ಕೊಯಂಬತ್ತೂರು (ತಮಿಳುನಾಡು) ಇಲ್ಲಿ ಪಾದ್ರಿಯಿಂದ 2 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ

ಕೊಯಂಬತ್ತೂರು (ತಮಿಳುನಾಡು) – ಇಲ್ಲಿನ ಪಾದ್ರಿ ಜಾನ ಜೆಬರಾಜ್ (37 ವರ್ಷ) ಎಂಬಾತನ ವಿರುದ್ಧ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಾಖಲಾಗಿದೆ. ಜೆಬರಾಜ್ ಇಲ್ಲಿನ ಕಿಂಗ್ಸ್ ಜನರೇಷನ ಚರ್ಚ್‌ನ ಪಾದ್ರಿಯಾಗಿದ್ದಾನೆ. ಪಾದ್ರಿ ಜೆಬರಾಜ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಶೋಧಕ್ಕಾಗಿ ತಂಡವನ್ನು ರಚಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜಾನ ಜೆಬರಾಜ್ ಜಿಎನ್ ಮಿಲ್ಸ್ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ 14 ಮತ್ತು 17 ವರ್ಷ ವಯಸ್ಸಿನ 2 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. 17 ವರ್ಷದ ಬಾಲಕಿ ಅನಾಥೆಯಾಗಿದ್ದಾಳೆ. ಆಕೆಯನ್ನು ಪಾದ್ರಿಯ ಅತ್ತೆಯವರು ದತ್ತು ತೆಗೆದುಕೊಂಡಿದ್ದರು, ಆದರೆ 14 ವರ್ಷದ ಸಂತ್ರಸ್ತೆ ಆತನ ನೆರೆಮನೆಯಲ್ಲಿ ವಾಸಿಸುತ್ತಿದ್ದಳು. ಕಳೆದ ವರ್ಷ ಜಾನ್ ಮನೆಯಲ್ಲಿ ಔತಣಕೂಟವನ್ನು ಆಯೋಜಿಸಲಾಗಿತ್ತು. ಇಬ್ಬರೂ ಸಂತ್ರಸ್ತ ಬಾಲಕಿಯರು ಅದರಲ್ಲಿ ಭಾಗವಹಿಸಲು ಬಂದಿದ್ದರು. ಈ ಸಮಯದಲ್ಲಿ ಅವರ ಮೇಲೆ ಅತ್ಯಾಚಾರ ನಡೆದಿದೆ. ಪಾದ್ರಿ ಜೆಬರಾಜ್ ಈ ಬಾಲಕಿಯರಿಗೆ ‘ನಡೆದ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುತ್ತೇನೆ’ ಎಂದು ಬೆದರಿಕೆ ಹಾಕಿದ್ದನು. ಆದಾಗ್ಯೂ, 14 ವರ್ಷದ ಸಂತ್ರಸ್ತೆ ನಂತರ ತನ್ನ ಪೋಷಕರಿಗೆ ಘಟನೆಯ ಬಗ್ಗೆ ತಿಳಿಸಿದಳು. ಇದರ ನಂತರ ಆಕೆಯ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರ ದೃಷ್ಟಿಯಲ್ಲಿ ತಲೆಮರೆಸಿಕೊಂಡಿರುವ ಪಾದ್ರಿ ಜೆಬರಾಜ್ ಪ್ರಾರ್ಥನಾ ಸಭೆಯಲ್ಲಿ ಹಾಜರು!

ವಿಶೇಷವೆಂದರೆ, ಪೊಲೀಸರ ದೃಷ್ಟಿಯಲ್ಲಿ ಪಾದ್ರಿ ಜೆಬರಾಜ್ ತಲೆಮರೆಸಿಕೊಂಡಿದ್ದರೂ ಮಾರ್ಚ್ 31 ರಂದು ಚೆನ್ನೈನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಹಾಜರಿದ್ದನು. ಆತ ಅದರ ವಿಡಿಯೋವನ್ನು ಇನ್ ಸ್ಟಾಗ್ರಾಮ್ ಮೇಲೆಯೂ ಪ್ರಸಾರ ಮಾಡಿದ್ದಾನೆ. (ಇದರಿಂದ ಪೊಲೀಸರು ಪಾದ್ರಿ ಜೆಬರಾಜನನ್ನು ಬೆಂಬಲಿಸುತ್ತಿರುವುದು ಕಂಡುಬರುತ್ತದೆ. ಹಾಗಿದ್ದಲ್ಲಿ, ಅಂತಹ ಪೊಲೀಸರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಪಾದ್ರಿ ಎಂದರೆ ಸಭ್ಯ ಮತ್ತು ಸಂಸ್ಕೃತ ಎಂದು ಈ ದೇಶದಲ್ಲಿ ನಿರ್ಮಿಸಲಾಗಿರುವ ಚಿತ್ರಣ ಎಷ್ಟು ಪೊಳ್ಳಾಗಿದೆ ಎಂಬುದು ಇಂತಹ ನಿರಂತರವಾಗಿ ದೇಶ-ವಿದೇಶಗಳಲ್ಲಿ ಬಹಿರಂಗಗೊಳ್ಳುತ್ತಿರುವ ಘಟನೆಗಳಿಂದ ತಿಳಿದುಬರುತ್ತದೆ; ಆದರೆ ಇದರ ಬಗ್ಗೆ ತಥಾಕಥಿತ ಜಾತ್ಯತೀತವಾದಿಗಳು, ಪ್ರಗತಿ(ಅಧೋ)ಪರರು ಎಂದಿಗೂ ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಿರಿ!