ಕುಲು ಕಣಿವೆಯಲ್ಲಿ ವಾಸವಿರುವ ಆರಾಧ್ಯ ದೇವತೆ ‘ಬಿಜಲಿ ಮಹಾದೇವ’ ಮತ್ತು ‘ಬೆಖಲೀಮಾತಾ’ (ಭುವನೇಶ್ವರಿದೇವಿ) ಇವರ ಚೈತನ್ಯಮಯ ಸ್ಥಾನಗಳು !

ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದೈವೀ ಪ್ರಯಾಣದ ವೃತ್ತಾಂತ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಕುಲು (ಹಿಮಾಚಲ ಪ್ರದೇಶ) – ಸನಾತನದ ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಹೇಳಿದಂತೆ ೧೯ ಜೂನ್ ೨೦೨೧ ರಂದು ದೇವಭೂಮಿ ಹಿಮಾಚಲ ಪ್ರದೇಶದ ಪ್ರಯಾಣವನ್ನು ಆರಂಭಿಸಿದರು. ಸಪ್ತರ್ಷಿಗಳು ಹೇಳಿದಂತೆ ಈ ಪ್ರಯಾಣದಲ್ಲಿ ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹಿಮಾಚಲ ಪ್ರದೇಶದಲ್ಲಿನ ಕುಲು ಜಿಲ್ಲೆಯ ವಿವಿಧ ದೈವೀ ಸ್ಥಾನಗಳ ದರ್ಶನವನ್ನು ಪಡೆದರು ಮತ್ತು ‘ಹಿಂದೂ ರಾಷ್ಟ್ರದ ಸ್ಥಾಪನೆಯು ಶೀಘ್ರಗತಿಯಲ್ಲಿ  ಆಗಬೇಕು ಮತ್ತು ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಬೇಕು’, ಎಂದು ಪ್ರಾರ್ಥನೆಯನ್ನು ಮಾಡಿದರು. ಇಂತಹ ಈ ದೈವೀ ಕ್ಷೇತ್ರದಲ್ಲಿನ ಕುಲು ಕಣಿವೆ ಯಲ್ಲಿನ ‘ಬಿಜಲಿ ಮಹಾದೇವ’ ಮತ್ತು `ಬೇಖಲಿ ಮಾತಾ’ ಈ ಎರಡು ಸ್ಥಾನಗಳು ವೈಶಿಷ್ಟ್ಯಪೂರ್ಣವಾಗಿವೆ. ಈ ಎರಡು ಸ್ಥಾನಗಳ ವೃತ್ತಾಂತ….

ಕುಲು ಕಣಿವೆಯ ಆಧ್ಯಾತ್ಮಿಕ ಮಹತ್ವ

ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಕುಲು ಎಂಬ ಹೆಸರಿನ ಒಂದು ನಗರವಿದೆ. ಈ ನಗರದ ನಾಲ್ಕೂ ದಿಕ್ಕುಗಳಲ್ಲಿ ಅನೇಕ ದೈವೀ ಸ್ಥಾನಗಳಿವೆ. ಕುಲು ಎಂದರೆ ಹಿಂದಿನ ಕಾಲದಲ್ಲಿನ `ಕುಲಾಂತಪೀಠ’ ! ಎಲ್ಲಿ ಮನುಷ್ಯರ ಕುಲವು ಮುಗಿಯುತ್ತದೆಯೋ ಮತ್ತು ದೇವಕುಲ ಅಂದರೆ ದೇವತೆಗಳ ನಿವಾಸಸ್ಥಾನ ಪ್ರಾರಂಭವಾಗುತ್ತದೆಯೋ, ಅದೆಂದರೆ ‘ಕುಲಾಂತಪೀಠ’ ! ಇಂತಹ ಕುಲು ಪ್ರದೇಶದಲ್ಲಿ ಕುಲುಗಳ ಕಣಿವೆ ಇದೆ. ಈ ಕಣಿವೆಯ ಎಡಬದಿಗೆ ಮತ್ತು ಬಲಬದಿಗೆ ದೊಡ್ಡ ಬೆಟ್ಟಗಳಿವೆ. ಬಲಬದಿಗಿರುವ ಬೆಟ್ಟದ ಮೇಲೆ ಭಗವಾನ ಶಿವ ‘ಬಿಜಲಿ ಮಹಾದೇವ’ ಎಂಬ ಹೆಸರಿನಿಂದ ಮತ್ತು ಎಡಬದಿಗಿರುವ ಬೆಟ್ಟದ ಮೇಲೆ ದೇವಿ ಪಾರ್ವತಿಯು ‘ಬೆಖಲಿಮಾತಾ’ ಎಂಬ ಹೆಸರಿನಿಂದ ವಿರಾಜಮಾನರಾಗಿದ್ದಾರೆ. ‘ಬಿಜಲಿ ಮಹಾದೇವ’ ಮತ್ತು ‘ಬೆಖಲಿಮಾತಾ’ ಈ ಇಬ್ಬರೂ ದೇವತೆಗಳು ಕುಲು ಕಣಿವೆಯ ಅಧಿಷ್ಠಾತ್ರಿ ದೇವತೆಗಳಾಗಿದ್ದಾರೆ.

ಶಿವನ ಕ್ರೋಧದಿಂದ ಉತ್ಪನ್ನನಾದ ‘ಜಾಲಂಧರ’ ನ ಕಥೆ ಮತ್ತು ‘ಬಿಜಲಿ ಮಹಾದೇವ’ ಹಾಗೂ ‘ಬೆಖಲೀಮಾತಾ’ ಇವರ ಸ್ಥಾನಮಹಾತ್ಮೆ

ಒಮ್ಮೆ ಇಂದ್ರನಿಗೆ ಅವನ ಅಹಂಕಾರಕ್ಕಾಗಿ ಶಿಕ್ಷೆಯನ್ನು ನೀಡಲು ಭಗವಾನ ಶಿವನು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ; ಆದರೆ ಇಂದ್ರನು ತಕ್ಷಣ ಭಗವಾನ ಶಿವನ ಚರಣಗಳಲ್ಲಿ ಶರಣಾಗತನಾಗಿ ಕ್ಷಮೆಯಾಚನೆ ಮಾಡುತ್ತಾನೆ. ಭಗವಾನ ಶಿವನು ಅವನ ಮೂರನೇ ಕಣ್ಣನ್ನು ತೆರೆದಿರುವುದರಿಂದ ಅದರಿಂದ ಹೊರಗೆ ಬಂದಿರುವ ಕ್ರೋಧಾಗ್ನಿಯನ್ನು ಶಿವನು ಸಮುದ್ರದಕಡೆಗೆ ಕಳುಹಿಸುತ್ತಾನೆ. ಇದರಿಂದ ಇಂದ್ರದೇವನು ಬದುಕುತ್ತಾನೆ. ಸಮುದ್ರದಲ್ಲಿ ಹೋಗಿರುವ ಶಿವನ ಕ್ರೋಧಾಗ್ನಿಯಿಂದ ಶಿವಸ್ವರೂಪ ಜಾಲಂಧರ ಎಂಬ ಹೆಸರಿನ ಅಸುರನು ಉತ್ಪನ್ನನಾಗುತ್ತಾನೆ. ಅವನು ಶಿವನಂತೆ ತೇಜಸ್ವಿ ಮತ್ತು ಮಹಾಶಕ್ತಿವಂತನಾಗಿರುತ್ತಾನೆ. ಅವನು ಅಸುರರ ರಾಜನಾಗುತ್ತಾನೆ. ಜಾಲಂಧರನ ಪತ್ನಿ ವೃಂದಾ ಇವಳು ಕಾಲನೆಮಿಯ ಪುತ್ರಿ ಹಾಗೂ ಪತಿವ್ರತೆಯಾಗಿರುತ್ತಾಳೆ. ಜಾಲಂಧರನ ಅಹಂಕಾರವು ಹೆಚ್ಚಾಗಿ ಅವನು ದೇವಲೋಕದ ಮೇಲೆಯೇ ಆಕ್ರಮಣ ಮಾಡುತ್ತಾನೆ ಮತ್ತು ಎಲ್ಲ ದೇವತೆಗಳನ್ನು ಸೋಲಿಸುತ್ತಾನೆ.

ಅಸುರನಿಗೆ ದೇವಿ ಪಾರ್ವತಿಯು ‘ಭುವನೇಶ್ವರಿ’ಯ ರೂಪವನ್ನು ತೋರಿಸಿ ಅವನನ್ನು ಓಡಿಸಿದಳು, ಆ ಬೆಖಲೀಮಾತೆಯ (ಭುವನೇಶ್ವರಿ ದೇವಿಯ) ಸ್ಥಾನ ಮತ್ತು ವರ್ತುಲದಲ್ಲಿ ಬೆಖಲಿಮಾತೆಯ ಮೂರ್ತಿಯನ್ನು ತೋರಿಸಲಾಗಿದೆ
ಜಾಲಂಧರ ಅಸುರನಿಗೆ ದೇವೀ ಪಾರ್ವತಿಯು ಭುವನೇಶ್ವರಿಯ ರೂಪವನ್ನು ತೋರಿಸಿ ಎಲ್ಲಿ ಮಾಯವಾದಳೋ, ಆ ಗುಹೆಯ ಕಿರು ಪ್ರವೇಶದ್ವಾರದಲ್ಲಿ ನಿಂತಿರುವ ಶ್ರೀ. ವಿನಾಯಕ ಶಾನಭಾಗ !

ಬಿಜಲಿ ಮಹಾದೇವನ ಸ್ಥಾನ ಮಹಾತ್ಮೆ

ಪ್ರತಿ ೧೨ ವರ್ಷಕ್ಕೊಮ್ಮೆ ಸಿಡಿಲು ಬಡಿಯುವ ದೇವಸ್ಥಾನದ ಬದಿಗಿರುವ ಕಂಬ, ಸಿಡಿಲು ಶಿವಲಿಂಗದ ಮೇಲೆಯೂ ಬಡಿದು ನುಚ್ಚುನೂರಾಗುವ ಶಿವಲಿಂಗ (ವರ್ತುಲದಲ್ಲಿ ತೋರಿಸಲಾಗಿದೆ)

ಜಾಲಂಧರನ ಪಾಪದ ಕೊಡ ತುಂಬಿದ ನಂತರ ಅವನ ಅಂತ್ಯಸಮಯ ಹತ್ತಿರ ಬರುತ್ತದೆ. ಶಿವನು ಜಾಲಂಧರನೊಂದಿಗೆ ಯುದ್ಧವನ್ನು ಮಾಡುತ್ತಾನೆ. ಯುದ್ಧದಲ್ಲಿ ಶಿವನು ತ್ರಿಶೂಲದಿಂದ ಮತ್ತು ಸುದರ್ಶನಚಕ್ರದಿಂದ ಜಾಲಂಧರನನ್ನು ವಧಿಸುತ್ತಾನೆ. ವಧಿಸಿದ ನಂತರ ಜಾಲಂಧರನು ಶಿವನ ಮೂರನೇ ನೇತ್ರ ದೊಂದಿಗೆ ಏಕರೂಪವಾಗುತ್ತಾನೆ. ಶಿವ ಮತ್ತು ಜಾಲಂಧರ ಇವರ ಯುದ್ಧವಾದ ಸ್ಥಾನವೆಂದರೆ ‘ಬಿಜಲಿ ಮಹಾದೇವನ’ ಬೆಟ್ಟ ! ಇಲ್ಲಿ ಶಿವನ ಪ್ರತೀಕವೆಂದು ಒಂದು ಶಿವಲಿಂಗವಿದೆ. ದೇವಸ್ಥಾನದ ಎದುರು ೭೦ ಅಡಿ ಎತ್ತರದ ದೇವದಾರ ಮರದ ಕಂಬವಿದೆ. ಪ್ರತಿ ೧೨ ವರ್ಷಗಳಿಗೊಮ್ಮೆ ಈ ಕಂಬದ ಮೇಲೆ ಸಿಡಿಲು ಬೀಳುತ್ತದೆ ಮತ್ತು ನಂತರ ಅದು ದೇವಸ್ಥಾನವನ್ನು ಪ್ರವೇಶಿಸಿ ಶಿವಲಿಂಗದ ಮೇಲೆ ಅಪ್ಪಳಿಸುತ್ತದೆ. ಇದರಿಂದಾಗಿ ಶಿವಲಿಂಗದ ಅನೇಕ ತುಂಡು ಗಳಾಗಿ ಅವು ಆಚೀಚೆ ಹರಡುತ್ತವೆ. ಇದು ಘಟಿಸುವ ಹಿಂದಿನ ರಾತ್ರಿ, ದೇವಸ್ಥಾನದ ಅರ್ಚಕರ ಕನಸಿನಲ್ಲಿ ಆ ಶಿವಲಿಂಗದ ತುಂಡುಗಳು ಎಲ್ಲೆಲ್ಲಿ ಬಿದ್ದಿವೆ, ಎಂಬುದು ಕಾಣಿಸುತ್ತವೆ. ಮರುದಿನ ಬೆಳಗ್ಗೆ ಅರ್ಚಕರು ಅಲ್ಲಿ ಹೋಗುತ್ತಾರೆ ಮತ್ತು ಶಿವಲಿಂಗದ ತುಂಡುಗಳನ್ನು ಒಟ್ಟುಗೂಡಿಸಿ ಬೆಣ್ಣೆಯಿಂದ ಆ ಶಿವಲಿಂಗವನ್ನು ಪುರ್ನಸ್ಥಾಪನೆ ಮಾಡುತ್ತಾರೆ. ಈ ಶಿವಲಿಂಗದ ಮೇಲೆ ಸಿಡಿಲು ಬಡೆಯುವುದರಿಂದ ಶಿವನಿಗೆ `ಬಿಜಲಿ ಮಹಾದೇವ’ (ಹಿಂದಿಯಲ್ಲಿ ಬಿಜಲಿ ಅಂದರೆ ಮಿಂಚು) ಎಂಬ ಹೆಸರು ಬಿದ್ದಿದೆ, ಎಂದು ಹೇಳಲಾಗುತ್ತದೆ.

ಬೆಖಲಿಮಾತೆಯ ಸ್ಥಾನಮಹಾತ್ಮೆ

ಜಾಲಂಧರನು ಮೂರೂ ಲೋಕಗಳ ರಾಜನಾದ ಬಳಿಕ ಶಿವನ ಬಳಿ ಹೋಗುತ್ತಾನೆ ಮತ್ತು ಶಿವನಿಗೆ, ನೀನು ಸನ್ಯಾಸಿಯಾಗಿರುವೆ, ನಿನಗೆ ಅಲೌಕಿಕ ಸೌಂದರ್ಯವಿರುವ ಪಾರ್ವತಿದೇವಿಯು ಪತ್ನಿಯೆಂದು ಏಕೆ ಬೇಕು ? ನಾನು ಮೂರು ಲೋಕಗಳ ರಾಜನಾಗಿದ್ದು ಪಾರ್ವತಿಯು ನನ್ನ ರಾಣಿಯಾಗಿರಬೇಕು, ಎಂದು ಹೇಳುತ್ತಾನೆ. ಇದರ ನಂತರ ಜಾಲಂಧರನು ಪಾರ್ವತಿಯ ಬಳಿಗೆ ಹೋಗುತ್ತಾನೆ ಮತ್ತು ಅವಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ. ಆಗ ದೇವಿ ಪಾರ್ವತಿಯು ‘ಭುವನೇಶ್ವರಿ’ಯ ರೂಪವನ್ನು ತಾಳುತ್ತಾಳೆ. ಆ ರೂಪವನ್ನು ನೋಡಿ ಜಾಲಂಧರನು ಹೆದರುತ್ತಾನೆ ಮತ್ತು ಅಲ್ಲಿಂದ ಓಡಿ ಹೋಗುತ್ತಾನೆ. ಪಾರ್ವತಿದೇವಿಯು ಎಲ್ಲಿ ಜಾಲಂಧರನಿಗೆ  ಭುವನೇಶ್ವರಿ ರೂಪವನ್ನು ತೋರಿಸಿದಳೋ, ಆ ಸ್ಥಾನವೆಂದರೆ ‘ಬೆಖಲಿಮಾತಾ’ ಆಗಿದೆ !    ಈ ಸ್ಥಳದಲ್ಲಿ ಈಗಲೂ ಪಾರ್ವತಿಮಾತೆಯ ‘ಭುವನೇಶ್ವರಿ’ ರೂಪದ ಪೂಜೆಯನ್ನು ಮಾಡಲಾಗುತ್ತದೆ. ಸ್ಥಳೀಯ ಜನರು ಅವಳನ್ನು ‘ಬೆಖಲಿಮಾತಾ’ ಎಂಬ ಹೆಸರಿನಿಂದ ಕರೆಯುತ್ತಾರೆ.

ಶ್ರೀ. ವಿನಾಯಕ ಶಾನಭಾಗ

ಮುಖ್ಯಾಂಶಗಳು

೧. ಬಿಜಲಿ ಮಹಾದೇವನ ಸ್ಥಾನದ ಬಳಿ ಹೋಗಲು ಕುಲು ನಗರದೊಳಗಿನಿಂದ ಬೆಟ್ಟದ ಮೇಲೆ ೨೨ ಕಿ.ಮೀ. ದೂರ ವಾಹನದಲ್ಲಿ ಹೋಗಬೇಕಾಗುತ್ತದೆ ಮತ್ತು ಕೊನೆಗೆ ಒಂದೂವರೆ ಕಿ.ಮೀ. ಬೆಟ್ಟದ ಮೇಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಪ್ರಯಾಣದಲ್ಲಿರುವ ಸಾಧಕರಿಗೆ ಈ ಎತ್ತರದ ದಾರಿಯು ಅತ್ಯಂತ ಆನಂದಮಯವಾಗಿತ್ತು ಮತ್ತು ಅದನ್ನು ಸುಖರೂಪದಿಂದ ಏರಲು ಸಾಧ್ಯವಾಯಿತು ಎಂಬ ಅನುಭೂತಿ ಬಂದಿತು.

೨. ಬೆಖಲಿಮಾತೆಯ ದೇವಸ್ಥಾನದಲ್ಲಿ ದಶಮಹಾವಿದ್ಯಾ, ದಶಾವತಾರ ಮತ್ತು ರಾಮಾಯಣ-ಮಹಾಭಾರತದಲ್ಲಿನ ಪ್ರಸಂಗಗಳ ಸುಂದರ ಚಿತ್ರಗಳನ್ನು ಚಿತ್ರಿಸಲಾಗಿದೆ. ದೇವಿಯ ದೇವಸ್ಥಾನದ ಹತ್ತಿರ ದೇವಿಯು ಎಲ್ಲಿ ಅಂತರ್ಧಾನವಾದಳೋ (ಮಾಯವಾದಳೋ) ಆ ಗುಹೆ ಇದೆ.

೩. ‘ಬೆಖಲಿಮಾತಾ’ ಇವಳು ಕುಲು ನಗರದ ಸ್ಥಾನದೇವತೆಯೂ ಆಗಿದ್ದಾಳೆ. ಕುಲುವಿನಲ್ಲಿ ನಡೆಯುವ `ಕುಲು ದಸರಾ’ ಇದು ಇಡೀ ಹಿಮಾಚಲ ಪ್ರದೇಶದಲ್ಲಿ ಪ್ರಸಿದ್ಧವಾಗಿದೆ. ‘ಬೆಖಲಿಮಾತೆ’ಯ ಆಜ್ಞೆಯನ್ನು ಪಡೆದ ನಂತರವೇ ‘ಕುಲು ದಸರಾ’ ಆರಂಭವಾಗುತ್ತದೆ.

– ಶ್ರೀ. ವಿನಾಯಕ ಶಾನಭಾಗ, ಹಿಮಾಚಲ ಪ್ರದೇಶ

ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮಾಡಿದ ದೈವೀ ಪ್ರವಾಸದಿಂದಾಗಿ ನಮಗೆ ಇತಿಹಾಸದಲ್ಲಿ ಅಡಗಿದ ದೈವೀ ಸಂಗತಿಗಳ ದರ್ಶನವಾಗುತ್ತಿದೆ ! ಅದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !