ದೆಹಲಿಯಲ್ಲಿ ನಪುಂಸಕರೆಂದು ವಾಸಿಸುತ್ತಿದ್ದ 5 ಬಾಂಗ್ಲಾದೇಶಿ ನುಸುಳುಕೋರರ ಬಂಧನ

ದೆಹಲಿ – ನಗರದ ಜಹಾಂಗೀರಪುರಿಯಲ್ಲಿ ಪೊಲೀಸರು 5 ಬಾಂಗ್ಲಾದೇಶಿ ಅಕ್ರಮ ನುಸುಳುಕೋರರನ್ನು ಬಂಧಿಸಿದ್ದಾರೆ. ಈ ಜನರು ತಮ್ಮ ಗುರುತನ್ನು ಮರೆಮಾಚಲು ನಪುಂಸಕರಾಗಿ (ಲಿಂಗ ಪರಿವರ್ತನೆ ಮಾಡಿಕೊಂಡವರು, ತೃತೀಯಪಂಥಿಗಳು ಇತ್ಯಾದಿಗಳಿಗೆ ಸಂಬಂಧಿಸಿದ ಪದ) ಆಗಿದ್ದರು. ಪೊಲೀಸರು ಅವರನ್ನು ಹಿಡಿದಿದ್ದು, ಅವರನ್ನು ಗಡಿಪಾರು ಮಾಡುವ ಸಿದ್ಧತೆ ನಡೆಸುತ್ತಿದ್ದಾರೆ.

1. ಪೊಲೀಸರು ಬಲೆ ಬೀಸಿ ಮೊಹಮ್ಮದ ಶಕೀದುಲ್ (24 ವರ್ಷ, ಶೇರಪುರ), ದುಲಾಲ ಅಖ್ತರ ಉರ್ಫ್ ಹಜೇರಾ ಬಿಬಿ (36 ವರ್ಷ, ಜಮಾಲಪುರ), ಅಮೀರುಲ ಇಸ್ಲಾಂ ಉರ್ಫ್ ಮೋನಿಕಾ (31 ವರ್ಷ, ಢಾಕಾ), ಮಾಹಿರ್ ಉರ್ಫ್ ಮಾಹಿ (22 ವರ್ಷ, ಟಾಂಗೈಲ್) ಮತ್ತು ಸದ್ದಾಂ ಹುಸೇನ್ ಉರ್ಫ್ ರುಬೀನಾ (30 ವರ್ಷ) ಅವರನ್ನು ಬಂಧಿಸಿದ್ದಾರೆ.

2. ಬಾಂಗ್ಲಾದೇಶದ ಅಕ್ರಮ ನುಸುಳುಕೋರರಿಂದ 7 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೊಬೈಲ್ ಫೋನ್‌ಗಳಲ್ಲಿ ಐಎಂಒ ಆ್ಯಪ್ ಅನ್ನು ಸ್ಥಾಪಿಸಲಾಗಿತ್ತು. ಈ ಆ್ಯಪ್ ಬಳಸಿ ಶಕೀದುಲ್ ಬಾಂಗ್ಲಾದೇಶದಲ್ಲಿರುವ ತನ್ನ ಕುಟುಂಬದೊಂದಿಗೆ ರಹಸ್ಯವಾಗಿ ಮಾತನಾಡುತ್ತಿದ್ದನು.

3. ಈ ಜನರು ದಲ್ಲಾಳಿಗಳ ಸಹಾಯದಿಂದ ಭಾರತಕ್ಕೆ ನುಸುಳಿದ್ದರು. ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವಾಗ ಸಿಕ್ಕಿಬೀಳಬಾರದೆಂದು ಅವರು ಹಾರ್ಮೋನ್ ಇಂಜೆಕ್ಷನ್‌ಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ಬಳಸಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದರು.

4. ಈ ನುಸುಳುಕೋರರು ರೈಲಿನ ಮೂಲಕ ದೆಹಲಿಗೆ ಬಂದು ಭಿಕ್ಷೆ ಬೇಡುತ್ತಿದ್ದರು.

5. ‘ನುಸುಳುಕೋರರು ಕೇವಲ ಹೊಟ್ಟೆಪಾಡಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆಯೇ ಅಥವಾ ಅದರ ಹಿಂದೆ ಬೇರೆ ಯಾವುದೇ ಕಾರಣವಿದೆಯೇ?’ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರು ಭಾರತಕ್ಕೆ ನುಸುಳಲು ಸಹಾಯ ಮಾಡುವವರ ಹೆಸರುಗಳು ಎಂದಿಗೂ ಬೆಳಕಿಗೆ ಬರುವುದಿಲ್ಲ. ಸರಕಾರ ಅವರ ಹೆಸರುಗಳನ್ನು ಸಹ ಬಹಿರಂಗಪಡಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಆಗ ಮಾತ್ರ ನುಸುಳುಕೋರರಿಗೆ ಸಹಾಯ ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ!