ಕರೆತರಲಾಗುವುದು. ಭಾರತೀಯ ತನಿಖಾ ದಳವು, ಈ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ಆತನ ವಿಚಾರಣೆಯ ಮೂಲಕ ಬಹಿರಂಗಪಡಿಸಬಹುದು, ಎಂದು ಹೇಳಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಮೇಜರ್ ಇಕ್ಬಾಲ್ ಮತ್ತು ಮೇಜರ್ ಸಮೀರ್ ಅಲಿ ಅವರಂತಹ ಅಧಿಕಾರಿಗಳು ಭಾಗಿಯಾಗಿದ್ದರು. ಹಫೀಜ್ ಸಯೀದ್ (ಲಷ್ಕರ್-ಎ-ತೊಯ್ಬಾದ ಮುಖ್ಯಸ್ಥ), ಝಕಿ-ಉರ್-ರೆಹಮಾನ್ ಲಖ್ವಿ, ಸಾಜಿದ್ ಮಜೀದ್, ಅಲಿಯಾಸ್ ಕಾಶ್ಮೀರಿ ಮತ್ತು ಅಬ್ದುಲ್ ರೆಹಮಾನ್ ಹಾಶಿಮ್ ಸಯೀದ್ ಅಲಿಯಾಸ್ ಮೇಜರ್ ಅಬ್ದುಲ್ ರೆಹಮಾನ್ (ಪಸ್ಸಾ) ಎಂದು ದಾಳಿಕೋರರ ಹೆಸರುಗಳು ಬೆಳಕಿಗೆ ಬಂದಿದೆ. ರಾಷ್ಟ್ರೀಯ ತನಿಖಾ ದಳದಿಂದ ತಹವ್ವುರ್ ರಾಣನ ಮೇಲೆ, ಈ ದಾಳಿಯಲ್ಲಿನ ಇನ್ನೋರ್ವ ಆರೋಪಿ ಡೇವಿಡ್ ಹೆಡಲೀ ಇವನಿಗೆ ಭಾರತದಲ್ಲಿ ವಾಸಿಸುವುದಕ್ಕೆ ಮತ್ತು ಪ್ರವಾಸ ಕೈಗೊಳ್ಳುವುದಕ್ಕೆ ಸೌಲಭ್ಯಗಳು ಪೂರೈಸಿರುವ ಆರೋಪವಿದೆ. ಮಹತ್ವದ ಸ್ಥಳಗಳ ಮಾಹಿತಿ ಸಂಗ್ರಹಿಸುವಲ್ಲಿ ಕೂಡ ಇವನ ಸಹಭಾಗ ಇದೆ. ಲಷ್ಕರ್ ಏ ತೋಯ್ಬಾ ಮತ್ತು ಹರಕತ್ ಉಲ್ ಜಿಹಾದಿ ಇಸ್ಲಾಮಿ ಈ ಭಯೋತ್ಪಾದಕ ಸಂಘಟನೆಯ ಜೊತೆಗೆ ರಾಣಾನ ಸಂಬಂಧವಿದೆ.
ತಹವ್ವುರ್ ರಾಣಾ ಹಿಂದಿರುಗಿದ ನಂತರದ ಪ್ರಕ್ರಿಯೆ!
ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆತಂದ ನಂತರ, ಆತನನ್ನು ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ದಳ(NIA) ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಆತ ಯಾವ ಸ್ಥಳಗಳ ಮಾಹಿತಿಯನ್ನು ಸಂಗ್ರಹಿಸಿದನು? ಎಂಬುದನ್ನು ತನಿಖಾ ಸಂಸ್ಥೆಗಳು ಕಂಡುಹಿಡಿಯಲು ಪ್ರಯತ್ನಿಸುತ್ತವೆ. ಆತನಿಗೆ ಯಾವ ಪಾಕಿಸ್ತಾನಿ ಅಧಿಕಾರಿಯೊಂದಿಗೆ ನೇರ ಸಂಪರ್ಕವಿತ್ತು? ಹೆಡ್ಲಿ ಮತ್ತು ಇತರ ಭಯೋತ್ಪಾದಕರೊಂದಿಗೆ ನಡೆದ ಸಂಭಾಷಣೆಗಳಲ್ಲಿ ಆತ ಯಾವ ಯೋಜನೆಗಳನ್ನು ರೂಪಿಸಿದ್ದನು? ಎಂಬ ಮಾಹಿತಿಯನ್ನು ಸಹ ಪಡೆಯಲಾಗುತ್ತದೆ.