ಭಾರತದ ಭೂಮಿ, ಬಾಂಗ್ಲಾದೇಶದ ವ್ಯಾಪಾರಕ್ಕೆ ಫುಲ್ ಸ್ಟಾಪ್!

ಭಾರತದಿಂದ ಬಾಂಗ್ಲಾದೇಶಕ್ಕೆ ಪಾಠ !

ನವದೆಹಲಿ: ಭಾರತದ ಈಶಾನ್ಯ ರಾಜ್ಯಗಳು ಭೂಮಿಯಿಂದ ಆವೃತವಾಗಿದ್ದು, ನಾವು ಸಮುದ್ರ ಮಾರ್ಗದ ಮೂಲಕ ತಲುಪಬಹುದು; ಆದ್ದರಿಂದ ಚೀನಾವು ಬಾಂಗ್ಲಾದೇಶದೊಂದಿಗೆ ವ್ಯಾಪಾರವನ್ನು ಹೆಚ್ಚಿಸಬೇಕು ಎಂದು ಚೀನಾಕ್ಕೆ ಹೋಗಿ ಕರೆ ನೀಡಿದ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಸಲಹೆಗಾರ ಮೊಹಮ್ಮದ್ ಯೂನಸ್ ಅವರಿಗೆ ಭಾರತವು ಪಾಠ ಕಲಿಸಿದೆ. ಬಾಂಗ್ಲಾದೇಶವು ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್‌ನೊಂದಿಗೆ ಭಾರತದ ಭೂಮಿಯನ್ನು ಬಳಸಿಕೊಂಡು ನಡೆಸುತ್ತಿರುವ ವ್ಯಾಪಾರವನ್ನು ಭಾರತವು ಈಗ ಬ್ರೇಕ್ ಹಾಕಿದೆ. ಇದರಿಂದ ಬಾಂಗ್ಲಾದೇಶದ ಆಮದು ಮತ್ತು ರಫ್ತು ಎರಡೂ ಸ್ಥಗಿತಗೊಳ್ಳಲಿದೆ.

ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯು ಏಪ್ರಿಲ್ 8 ರಂದು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ, ಬಾಂಗ್ಲಾದೇಶಕ್ಕೆ ರಫ್ತು ಸರಕುಗಳ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ. ಈ ಕುರಿತಾದ ಜೂನ್29, 2020 ರ ಅಧಿಸೂಚನೆಯನ್ನು ರದ್ದುಗೊಳಿಸಲಾಗಿದೆ. ಈ ಅಧಿಸೂಚನೆಯ ಮೂಲಕ, ಬಾಂಗ್ಲಾದೇಶವು ಭಾರತೀಯ ಗಡಿಯ ಮೂಲಕ ಮೂರನೇ ದೇಶಕ್ಕೆ ರಫ್ತು ಮಾಡಲು ಅನುಮತಿ ನೀಡಲಾಗುತ್ತಿತ್ತು.

ಈವರೆಗೆ, ಬಾಂಗ್ಲಾದೇಶದ ರಫ್ತು ಸರಕುಗಳನ್ನು ಕಂಟೈನರ್‌ಗಳು ಅಥವಾ ಮುಚ್ಚಿದ ಟ್ರಕ್‌ಗಳಲ್ಲಿ ಮೂರನೇ ದೇಶದ ಬಂದರುಗಳಿಗೆ ಕೊಂಡೊಯ್ಯಲಾಗುತ್ತಿತ್ತು ಮತ್ತು ಈ ಕಂಟೈನರ್‌ಗಳು ಅಥವಾ ಟ್ರಕ್‌ಗಳನ್ನು ಭಾರತೀಯ ಭೂಮಿಯ ಮೂಲಕ, ಅಂದರೆ ಭಾರತೀಯ ಭೂ ಗಡಿ ಕಸ್ಟಮ್ಸ್ ಸ್ಟೇಷನ್ ಮೂಲಕ ಇತರ ದೇಶಗಳಿಗೆ ಕೊಂಡೊಯ್ಯಲಾಗುತ್ತಿತ್ತು. ಈ ಸೌಲಭ್ಯದ ಮೂಲಕ, ಅದು ಭೂತಾನ್, ನೇಪಾಳ ಮತ್ತು ಮ್ಯಾನ್ಮಾರ್‌ಗೆ ಸುಲಭವಾಗಿ ರಫ್ತು ಮಾಡಬಹುದಾಗಿತ್ತು.

ಸಂಪಾದಕೀಯ ನಿಲುವು

ಭಾರತಕ್ಕೆ ಇದು ಸಾಧ್ಯವಿದ್ದಾಗ, ಮೊದಲೇಕೆ ಮಾಡಲಿಲ್ಲ? ಈ ರೀತಿ ಭಾರತವು ಬಾಂಗ್ಲಾದೇಶವನ್ನು ಹದ್ದುಬಸ್ತಿನಲ್ಲಿಡಬಾರದೇ ?