ಚೀನಾ ರಾಯಭಾರಿ ಕಚೇರಿಯ ವಕ್ತಾರ ಯು ಜಿಂಗ ಅವರಿಂದ ಭಾರತಕ್ಕೆ ಕರೆ!
ಬೀಜಿಂಗ (ಚೀನಾ) – ಟ್ರಂಪ್ ಆಡಳಿತ ಹೇರಿದ ಆಮದು ಸುಂಕದಿಂದ ಎದುರಾದ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಚೀನಾ ಒಟ್ಟಾಗಿ ಬರಬೇಕು. ಚೀನಾ-ಭಾರತ ಆರ್ಥಿಕ ವ್ಯಾಪಾರ ಸಂಬಂಧವು ಪರಸ್ಪರ ಲಾಭದ ಮೇಲೆ ಆಧಾರಿತವಾಗಿದೆ. ಅಮೇರಿಕ ಆಮದು ಸುಂಕವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ನಾವು ತೊಂದರೆಗಳನ್ನು ಎದುರಿಸುತ್ತಿದ್ದೇವೆ. ಈ ತೊಂದರೆಗಳನ್ನು ಎದುರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು ಎಂದು ಚೀನಾದ ಭಾರತದಲ್ಲಿನ ರಾಯಭಾರಿ ಕಚೇರಿಯ ವಕ್ತಾರ ಯು ಜಿಂಗ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಕರೆ ನೀಡಿದ್ದಾರೆ.
ವ್ಯಾಪಾರ ಯುದ್ಧದಲ್ಲಿ ಅಥವಾ ಆಮದು ಸುಂಕ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ ಎಂದು ಯು ಜಿಂಗ ಅವರು ಪೋಸ್ಟನಲ್ಲಿ ಹೇಳಿದ್ದಾರೆ. ಎಲ್ಲಾ ದೇಶಗಳು ಪರಸ್ಪರ ಚರ್ಚೆಯ ತತ್ವಗಳನ್ನು ಪಾಲಿಸಬೇಕು. ಅದರ ಜೊತೆಗೆ ಬಹುಪಕ್ಷೀಯತೆಯನ್ನು ಬೆಂಬಲಿಸಬೇಕು. ಹಾಗೆ ಮಾಡುವಾಗ ನಾವು ಸರ್ವಾಧಿಕಾರಿ ಧೋರಣೆಯನ್ನು ಒಟ್ಟಾಗಿ ವಿರೋಧಿಸಬೇಕು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಅಮೇರಿಕೆಯಿಂದ ಪಾಠ ಕಲಿತ ನಂತರ ಚೀನಾಕ್ಕೆ ಭಾರತದ ನೆನಪಾಗಿದೆ, ಇಲ್ಲದಿದ್ದರೆ ಚೀನಾ ಭಾರತಕ್ಕೆ ಎಷ್ಟು ಸಾಧ್ಯವೋ ಅಷ್ಟು ತೊಂದರೆ ಕೊಡುವ ಪ್ರಯತ್ನ ಮಾಡುತ್ತಲೇ ಇದೆ. ಚೀನಾದ ಆಮದು ಸುಂಕದಿಂದ ಆಗುವ ನಷ್ಟವು ಭಾರತಕ್ಕೆ ಲಾಭದಾಯಕವಾಗಿರುವುದರಿಂದ ಭಾರತ ಈ ಕರೆಯನ್ನು ನಿರ್ಲಕ್ಷಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ! |