ಅಮೇರಿಕಾದಿಂದ ಚೀನಾಗೆ ಮರ್ಮಾಘಾತ ! : ಆಮದು ಸುಂಕ ಶೇ. 34 ರಿಂದ ಶೇ. 104 ಕ್ಕೆ ಏರಿಕೆ!

ವಾಷಿಂಗ್ಟನ್ (ಅಮೇರಿಕ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಮದು ಸುಂಕ ವಿಧಿಸಿರುವುದು ಜಗತ್ತಿನಾದ್ಯಂತ ಸಂಚಲನ ಉಂಟು ಮಾಡುತ್ತಿರುವಾಗ, ಈಗ ಟ್ರಂಪ್ ಅವರು ಚೀನಾದ ಮೇಲಿನ ಸುಂಕವನ್ನು ತೀವ್ರವಾಗಿ ಹೆಚ್ಚಿಸಿದ್ದಾರೆ. ಈ ಶುಲ್ಕವನ್ನು ಶೇಕಡಾ 34 ರಿಂದ ಶೇಕಡಾ 104 ಕ್ಕೆ ಹೆಚ್ಚಿಸಲಾಗಿದೆ. ಇದು ದೊಡ್ಡ ಪರಿಣಾಮಗಳನ್ನು ಬೀರುವುದು ಕಂಡು ಬರುತ್ತಿದೆ.
ಚೀನಾ ಕೂಡ ಪ್ರತ್ಯುತ್ತರವಾಗಿ ಅಮೆರಿಕದ ಮೇಲೆ ಶೇಕಡಾ 34 ರಷ್ಟು ತೆರಿಗೆ ವಿಧಿಸಿದೆ!

ಟ್ರಂಪ್ ಅವರು ಚೀನಾದ ಮೇಲೆ ಶೇ.34 ರಷ್ಟು ತೆರಿಗೆ ವಿಧಿಸಿದ ನಂತರ, ಚೀನಾ ಕೂಡ ಪ್ರತಿಕ್ರಿಯೆಯಾಗಿ ಅಮೆರಿಕದ ಮೇಲೆ ಶೇ.34 ರಷ್ಟು ತೆರಿಗೆಯನ್ನು ಘೋಷಿಸಿತು. ಇದರಿಂದ ಕೆರಳಿದ ಟ್ರಂಪ್, ‘ಏಪ್ರಿಲ್ 8 ರೊಳಗೆ ಚೀನಾ ಈ ಹೆಚ್ಚಳವನ್ನು ಹಿಂತೆಗೆದುಕೊಳ್ಳದಿದ್ದರೆ, ಶೇಕಡಾ 52 ರಷ್ಟು ತೆರಿಗೆ ವಿಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು; ಆದರೆ, ಚೀನಾ ಹಿಂದೆ ಸರಿಯದ ಕಾರಣ, ಟ್ರಂಪ್ ಅವರು ಆಮದು ಸುಂಕವನ್ನು ಶೇಕಡಾ 52 ರ ಬದಲು ದುಪ್ಪಟ್ಟು, ಅಂದರೆ ಶೇಕಡಾ 104 ರಷ್ಟು ವಿಧಿಸುವುದಾಗಿ ಘೋಷಿಸಿದರು.

ಸಂಪಾದಕೀಯ ನಿಲುವು

ಶತ್ರು ದೇಶಕ್ಕೆ ಪಾಠ ಕಲಿಸುವುದು ಅಂದರೆ ಇದೇ ! ಗಾಂಧಿವಾದಿ ದೇಶ ಇಂತಹ ಬೆದರಿಕೆಯನ್ನು ಎಂದಿಗೂ ತೋರಿಸಲು ಸಾಧ್ಯವಿಲ್ಲ, ಎಂಬುದು ಅಷ್ಟೇ ಸತ್ಯ!