ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!

ಈ ವರ್ಷ ಕೆನಡಾಕ್ಕೆ ಬರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 60 ರಷ್ಟು ಕಡಿಮೆಯಾಗಿದೆ. ಕೆನಡಾಕ್ಕೆ ಬರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೂ ಗಮನಾರ್ಹವಾಗಿ ಕುಸಿದಿದೆ. ಭಾರತೀಯ ವಿದ್ಯಾರ್ಥಿಗಳು ಈಗ ಕೆನಡಾದ ಬದಲು ಇತರ ದೇಶಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!

ರಿಕ್ಟರ್ ಮಾಪಕದಲ್ಲಿ 7.2 ಮತ್ತು ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯ ಭೂಕಂಪವು ಜೂನ್ 24 ರ ರಾತ್ರಿ ವೆನೆಜುವೆಲಾವನ್ನು ಅಪ್ಪಳಿಸಿತು. ಆರಂಭಿಕ ಆಘಾತಗಳ ನಂತರ ಸಂಭವಿಸುವ ಭೂಕಂಪದ ನಂತರದ ಕಂಪನಗಳಿಂದಾಗಿ ಹಾನಿಗೊಳಗಾದ ಕಟ್ಟಡಗಳು ಕುಸಿಯುವ ಅಪಾಯವಿದೆ.

೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake

ದಕ್ಷಿಣ ಅಮೆರಿಕಾ ಖಂಡದ ದೇಶವಾದ ವೆನೆಜುವೆಲಾದಲ್ಲಿ ಜೂನ್ ೨೪ ರಂದು ರಾತ್ರಿ ೧೦ ಗಂಟೆಗೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಿಂದಾಗಿ ಭಾರಿ ಪ್ರಮಾಣದ ಹಾನಿಯಾಗಿದೆ. ಕೇವಲ ೩೯ ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ ಈ ಭೂಕಂಪಗಳ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ೭.೨ ಮತ್ತು ೭.೫ ರಷ್ಟು ದಾಖಲಾಗಿದೆ.

ಕೊಲಂಬಿಯಾ: ಬಸ್ ಬಾಂಬ್ ಸ್ಫೋಟ: 13 ಪ್ರಯಾಣಿಕರ ಸಾವು, 38 ಜನರಿಗೆ ಗಾಯ!

ಪ್ರಾಂತ್ಯದ ಗವರ್ನರ್ ಆಕ್ಟಾವಿಯೊ ಗುಜಮಾನ್ ಅವರು ಈ ಘಟನೆಯ ಕುರಿತು ಮಾತನಾಡಿ, ರಸ್ತೆಯಲ್ಲಿ ಸ್ಫೋಟಕಗಳನ್ನು ಹೂತಿಡಲಾಗಿತ್ತು ಮತ್ತು ಬಸ್ ಅಲ್ಲಿಂದ ಹಾದು ಹೋಗುವಾಗ ‘ರಿಮೋಟ್’ ಸಹಾಯದಿಂದ ಸ್ಫೋಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೆಕ್ಸಿಕೋ ಸರಕಾರದ ಮಿಲಿಟರಿ ಕಾರ್ಯಾಚರಣೆ: ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರ ‘ಎಲ್ ಮೆಂಚೊ’ ಹತ Mexico Drug Cartel Boss Killed

ಮೆಕ್ಸಿಕೋ ಸೈನ್ಯವು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ದೇಶದ ಅತ್ಯಂತ ದೊಡ್ಡ ಮಾದಕವಸ್ತು ಕಳ್ಳಸಾಗಣೆದಾರ ನೆಮೆಸಿಯೊ ರುಬನ್ ಒಸೆಗುಯೆರಾ ಸರ್ವೆಂಟೆಸ್ ಉರ್ಫ್ ‘ಎಲ್ ಮೆಂಚೊ’ ನನ್ನು ಜಾಲಿಸ್ಕೋದಲ್ಲಿ ಹತ್ಯೆ ಮಾಡಲಾಗಿದೆ.

ಅಮೆರಿಕದ ಮಾತು ಕೇಳದಿದ್ದರೆ, ನಿಮ್ಮ ಸ್ಥಿತಿ ಮಡುರೊಗಿಂತಲೂ ಕೆಟ್ಟದಾಗಲಿದೆ ! Trump Threatens Venezuela’s Interim President

ವೆನೆಜುವೆಲಾದ ಹಿತದೃಷ್ಟಿಯಿಂದ ಅಮೆರಿಕ ಹೇಳಿದಂತೆ ನಡೆದುಕೊಳ್ಳದಿದ್ದರೆ, ನಿಮ್ಮ ಸ್ಥಿತಿ ಮಡುರೊಗಿಂತಲೂ ಕೆಟ್ಟದಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡೆಲ್ಸಿ ರೊಡ್ರಿಗಸ್ ಅವರಿಗೆ ಬೆದರಿಕೆ ಹಾಕಿದ್ದಾರೆ.

ವೆನೆಜುವೆಲಾ ಮೇಲೆ ಕೆಲ ಕಾಲ ಅಮೆರಿಕದ ನಿಯಂತ್ರಣವಿರಲಿದೆ! – ಡೊನಾಲ್ಡ್ ಟ್ರಂಪ್ Trump Controls Venezuela

ನಿಕೋಲಸ್ ಮಡುರೊ ಬಂಧನದ ಬಳಿಕ, ಅಮೆರಿಕವು ವೆನೆಜುವೆಲಾವನ್ನು ಕೆಲ ಕಾಲ ನಿಯಂತ್ರಿಸಿ ತೈಲ ನಿಕ್ಷೇಪಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕೆನಡಾ: ರಾಜನ ಮೇಲಿನ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲು ಸಿಖ್ ವಕೀಲರ ನಿರಾಕರಣೆ

ಡಿಸೆಂಬರ್ ೧೬ ರಂದು ನೀಡಿದ ಈ ಸರ್ವಾನುಮತದ ತೀರ್ಪಿನಲ್ಲಿ, ಇಂತಹ ಕಡ್ಡಾಯ ಪ್ರಮಾಣ ವಚನವು ‘ಕೆನಡಿಯನ್ ಚಾರ್ಟರ್ ಆಫ್ ರೈಟ್ಸ್ ಅಂಡ್ ಫ್ರೀಡಮ್ಸ್’ ನಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯವು ಒಪ್ಪಿಕೊಂಡಿದೆ.

ಚೀನಾ ಒಂದೆಡೆ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿದ್ದರೆ, ಇನ್ನೊಂದೆಡೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ!

ಸ್ವತಃ ಅಮೆರಿಕ ಇದಕ್ಕಿಂತ ಬೇರೆ ಏನು ಮಾಡುತ್ತಿದೆ? ಅಮೆರಿಕವು ಪಾಕಿಸ್ತಾನದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರರಲ್ಲಿ ಒಂದಾಗಿದೆ ಎಂಬುದನ್ನು ಅಮೆರಿಕ ಮರೆತಿದೆಯೇ? ಆದ್ದರಿಂದ ಭಾರತದ ದೃಷ್ಟಿಯಲ್ಲಿ ಅಮೆರಿಕ, ಚೀನಾ ಮತ್ತು ಪಾಕಿಸ್ತಾನ ಇವೆಲ್ಲವೂ ದೇಶದ ಶತ್ರುಗಳೇ ಆಗಿದ್ದಾರೆ.

ಪಾಕಿಸ್ತಾನ: ಸೇನಾ ಮುಖ್ಯಸ್ಥರ ಅಧಿಕಾರ ಹೆಚ್ಚಿಸುವ ಸಾಂವಿಧಾನಿಕ ತಿದ್ದುಪಡಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಿಂದ ಕಳವಳ ವ್ಯಕ್ತ !

ಪಾಕಿಸ್ತಾನದಲ್ಲಿ ಮಾಡಲಾದ 27ನೇ ಸಾಂವಿಧಾನಿಕ ತಿದ್ದುಪಡಿಯು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಅಗತ್ಯ ಕಾನೂನು ನಿಯಮಗಳನ್ನು ದುರ್ಬಲಗೊಳಿಸಬಹುದು.